ಅಡುಗೆ ಎಣ್ಣೆ ಬೆಲೆ ಏರಿಕೆಯಾಗಲು ಕಾರಣವೇನು? ಕಳೆದ ಒಂದು ವರ್ಷದಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ? ಇಲ್ಲಿದೆ ಸಂಪೂರ್ಣ ವಿವರ.

288

ನೀವು ಗಮನಿಸಿದ್ದಿರೋ ಇಲ್ವೋ ಗೊತ್ತಿಲ್ಲ ಈ ಅಡುಗೆ ಎಣ್ಣೆ ೧೦೦-೧೧೦ ರುಪಾಯಿಗೆ ಸಿಗ್ತಿದಿದು ಈಗ ೧೮೦-೨೦೦ ಗೆ ಸಿಗ್ತಿದೆ. ಯಾಕೆ ಒಂದೇ ವರ್ಷದಲ್ಲಿ ಇಷ್ಟು ಬೆಲೆ ಜಾಸ್ತಿ ಆಗಿದ್ದು? ಈ ಲೇಕ್ನ್ ಓದಿ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

೧. ಎಷ್ಟು ಬೆಲೆ ಏರಿಕೆ ಆಗಿದೆ? ಜನವರಿ ೨೦೨೧ ರ ವರದಿ ನೋಡಿದ್ರೆ ಅಡುಗೆ ಎಣ್ಣೆ ಧರ ೫-೬ ತಿಂಗಳ ಮೊದಲು ಸುಮಾರು ೪೦-೫೦% ಹೆಚ್ಚಾಗಿದೆ. ಅಂದರೆ ಜೂನ್ ೨೦೨೦ ರಲ್ಲಿ ಎಣ್ಣೆ ೧೦೦ ರು ಇದ್ದಾರೆ ಜನವರಿ ೨೦೨೧ ರಲ್ಲಿ ೧೫೦-೧೬೦ ರಷ್ಟು ಹೆಚ್ಚಾಗಿದೆ. ಈ ವಾಧಿಯಲ್ಲಿ ಇನ್ನೊಂದು ಪಾಯಿಂಟ್ ಏನ್ ಹೇಳಿದೆ ಅಂದ್ರೆ ಡಿಸೆಂಬರ್ – ಜನವರಿ ೧ ತಿಂಗಳ ಅಂತರದಲ್ಲಿ ಈ ಅಡುಗೆ ಎಣ್ಣೆಗಳ ಬೆಲೆ ೧೫% ಹೆಚ್ಚಾಗಿದೆ. ತಜ್ಞರ ಪ್ರಕಾರ ಏಪ್ರಿಲ್ – ಮೇ ತಿಂಗಳ ಹೊತ್ತಿಗೆ ಈ ದರ ಇದೆ ರೀತಿ ಇರುತ್ತದೆ, ನಂತರ ಕಡಿಮೆ ಆಗುವ ಸಂಭವ ಇದೆ, ಸರಕಾರ ಇಂಪೋರ್ಟ್ ಡ್ಯೂಟಿ ಹತೋಟಿಗೆ ತರಲು ಟಾರಿಫ್ಫ್ ಕಡಿಮೆ ಮಾಡಬೇಕು ಅನ್ನುವ ಸಲಹೆ ಕೂಡ ನೀಡಿದ್ದಾರೆ.

ಪಾಮ್ ಆಯಿಲ್, ಸೋಯಾ ಬೀನ್, ಸನ್ ಫ್ಲವರ್ ಆಯಿಲ್ ಈ ಮೂರು ಜನ ಅತಿ ಹೆಚ್ಚ್ಚು ಉಪಯೋಗಿಸುವ ಅಡುಗೆ ಎಣ್ಣೆ ಆಗಿರುವುದರಿಂದ ಈ ಮೂರು ಎಣ್ಣೆಗಳ ಬೆಲೆ ಏರಿಕೆ ಬಗ್ಗೆ ಸ್ವಲ್ಪ ನೋಡೋಣ. ಪಾಮ್ ಆಯಿಲ್ ನೋಡಿದ್ರೆ ೫೦% ಪ್ಯಾಕ್ಡ್ ಗೂಡ್ಸ್ ಲಿಪ್ಸ್ಟಿಕ್,ಪಿಜ್ಜಾ, ಚಾಕಲೇಟ್, ಶ್ಯಾಂಪೂ, ಹಾಗು ಇನ್ನು ಅಧಿಕ ವಸ್ತುಗಳಲ್ಲಿ ಉಪಯೋಗ ಆಗ್ತದೆ ಈ ಪಾಮ್ ಆಯಿಲ್. ಆದ್ದರಿಂದ ಪಾಮ್ ಆಯಿಲ್ ಬೆಲೆ ಜಾಸ್ತಿ ಆದ್ರೆ ಈ ವಸ್ತುಗಳ ಬೆಲೆ ಕೂಡ ಜಾಸ್ತಿ ಆಗುವುದು ಸಾಮಾನ್ಯ.

೨. ಬೆಲೆ ಏರಿಕೆಗೆ ಕಾರಣವೇನು ? ಬೆಲೆ ಏರಿಕೆಗೆ ಬಹಳಷ್ಟು ಕಾರಣಗಳಿವೆ ಆದ್ರೆ. ಒಟ್ಟು ದೇಶಗಳಲ್ಲಿ ೮೦% ಪಾಮ್ ಆಯಿಲ್ ಉತ್ಪಾದನೆ ಆಗುವುದು ಮಲೇಷ್ಯಾ ಹಾಗು ಇಂಡೋನೇಷ್ಯಾ ದಲ್ಲಿ. ಕಾಶ್ಮೀರ ಹಾಗು CAA ವಿರುದ್ಧ ಮಲೇಷಿಯಾ ಕೆಲವು ಕಾಮೆಂಟ್ ಮಾಡಿತು ಅಂದಿನಿಂದ ಭಾರತ ಹಾಗು ಮಲೇಷಿಯಾ ನಡುವಿನ ರಾಜತಾಂತ್ರಿಕ ಸಂಬಂಧ ಅಷ್ಟು ಒಳ್ಳೆದಿಲ್ಲ. ನಾವು ಅಲ್ಲಿಂದ ಪಾಮ್ ಆಯಿಲ್ ಆಮದು ರದ್ದು ಕೂಡ ಮಾಡಿದೆವು, ಆದರೆ ೨೦೨೦ ರಲ್ಲಿ ಆಮದು ರದ್ದನ್ನು ಭಾರತ ನಿಲ್ಲಿಸಿ ಆಮದು ಶುರು ಮಾಡಿಕೊಂಡಿತು ಕೂಡ. ಆದರೆ ಅಲ್ಲಿ ಕೂಡ ಪಾಮ್ ಆಯಿಲ್ ಉತ್ಪಾದನೆ ಸ್ವಲ್ಪ ಕುಂಠಿತ ಆಗಿದೆ ಕಾರಣ ಕೋರೋಣ ಲೊಕ್ಡೌನ್.

ಇನ್ನೊಂದು ಕಾರಣ ಚೀನಾದ ವೇಗವಾದ ಆರ್ಥಿಕ ಚೇತನ. ಕೋರೋಣ ಚೀನಾದಲ್ಲಿ ಹುಟ್ಟಿತಾದರೂ ಚೀನಾ ಆರ್ಥಿಕವಾಗಲಿ ಬಹಳ ವೇಗವಾಗಿ ಚೇತರಿಕೆ ಕಂಡಿತು. ಆರ್ಥಿಕತೆ ಕೂಡ ಹೆಚ್ಚಾಯಿತು ಅಡುಗೆ ಎಣ್ಣೆ ಬಳಕೆ ಕೂಡ ಹೆಚ್ಚಾಯಿತು, ಇದರಿಂದ ಚೀನಾ ಹೆಚೆಚ್ಚು ಅಡುಗೆ ಎಣ್ಣೆ ಆಮದು ಮಾಡಿಕೊಳ್ಲು ಶುರು ಮಾಡಿದೆ. ವರದಿ ಪ್ರಕಾರ ಜನವರಿ – ಆಗಸ್ಟ್ ನಡುವೆ ಚೀನಾ ಎಣ್ಣೆ ಆಮದು ೩೧% ರಷ್ಟು ಹೆಚ್ಚಿಸಿಕೊಂಡಿದೆ, ೨೦೧೯ ರ ಆಮದಿಗೆ ಹೋಲಿಕೆ ಮಾಡಿದ್ರೆ ಚೀನಾದ ಅಡುಗೆ ಎಣ್ಣೆ ಆಮದು ೪೧ % ಹೆಚ್ಚಾಗಿದೆ. ಇದು ಒಂದು ಕಾರಣ ಅಡುಗೆ ಎಣ್ಣೆ ಬೆಲೆ ಏರಿಕೆಗೆ. ಮೂರನೇ ಪಾಯಿಂಟ್ ಸೋಯಾ ಬೀನ್ ಬಗ್ಗೆ, ಸೋಯಾ ಬೀನ್ ಉತ್ಪಾಧನೆ ಆಗ್ಲಿ ಅಥವಾ ರಫ್ತಾಗಲಿ ಅತಿ ಹೆಚ್ಚು ಮಾಡುವ ಎರಡು ದೇಶಗಳು ಅಂದ್ರೆ ಬ್ರೆಜಿಲ್ ಹಾಗು ಅರ್ಜೆಂಟಿನಾ, ನಮ್ಮ ದೇಶಕ್ಕೂ ಅಲ್ಲಿಂದಲೇ ಸೋಯಾ ಬೀನ್ ಆಮದು ಆಗುವುದು, ಈಗ ಏನಾಗಿದೆ ಅಂದ್ರೆ ಕಳೆದ ವರ್ಷ ಹಾಗು ಅಡಕಿಂತ ಹಿಂದಿನ ವರ್ಷ ಅಲ್ಲಿನ ಹವಾಮಾನ ಸರಿ ಇಲ್ಲದೆ ಬರ ಬಂದಿದೆ, ಇದರ ಪರಿಣಾಮ ಅಲ್ಲಿನ ಕೊಯ್ಲು ಅಥವಾ ಹಾರ್ವೆಸ್ಟ್ ಅಂತ ಏನು ಹೇಳ್ತೇವೆ ಹಿಂದಿನ ಹತ್ತು ವರ್ಷಗಳಿಗಿಂತ ತುಂಬಾ ಕಡಿಮೆ ಆಗಿದೆ, ಇದೆ ಕಾರಣಕ್ಕೆ ಅಲ್ಲಿ ಉತ್ಪಾಧನೆ ಕಡಿಮೆ ಆಗಿದೆ ಇನ್ನೊಂದು ಕಾರಣ ಕೋರೋಣ ನಿಮಗೆ ಗೊತ್ತೇ ಇದೆ. ಈ ಕೋರೋಣ ಅತಿ ಹೆಚ್ಚು ಸೋಂಕು ಹರಡಿದ್ದು ಇದೆ ದೇಶದಲ್ಲಿ. ನಾಲ್ಕನೇ ಪಾಯಿಂಟ್ ಸನ್ ಫ್ಲವರ್ ಬೀಜದ ಬಗ್ಗೆ, ರಷ್ಯಾ ಹಾಗು ಉಕ್ರೇನ್ ವಿಶ್ವದ ಅತಿ ಹೆಚ್ಚು ಸನ್ ಫ್ಲವರ್ ಸೀಡ್ಸ್ ನ ರಫ್ತ್ತು ಮಾಡುವಂತಹ ದೇಶಗಳು . ಭಾರತ ಕೂಡ ಇಲ್ಲಿಂದಲೇ ಆಮದು ಮಾಡಿಕೊಳುತಿರುವುದು. ವರದಿ ನೋಡಿದ್ರೆ ಕಳೆದ ವರ್ಷ ಇವರ ಉತ್ಪಾಧನೆ ೫ ಮಿಲಿಯನ್ ಟನ್ ಕಡಿಮೆ ಆಗಿದೆ. ಕಡಿಮೆ ಉತ್ಪಾಧನೆ ಇಂದ ಬೆಲೆ ಏರಿಕೆ ಆಗಿದೆ.

ಭಾರತ ಸುಮಾರು ೭೦% ಅಡುಗೆ ಎಣ್ಣೆ ಹೊರ ದೇಶಗಳಿಂದ ಆಮದು ಮಾಡಿಕೊಳುತ್ತದೆ, ಹೊರ ದೇಶದಲ್ಲಿ ಈ ತರಹದ ಬದಲಾವಣೆ ಆದರೆ ಭಾರತಕ್ಕೂ ಇದರ ಪ್ರಭಾವ ಬೀರುತ್ತದೆ. ಆಮದು ಅಂತ ಹೇಳುವಾಗ ಭಾರತ ಇಂಪೋರ್ಟ್ ಡ್ಯೂಟಿ ಈ ಆಮದಿನ ಮೇಲೆ ಹಾಕುತ್ತದೆ, ಒಂದು ಲೆಕ್ಕದಲ್ಲಿ ಟ್ಯಾಕ್ಸ್ ಅಂತಾನೆ ಹೇಳ್ಬಹುದು. ಇದು ಈ ಬೆಲೆ ಏರಿಕೆ ಮೇಲೆ ಪ್ರಭಾವ ಬೀರುತ್ತದೆ. ನೀವು ಹೇಳ್ಬಹುದು ಸರಕಾರ ಯಾಕೆ ಇಂಪೋರ್ಟ್ ಡ್ಯೂಟಿ ಕಡಿಮೆ ಮಾಡ್ಬಾರ್ದು ಅಂತ, ಕೇಂದ್ರ ಸರಕಾರ ಅಂದು ಮೇಲಿನ ಸುಂಕ ೧೦% ಕಡಿಮೆ ಕೂಡ ಮಾಡಿದೆ ಆದರೆ ಇಲ್ಲಿ ಕಡಿಮೆ ಮಾಡಿದ ೧೦% ರಫ್ತ್ತು ಮಾಡುವ ದೇಶಗಳು ೧೦% ಜಾಸ್ತಿ ಮಾಡಿ ಕಳಿಸುತ್ತಿವೆ, ಕೇಂದ್ರ ಸರಕಾರ ಎಷ್ಟೇ ಸುಂಕ ಕಡಿಮೆ ಮಾಡಿದರು ವಿದೇಶ ಗಳು ಅಷ್ಟೇ ಸುಂಕ ಜಾಸ್ತಿ ಮಾಡಿ ದರ ಕಡಿಮೆ ಆಗದಂತೆ ಮಾಡುತ್ತಿದೆ. ಆದ್ದರಿಂದ ಆಮದು ಸುಂಕ ಕಡಿಮೆ ಮಾಡುವುದರಂದ ಯಾವುದೇ ಲಾಭ ಭಾರತಕ್ಕಿಲ್ಲ. ಸರಕಾರ ಕೂಡ ಇನ್ನೆರಡು ತಿಂಗಳಲ್ಲಿ ಬೆಲೆ ಕಡಿಮೆ ಆಗ್ಬಹುದು ಅಂತ ಹೇಳ್ತಿದೆ, ನೋಡುವ ಎಷ್ಟು ಕಡಿಮೆ ಆಗ್ತದೆ ಅಂತ.

Leave A Reply

Your email address will not be published.