ಅಂದು ಸೋಲಿನ ಅಂಚಿನಲ್ಲಿ ಇದ್ದ ರತನ್ ಟಾಟಾ ಗೆ ತುಂಬಿದ ಸಭೆಯಲ್ಲಿ ಈ ದೊಡ್ಡ ಕಾರ್ ಕಂಪೆನಿ ಮಾಡಿದ ಅವಮಾನ ಮಾಡಿದ ಪರಿಣಾಮ ಏನಾಯಿತು?

2,766

“Success is the best revenge” ಇಂಗ್ಲಿಷ್ ನಲ್ಲಿ ಹೇಳಿದ ಈ ಸಾಲು ಎಷ್ಟು ಅರ್ಥಗರ್ಭಿತ ವಾಗಿದೆ. ಜೀವನದಲ್ಲಿ ಸೋಲು ಸಹಜ ಆದರೆ ಅದುವೇ ಕೊನೆ ಅಲ್ಲ. ಜೀವನದಲ್ಲಿ ಗೆದ್ದ ಅಥವಾ ಯಶಸ್ಸು ಕಂಡ ಯಾವುದೇ ವ್ಯಕ್ತಿ ಇರಲಿ ಒಂದೇ ಪ್ರಯತ್ನದಲ್ಲಿ ಯಶಸ್ಸು ಕಂಡಿಲ್ಲ. ಬದಲಾಗಿ ಆತನ ಯಶಸ್ಸು ಮತ್ತು ಸೋಲಿನಿಂದ ಕಲಿತ ಪಾಠ ಆತನನ್ನು ಯಶಸ್ಸಿನ ಮೆಟ್ಟಿಲು ಏರಿಸುತ್ತದೆ. ಹಾಗೆಯೇ ನಡೆದ ಒಂದು ಘಟನೆ ಇದು ಹೌದು ಏನಿದು ಬನ್ನಿ ತಿಳಿಯೋಣ.

pc financial express
pc- financial express

ಹೌದು ಈ ಸಾಧನೆ ತೋರಿದ ಆ ವ್ಯಕ್ತಿ ಮತ್ಯಾರು ಅಲ್ಲ ರತನ್ ಟಾಟಾ. ಹೌದು ಟಾಟಾ ಕಂಪೆನಿಯ ಮಾಲೀಕರು ಇವರು. ದೇಶದ ಜನರು ಅತ್ಯಂತ ಪ್ರೀತಿಯಿಂದ ಕಾಣುವ ಸೌಮ್ಯ ಹೃದಯದ ವ್ಯಕ್ತಿತ್ವ ಇವರದ್ದು.ಹಾಗಾದರೆ ಏನಿದು ಕಥೆ ಈ ಟಾಟಾ ಕಂಪನಿಯದ್ದು ಬನ್ನಿ ತಿಳಿಯುವ. ಸ್ವದೇಶಿ ನಿರ್ಮಿತ ಕಾರೊಂದನ್ನು ಟಾಟಾ ಕಂಪನಿ ಭಾರತದ ಮಾರುಕಟ್ಟೆಗೆ ಪರಿಚಯಿಸಿದ ದಿನದಿಂದ ಶುರುವಾದ ಕಥೆ ಇದು , ಹೌದು ಡಿಸೆಂಬರ್ 30 1998 ರತನ್ ಟಾಟಾ ಅವರು ಸ್ವದೇಶಿ ನಿರ್ಮಿತ ಇಂಡಿಕಾ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ.

ಇದು ಅವರ ಕನಸಿನ ಯೋಜನೆ ಆಗಿತ್ತು ಭಾರತ ಸ್ವಾವಲಂಬಿ ಆಗಬೇಕು ಎಂದು ಈ ಯೋಜನೆಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಇದು ಸಫಲತೆ ಕಾಣಲಿಲ್ಲ ಬದಲಾಗಿ ಟಾಟಾ ಕಂಪನಿಯು ನಷ್ಟದ ಹಾಡಿ ಹಿಡಿದಿತ್ತು. ಎಷ್ಟೆಂದರೆ ಕಂಪನಿಯನ್ನು ಮಾರುವ ಪರಿಸ್ಥಿತಿಗೆ ಬಂದಿತ್ತು. ಎಲ್ಲರ ಸಲಹೆ ಮೇರೆಗೆ ರತನ್ ಟಾಟಾ ಅವರು ಮನಸಿಲ್ಲದಿದ್ದರು ತಮ್ಮ ಕಂಪನಿಯನ್ನು ಮಾರುವ ಯೋಜನೆಯನ್ನು ಮಾಡುತ್ತಾರೆ ಅದರಂತೆ ಅಮೆರಿಕಾದ ಕಾರ್ ತಯಾರಿಕಾ ಕಂಪನಿ ಫೋರ್ಡ್ ಮೋಟಾರ್ಸ್ ಜೊತೆ ಮಾತುಕತೆಗೆ ಎಂದು ಹೋಗುತ್ತಾರೆ.

3 ಗಂಟೆಗಳ ಕಾಲ ಫೋರ್ಡ್ ಕಂಪನಿಯ ಜೊತೆಗೆ ಮಾತುಕತೆ ನಡೆಸಲಾಯಿತು. ಆದರೆ ಫೋರ್ಡ್ ಕಂಪನಿ ಚೇರ್ಮನ್ ಬಿಲ್ ಫೋರ್ಡ್ ಅಂದು ಮಾಡಿದ ಒಂದು ತಪ್ಪು ಅದೇನೆಂದರೆ ತುಂಬಿದ ಸಭೆಯಲ್ಲಿ ರತನ್ ಟಾಟಾ ಅವರನ್ನು ಅವಮಾನಿಸಿದ್ದು. ಹೌದು ಅವರು ಎಲ್ಲರ ಸಮ್ಮುಖದಲ್ಲಿ ರತನ್ ಟಾಟಾ ಅವರಿಗೆ “ಈ ವ್ಯವಹಾರದ ಬಗ್ಗೆ ನಿಮಗೆ ಮಾಹಿತಿ ಇಲ್ಲವಾದರೆ ಯಾಕೆ ಈ ವ್ಯವಹಾರ ಮಾಡಿದಿರಿ? ನಾವು ನಿಮ್ಮ ಕಂಪನಿ ಖರೀದಿಸಿ ನಿಮಗೆ ದಯೆ ತೋರುತ್ತಿದ್ದೆವೆ ಅಷ್ಟೇ ” ಎಂದರು. ಆದರೆ ಈ ಮಾತು ರತನ್ ಟಾಟಾ ಅವರ ಹೃದಯಕ್ಕೆ ನಾಟಿತ್ತು. ರಾತ್ರೋ ರಾತ್ರಿ ಅವರು ಈ ಪ್ರಸ್ತಾವ ತಳ್ಳಿ ಹಾಕಿ ಭಾರತಕ್ಕೆ ವಾಪಸ್ಸಾದರು.

 

ವಾಪಸ್ಸು ಬಂದು ಸುಮ್ಮನಿರಲಿಲ್ಲ ಆದ ತಪ್ಪಿನ ಬಗ್ಗೆ ಚಿಂತನೆ ನಡೆಸಿದರು. ಮತ್ತೆ ತಮ್ಮ ಎಲ್ಲವನ್ನೂ ಧಾರೆ ಎರೆದು ಕಾರ್ ಉತ್ಪಾದನೆ ಮುಂದುವರೆಸಿದರು. ನೋಡ ನೋಡುತ್ತಲೇ ಟಾಟಾ ಕಾರ್ ಮಾರುಕಟ್ಟೆಯನ್ನು ವಶಪಡಿಸಿ ಕೊಳ್ಳಲು ಶುರು ಮಾಡಿತು. ನಷ್ಟದಲ್ಲಿದ್ದ ಕಂಪನಿ ನೋಡುತ್ತಲೇ ದೊಡ್ಡ ಹೆಮ್ಮರವಾಗಿ ನಿಂತಿತು. ಇದು ಸಾಧ್ಯ ಆಗಿದ್ದು ರತನ್ ಟಾಟಾ ಅವರ ಛಲದಿಂದ ಮಾತ್ರ ಆದರೆ ಅಂದು ಬಿಲ್ ಫೋರ್ಡ್ ಹೇಳಿದ ಮಾತುಗಳನ್ನು ಅವರಿಗೆ ಮರೆಯಲು ಆಗಲಿಲ್ಲ.

ಇತ್ತ ಟಾಟಾ ಕಾರುಗಳು ಮಾರುಕಟ್ಟೆ ಬೆಳೆಸುತ್ತಲೇ ಹೋಯಿತು ಅತ್ತ ಫೋರ್ಡ್ ತನ್ನ ಅಸ್ತಿತ್ವ ಕಳೆದು ಕೊಳ್ಳುತ್ತಾ ಹೋಯಿತು. ಅಂದು ರತನ್ ಟಾಟಾ ಇದ್ದ ಸ್ಥಿತಿಗೆ ಫೋರ್ಡ್ ಮೋಟಾರ್ಸ್ ಬಂತು. ಕೊನೆಗೆ 2008 ರಲ್ಲಿ ರತನ್ ಟಾಟಾ ಅವರು ಫೋರ್ಡ್ ಕಂಪನಿಯ ಜಾಗುವರ್ ಮತ್ತು ಲ್ಯಾಂಡ್ ರೋವರ್ ಕಾರುಗಳ ಹಕ್ಕನ್ನು ಖರೀದಿಸಿದರು. ಆದರೆ ಅಂದು ಬಿಲ್ ಫೋರ್ಡ್ ಮಾಡಿದ ಅವಮಾನ ಇವರು ಮಾಡಿಲ್ಲ. ಜೀವನದಲ್ಲಿ ಯಾರನ್ನು ಸೋತರೆಂದು ನೋಯಿಸಬೇಡಿ. ಜೀವನದಲ್ಲಿ ಈ ಕಥೆಯ ಸಾರವನ್ನು ಅಳವಡಿಸಿ ಕೊಂಡರೆ ಜೀವನ ಯಶಸ್ಸನ್ನು ಕಾಣುತ್ತದೆ.

Leave A Reply

Your email address will not be published.