ಅಂದು 80 ರೂಪಾಯಿಯ ಕಂಪನಿಯ ಮೌಲ್ಯ ಇಂದು 800 ಕೋಟಿ. ೪೫೦೦೦ ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿ ಯಾವುದು? ಅದರ ಉದ್ಯಮವೇನು ಗೊತ್ತೇ?

642

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಹೆಚ್ಚುತ್ತಿದೆ. ಯಾವಾಗ ಪ್ರಧಾನಿ ಮೋದಿ ಅವರು vocal for local ಎಂಬ ಮಂತ್ರ ಪಠಿಸಿದರೋ ಅಂದಿನಿಂದ ಈ ದೇಶೀಯ ಕಂಪನಿಗಳು ತಮ್ಮ ಹವಾ ತೋರುತ್ತಿದೆ. ಆದರೆ ನಾವು ಇಂದು ತಿಳಿಯಲು ಹೊರಟ ಈ ಕಂಪನಿ ಮಾತ್ರ 19ನೆಯ ಶತಮಾನದಲ್ಲಿ ಆರಂಭಗೊಂಡ ಒಂದು ಕಂಪನಿ ಮತ್ತು ಇದರ ಯಶೋಗಾಥೆ ಮಹಿಳಾ ಸಬಲೀಕರಣ ದ ಗುರಿಯನ್ನು ಹೊಂದಿತ್ತು. ಬನ್ನಿ ತಿಳಿಯೋಣ ಈ ಕಂಪನಿ ಬಗ್ಗೆ.

1959 ರ ಕಾಲಘಟ್ಟ ಅದು ಗುಜರಾತಿನ 7 ಮಹಿಳೆಯರು ಸೇರಿ ಆರಂಭ ಮಾಡಿದ ಕಂಪನಿ ಅದು. ಹೌದು ಇಡೀ ಮಹಿಳಾ ಸಮಾಜವನ್ನು ಸಬಲೀಕರಣ ಮಾಡಬೇಕು ಎಂಬ ನೆಲೆಯಿಂದ ಆರಂಭ ಗೊಂಡ ಉದ್ಯಮ ಇದು. ಕೋ ಆಪರೇಟಿವ್ ಮೂವ್ಮೆಂಟ್ ಎಂದರೂ ತಪ್ಪಾಗಲಾರದು. ಅದುವೇ ಹಪ್ಪಳ ಮಾಡುವ ಉದ್ಯಮ. ಹೌದು ನಾವು ನೀವೆಲ್ಲರೂ ಲಿಜ್ಜತ್ ಪಾಪಡ್ ಬಗ್ಗೆ ಕೇಳಿದ್ದೇವೆ. ಈ ಒಂದು ಹಪ್ಪಳದ ಜಾಹೀರಾತು ಇಡೀ ದಿನ ಟಿವಿಯಲ್ಲಿ ಬಂದ ನೆನಪು ಇನ್ನು ಹಾಗೆ ಇದೆ. ಹಳ್ಳಿಯ ಎಲ್ಲಾ ಮನೆ ಮನೆ ಗಳಲ್ಲು ಸ್ವ ಉದ್ಯಮ ಮಾಡುವ ಕನಸು ಬಿತ್ತಿದವರು ಇವರು. ಎಲ್ಲಾ ಮಹಿಳೆಯರು ತಮ್ಮ ಮನೆಯಿಂದಲೇ ಹಪ್ಪಳ ತಯಾರಿಸಿ ಒಣಗಿಸಿ ತಯಾರು ಮಾಡುತ್ತಿದ್ದರು.

ಕಂಪನಿ ಮನೆಗೆ ಹೋಗಿ ಹಪ್ಪಳ ಕಲೆಕ್ಟ್ ಮಾಡುತ್ತಿತ್ತು. ಮತ್ತು ಅದೇ ಸಮಯಕ್ಕೆ ಹಣ ಕೂಡ ಪಾವತಿ ಮಾಡುತ್ತಿತ್ತು. ಹೀಗೆ ಇಂತಹ ಅದೆಷ್ಟೋ ಸಣ್ಣ ಸಣ್ಣ ಮಹಿಳೆಯರು ಇದರ ಪಾಲುದಾರರು ಹೌದು. 45000ಜನರಿಗೆ ಉದ್ಯೋಗ ನೀಡಿದೆ ಈ ಕಂಪನಿ. ಬರೀ 80 ರೂಪಾಯಿ ಹಣ ಹೂಡಿಕೆ ಮಾಡಿ ಆರಂಭಿಸಿದ ಈ ಉದ್ಯಮ ಇಂದು 800ಕೋಟಿ ಮೌಲ್ಯದ ಕಂಪನಿ. ಇದೆಲ್ಲಾ ಸಾಧ್ಯ ಆಗಿದ್ದು ಮುಂದಾಲೋಚನೆಯಿಂದ ಅದೇನೇ ಆಗಲಿ ಅದೆಷ್ಟೋ ಸಾಮಾನ್ಯ ಮಹಿಳೆಯರ ಬದುಕು ಕಟ್ಟಿದ ಈ ಕಂಪನಿ ಇನ್ನಷ್ಟು ಮೇಲಕ್ಕೆ ಬೆಳೆಯಲಿ ಮತ್ತಷ್ಟು ಜನರಿಗೆ ಉದ್ಯೋಗ ನೀಡುವ ಸಂಸ್ಥೆ ಆಗಲಿ ಎಂದು ಆಶಿಸೋಣ.

Leave A Reply

Your email address will not be published.