ಅಡುಗೆ ಎಣ್ಣೆ ದರದಲ್ಲಿ ಇಳಿಕೆ. ಭಾರತದಲ್ಲಿ ಎಷ್ಟು ಬೆಲೆ ಕಡಿಮೆಯಾಗಬಹುದು ಎಂದು ಕಾದು ನೋಡಬೇಕಿದೆ.

543

ಅಡುಗೆ ಎಣ್ಣೆ edible oil ಭಾರತದಂತಹ ಹೆಚ್ಚಿನ ಜನಸಂಖ್ಯೆ ಇರುವಂತಹ ದೇಶದಲ್ಲಿ ಈ ಅಡುಗೆ ಎಣ್ಣೆಗಳು ಬಹಳ ಮಹತ್ವ ಪಡೆದಿದೆ. ಇಲ್ಲಿ ಊಟಕ್ಕೆ ಅಗತ್ಯವಿರುವ ವಸ್ತುಗಳಿಗೆ ಬೆಲೆ ಹೆಚ್ಚಾದರೆ ನಮಗೆ ಸರಕಾರದ ಮೇಲೆ ಕೋಪ ಬರುವುದು ಸಾಮಾನ್ಯವಾಗಿದೆ. ಜನರು ಸರಕಾರದ ಮೇಲೆ ಒತ್ತ-ಡ ಹಾಕಿದಾಗ ಮಾತ್ರ ಸರಕಾರಗಳು ಪರ್ಯಾಯವಾಗಿ ಏನಾದರು ಮಾಡಲು ಪ್ರಯತ್ನ ಪಡುತ್ತವೆ. ಆದರೆ ಮೋದಿ ಸರಕಾರ ಜನರು ಹೇಳುವುದಕ್ಕಿಂತ ಮೊದಲೇ ನಾವು ಆಮದು ಮಾಡಿಕೊಳ್ಳುವ ವಸ್ತುಗಳ ಪರ್ಯಾಯಕ್ಕೆ ದಾರಿ ಹುಡುಕುತ್ತ ಇರುತ್ತದೆ.

ಅಡುಗೆ ಎಣ್ಣೆ ನಾವು ಆಮದು ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಉತ್ಪಾದನೆ ಬಹಳ ಕಡಿಮೆ. ಆದ್ದರಿಂದ ನಾವು ಹೊರ ದೇಶದ ಮೇಲೆ ಸಂಪೂರ್ಣವಾಗಿ ಅವಲಂಬಿಸಿದ್ದೇವೆ. ಹಿಂದಿನ ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲೇ ಇಲ್ಲ, ಆದರೆ ಮೋದಿ ಸರಕಾರ ಇದಕ್ಕಾಗಿಯೇ ಸುಮಾರು ೧೧,೦೦೦ ಕೋಟಿ ಅನುದಾನ ನೀಡಿದೆ, ಬರುವ ೨೦೩೦ ರಲ್ಲಿಗೆ ಆಮದನ್ನು ಸುಮಾರು ೩೦% ರಷ್ಟು ಕಡಿಮೆ ಮಾಡಿಕೊಳ್ಳುವ ಗುರಿ ಕೂಡ ಹೊಂದಿದೆ. ಆದರೆ ಸದ್ಯಕ್ಕೆ ಭಾರತೀಯರಿಗೆ ಈ ಬೆಲೆ ಏರಿಕೆ ಬಿಸಿ ತಟ್ಟುವುದಂತೂ ಖಚಿತ. ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು.

ಇಂಡೋನೇಷ್ಯಾ ಇಂದ ಭಾರತ ಸುಮಾರು ೮೦% ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಳೆದ ತಿಂಗಳು ಅಲ್ಲಿನ ದೇಶದೊಳಗಡೆ ಈ ಅಡುಗೆ ಎಣ್ಣೆ ಬೆಲೆ ಗಗನಕ್ಕೆ ಏರಿದ ಹಿನ್ನಲೆಯಲ್ಲಿ ಉಳಿದ ದೇಶಗಳಿಗೆ ರಫ್ತು ಮಾಡುವುದನ್ನು ನಿಲ್ಲಿಸಲಾಗಿತ್ತು. ಇದೆ ಕಾರಣಕ್ಕೆ ಭಾರತದಂತಹ ದೇಶ, ಎಣ್ಣೆಗೆ ಹೊರ ದೇಶವನ್ನೇ ಅವಲಂಬಿತವಾದ ದೇಶಕ್ಕೆ ಎಣ್ಣೆ ಏರಿಕೆ ಬಿಸಿ ತಟ್ಟಿದೆ. ಆದರೆ ಇದೀಗ ರಫ್ತು ಮಾಡುವುದನ್ನು ಇಂಡೋನೇಷ್ಯಾ ಮತ್ತೊಮ್ಮೆ ಪ್ರಾರಂಭಿಸಿದೆ. ಇದರಿಂದ ಎಣ್ಣೆ ಬೆಲೆಯಲ್ಲಿ ದಿಡೀರ್ ಕು-ಸಿತ ಕಂಡು ಬಂದಿದೆ.

ಅದೇ ಕಾರಣಕ್ಕೆ ಹಿಂದಿನ ವಾರಕ್ಕಿಂತ ಈ ವಾರ ಸಾಸಿವೆ ಎಣ್ಣೆಯ ಬೆಲೆ ಪ್ರತಿ ಕ್ವಿಂಟಲ್ ಗೆ ೧೦೦ ರೂಪಾಯಿ ಇಳಿಕೆ ಆಗಿದೆ. ಪ್ರತಿ ಕ್ವಿಂಟಲ್ ಬೆಲೆ ೭,೫೧೫-೭,೫೬೫ ರು ಆಗಿದೆ. ಇದರಿಂದ ದಾದ್ರಿ ಸಾಸಿವೆ ಬೆಲೆ ಕ್ವಿಂಟಲ್ ಗೆ ೧೫,೦೫೦ ರೂಪಾಯಿ ಗೆ ತಲುಪಿದೆ. ಸೋಯಾಬೀನ್ ಎಣ್ಣೆ ಬೆಳೆಗಳಲ್ಲಿ ಕೂಡ ಇಳಿತ ಕಂಡು ಬಂದಿದೆ. ಪ್ರತಿ ಕ್ವಿಂಟಲ್ ಗೆ ೭,೦೨೫-೭,೧೨೫ ಆಗಿದೆ. ಕಡಲೆಕಾಯಿ ಎಣ್ಣೆ ಕೂಡ ಪ್ರತಿ ಕ್ವಿಂಟಲ್ ಗೆ ೨೫ ರು ಇಳಿಕೆಯಾಗಿದೆ. ಪ್ರತಿ ಕ್ವಿಂಟಲ್ ಗೆ ೨,೬೨೫-೨,೮೧೫ ರು ಆಗಿದೆ. ಕಳೆದ ವಾರ ಸಾಗರೋತ್ತರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಹೊರತಾಗಿ ಕಚ್ಚಾ ತಾಳೆ ಎಣ್ಣೆ ಬೆಲೆ ಕ್ವಿಂಟಲ್ ಗೆ ೫೦೦ ರೂ ಇಳಿಕೆಯಾಗಿದೆ ಎಂದು ಮಾಧ್ಯಮ ವರದಿ ಬಂದಿದೆ.

Leave A Reply

Your email address will not be published.