ಅತ್ಯಂತ ದುಬಾರಿ ಹಾಲು ದನದ ಹಾಲಲ್ಲ ಕತ್ತೆ ಹಾಲಂತೆ. ಯಾಕೆ ಗೊತ್ತೇ? ಯಾಕಿಷ್ಟು ದುಬಾರಿ

476

ಹಾಲು ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ಹಸು. ಹೌದು ಹಸುವಿನ ಹಾಲಿಗೆ ಅಷ್ಟೊಂದು ಮಹತ್ವ ಇದೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ, ಪ್ರಾಣಿ ಪಕ್ಷಿಗಳಿಗೂ ಕೊನೆಗೆ ದೇವರಿಗೂ ಕೂಡ ನೈವೇದ್ಯ ರೂಪದಲ್ಲಿ ಇಡುವುದು ಇದೆ ಹಾಲನ್ನು. ಅಷ್ಟೊಂದು ಶಕ್ತಿ ಇದೆ ಇದರಲ್ಲಿ. ಹಾಲು ಇಲ್ಲದೆ ದಿನ ಸಾಗುವುದೇ ಕಷ್ಟ ಅದೊಂದು ದೈನಂದಿನ ಜೀವನದ ಅಂಗವಾಗಿ ಹೋಗಿದೆ. ಹಾಗಾದರೆ ಈ ಹಾಲಿನ ಬಗೆಗೆ ಮತ್ತಶ್ಟು ಆಳವಾಗಿ ನೋಡುವುದಾದರೆ, ಮಾರುಕಟ್ಟೆಯಲ್ಲಿ ದೊರಕುವ ಅತ್ಯಂತ ದುಬಾರಿ ಹಾಳು ಯಾವುದು ಎಂಬ ಯೋಚನೆ ಒಮ್ಮೆಯಾದರೂ ಮಾಡಿದ್ದೀರಾ ನೀವು ? ಇಲ್ಲವಾದರೆ ಇದುವೇ ಸರಿಯಾದ ಸಮಯ ಬನ್ನಿ ತಿಳಿಯೋಣ.

ಹಾಲು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ದನದ ಹಾಲು, ಎಮ್ಮೆಯ ಹಾಲು, ಆಡಿನ ಹಾಲು, ಒಂಟೆಯ ಹಾಲು ಹೌದು ಇದು ಸರ್ವೇ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುತ್ತದೆ. ಹಾಗಾದ್ರೆ ಇದರಲ್ಲಿ ಅತ್ಯಂತ ದುಬಾರಿ ಹಾಲು ಯಾವುದು ಎಂಬುವುದನ್ನು ತಾವು ಯೋಚಿಸಿ ನೋಡಿದ್ದೀರಾ? ನೀವು ಯೋಚನೆ ಮಾಡುತ್ತಾ ಇದ್ದಾರೆ ನಿಮಗೆ ಉತ್ತರ ಈ ಮೇಲಿನ ಸಾಲುಗಳಲ್ಲಿ ಇಲ್ಲ. ಅತ್ಯಂತ ದುಬಾರಿ ಹಾಲು ಕತ್ತೆಯ ಹಾಲು. ಹೌದು ವಿಚಿತ್ರ ಎನಿಸಿದರೂ ಸತ್ಯ ಸಂಗತಿ. ಮಾರುಕಟ್ಟೆಯಲ್ಲಿ ನಿಮಗೆ ದಾನ ಹಾಲು 50 ರೂಪಾಯಿ ಲೀಟರ್ ಸಿಗಬಹುದು, ಹಾಗೆ ಅದೇ ಸರಾಸರಿ ಯಲ್ಲಿ ಎಮ್ಮೆ ಆಡಿನ ಹಾಲು ಸಿಗುತ್ತದೆ.

ಉಳಿದಂತೆ ಒಂಟೆಯ ಹಾಲಿಗೆ 3000ದ ವರೆಗೆ ಬೆಲೆ ಇದೆ ಮಾರುಕಟ್ಟೆಯಲ್ಲಿ .ಆದೆ ಕತ್ತೆಯ ಹಾಲನ್ನು ನೋಡಿದರೆ ಪ್ರತಿ ಲೀಟರ್ ಗೆ 6000 ದ ವರೆಗೂ ಇದೆ. ಹಾಗಾದರೆ ಇಷ್ಟೊಂದು ದುಬಾರಿ ಯಾಕೆ ಎಂದು ಯೋಚಿಸಿದರೆ. ಇದು ಆರೋಗ್ಯಕ್ಕೆ ಉತ್ತಮ ಇದರಲ್ಲಿ ಅತೀ ಹೆಚ್ಚು ಎಂದರೆ ಹಾಲಿನ 80% ಇರುವ ಬ್ಯಾಕ್ಟೀರಿಯಾ ಲಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ ಇದು ಹೊಟ್ಟೆಯನ್ನು ಉತ್ತಮವಾಗಿ ಇರಿಸುತ್ತದೆ. ಮತ್ತು ಕತ್ತೆಯ ಹಾಲು ಲಭ್ಯತೆ ಕೂಡ ಬಾರಿ ವಿರಳ ಆಗಿದ್ದು, ಅದಕ್ಕಾಗಿ ಇದಕ್ಕೆ ಇಷ್ಟೊಂದು ಬೇಡಿಕೆ ಇದೆ ಮಾರುಕಟ್ಟೆಯಲ್ಲಿ.

Leave A Reply

Your email address will not be published.