ಅಮುಲ್ ಜೊತೆ ಸೇರಿ ಶುರು ಮಾಡಬಹುದು ಉದ್ಯಮ. ಕಡಿಮೆ ಬಂಡವಾಳದಲ್ಲಿ ೬೦ ಲಕ್ಷದವರೆಗೂ ವರ್ಷಕ್ಕೆ ಸಂಪಾಧನೆ ಮಾಡಬಹುದು.

1,592

ಹಸುವನ್ನು ದೇವರೆನ್ನುತ್ತೇವೆ. ಅದಕ್ಕೆ ಕಾರಣ ಅದರಿಂದ ಬರುವ ಉತ್ಪನ್ನಗಳು. ಮುಖ್ಯವಾಗಿ ಹಾಲು. ಈ ಹಾಲಿನ ಉದ್ಯಮ ಮಾಡುವವರು ಯಾವುದೇ ಪರಿಸ್ಥಿತಿಯಲ್ಲೂ ನಷ್ಟ ಅನುಭವಿಸುವುದಿಲ್ಲ. ಲೊಕ್ಡೌನ್ ಸಂಧರ್ಭದಲ್ಲಿ ಹಾಲಿನ ಉದ್ಯಮ ಅತಿ ಹೆಚ್ಚು ಯಶಸ್ಸು ಕಂಡಿದೆ. ಇದರ ಬಗ್ಗೆ ನಾವು ಅನೇಕ ಮಾಧ್ಯಮ ಸುದ್ದಿಯಲ್ಲಿ ಕೇಳಿದ್ದೇವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಹಾಲಿನ ಉತ್ಪನ್ನಗಳನ್ನು ತಯಾರು ಮಾಡುವ ಕಂಪನಿ ಅಲ್ಲದೆ ಹಾಲಿನ ಉದ್ಯಮ ಮಾಡುವ ಕಂಪನಿ ಆದಂತಹ ಅಮುಲ್ ೨೦೨೧ ರಲ್ಲಿ ೩೯,೨೦೦ ಕೋಟಿ ಗು ಅಧಿಕ ಸಂಪಾಧನೆ ಮಾಡಿದೆ.

ಅದೇ ರೀತಿ ಯಾರಾದರೂ ತಮ್ಮದೇ ಅದ ಉದ್ಯಮ ಪ್ರಾರಂಭ ಮಾಡುವವರಿದ್ದರೆ ಈ ಹಾಲಿನ ಉದ್ಯಮ ಅತ್ಯನ್ತ ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ. ಈ ಉದ್ಯಮದಲ್ಲಿ ನೀವು ಅತಿ ಕಡಿಮೆ ಬಂಡವಾಳ ಹಾಕಿ ಅಮುಲ್ ಫ್ರಾಂಚೈಸ್ ಜೊತೆ ಕೂಡಿ ಉದ್ಯಮ ಮಾಡಬಹುದು. ಹಾಗೆಯೇ ಜನರಿಗೆ ಡೇರಿ ಉತ್ಪನ್ನ ಪೂರೈಕೆ ಮಾಡುವ ಮೂಲಕ ಉದ್ಯಮ ಮುಂದಿನ ಹಂತಕೆ ಏರಿಸಿಕೊಳಬಹುದಾಗಿದೆ. ಹಾಗಾದರೆ ಈ ಅಮುಲ್ ಜೊತೆ ಸೇರಿ ಹೇಗೆ ಉದ್ಯಮ ಪ್ರಾರಂಭ ಮಾಡುವುದು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶದ ಪ್ರಸಿದ್ಧ ಡೇರಿ ಕಂಪನಿ ಅಮುಲ್ ಜೊತೆ ಸೇರಿ ಉದ್ಯಮ ನಡೆಸುವ ಅವಕಾಶ ಯಾವಾಗಲಾದರೂ ಒಮ್ಮೆ ಸಿಗುತ್ತದೆ. ಅದಲ್ಲದೆ ಅಮುಲ್ ಯಾವುದೇ ಲಾಭವನ್ನು ನಿರೀಕ್ಷಿಸದೆ ಅಮುಲ್ ಫ್ರಾಂಚೈಸ್ ತೆರೆಯುವ ಬಗ್ಗೆ ಆಫರ್ ನೀಡುತ್ತಿದೆ. ಅಮುಲ್ ಎರಡು ರೀತಿಯ ಬಿಸಿನೆಸ್ ಆಫರ್ ನೀಡುತ್ತಿದೆ. ಮೊದಲನೆಯದ್ದು ಅಮುಲ್ ಔಟ್ಲೆಟ್, ಅಮುಲ್ ರೈಲ್ವೆ ಪಾರ್ಲರ್, ಅಮುಲ್ ಕ್ಯೋಸ್ಕ ಅದೇ ರೀತಿ ಇನ್ನೊಂದು ಅಮುಲ್ ಐಸ್ಕ್ರೀಂ ಸ್ಕೂಪಿಂಗ್ ಪಾರ್ಲರ್ ರೀತಿಯಲ್ಲಿ ನೀಡುತ್ತಿದೆ.

ಅಮುಲ್ ಔಟ್ಲೆಟ್ ಶುರು ಮಾಡಲು ಕೇವಲ ೨ ಲಕ್ಷದ ಬಂಡವಾಳ ಹಾಕಬೇಕಾಗುತ್ತದೆ. ಆದರೆ ಅಮುಲ್ ಐಸ್ಕ್ರೀಂ ಪಾರ್ಲರ್ ಶುರು ಮಾಡಲು ಕಡಿಮೆ ಅಂದರು ೫ ಲಕ್ಷದ ವರೆಗಿನ ಬಂಡವಾಳದ ಅವಶ್ಯಕತೆ ಇರುತ್ತದೆ. ಇದಕ್ಕೆ ಅಮುಲ್ ಕಂಪನಿ ಗೆ ನೋನ್ ರಿಫಾನ್ಡಬಲ್ ಸೆಕ್ಯೂರಿಟಿ ರೀತಿ ೨೫ ರಿಂದ ೫೦ ಸಾವಿರದ ವರೆಗಿನ ಹಣ ನೀಡಬೇಕಾಗುತ್ತದೆ. ಈ ಡೆಪಾಸಿಟರಿ ಹಣ ಆಯಾಯ ಸಮಯಕ್ಕೆ ಬದಲಾಗುತ್ತಿರುತ್ತದೆ. ಅಮುಲ್ ಗೆ ಕೇವಲ ಒಂದು ಬಾರಿ ಬಂಡವಾಳ ಹಾಕಬೇಕಾಗುತ್ತದೆ. ಇದಾದ ನಂತರ ಡೇರಿ ಉತ್ಪನ್ನಗಳನ್ನು ಮಾರಿ ಬರುವ ಲಾಭದಲ್ಲಿ ಕಂಪನಿ ಗೆ ಕೊಡಬೇಕೆಂದಿಲ್ಲ. ಈ ಲಾಭದ ಎಲ್ಲ ಅಂಶ ನಿಮಗೆ ಸೇರುತ್ತದೆ. ಈ ಲಾಭದಲ್ಲಿ ಅಮುಲ್ ಯಾವುದೇ ಶೇರ್ ಕೇಳುವುದಿಲ್ಲ.

ಒಂದು ವೇಳೆ ನೀವು ಅಮುಲ್ ಔಟ್ಲೆಟ್ ತೆರೆಯುತ್ತೀರಾದರೆ ಯಾವುದೇ ಉತ್ಪನ್ನ ಮಾರುತ್ತೀರಾದರು ನಿಮಗೆ MRP ಮೇಲೆ ಕಮಿಷನ್ ಸಿಗುತ್ತದೆ. ಕಂಪನಿ ಹಾಲಿನ ಒಂದು ಪ್ಯಾಕ್ ಗೆ ೨.೫ ಪ್ರತಿಶತ ಹಾಗು ಹಾಲಿನಿಂದ ಮಾಡಿದ ಇತರ ಉತ್ಪನ್ನಗಳಿಗೆ ೧೦ ಪ್ರತಿಷದಷ್ಟು ಕಮಿಷನ್ ನಿಮಗೆ ಸಿಗುತ್ತದೆ. ಅದೇ ರೀತಿ ಐಸ್ ಕ್ರೀಮ್ ಪಾರ್ಲರ್ ನಲ್ಲಿ ನಿಮಗೆ ೨೦ ಪ್ರತಿಶತ ಕಮಿಷನ್ ಸಿಗುತ್ತದೆ. ಐಸ್ ಕ್ರೀಮ್ ನ ಬೇರೆ ಬೇರೆ ಫ್ಲವರ್ ಮೇಲೆ ಬೇರೆ ಬೇರೆ ಕಮಿಷನ್ ಇದೆ ಒಟ್ಟು ೫೦ % ತನಕ ಸಿಗುವ ಸಂಭಾವ್ಯತೆ ಇದೆ. ಆದರೆ ನೀವು ಈ ಉದ್ಯಮ ಎಷ್ಟು ಉತ್ತಮವಾಗಿ ನಿರ್ವಹಿಸುತ್ತೀರಾ ಎನ್ನುವುದರ ಮೇಲೆ ನಿಮ್ಮ ಲಾಭ ನಿರ್ಧರಿತವಾಗುತ್ತದೆ.

ನೀವು ಕಂಪನಿ ಗೆ ಜೊತೆ ಸೇರಿ ಉದ್ಯಮ ಪ್ರಾರಂಭ ಮಾಡುವುದಾದರೆ ನಿಮ್ಮ ಬಳಿ ಕಡಿಮೆ ಅಂದರೆ ೧೫೦ SQ ft ನಷ್ಟು ಜಾಗ ಬೇಕಾಗುತ್ತದೆ. ಅದೇ ನೀವು ಅಮುಲ್ ಐಸ್ ಕ್ರೀಮ್ ಪಾರ್ಲರ್ ತೆರೆಯಬೇಕೆಂದಿದ್ದರೆ ನಿಮ್ಮ ಬಳಿ ಶಾಪ್ ತೆರೆಯಲು ೩೦೦ SQ FT ಜಾಗ ಬೇಕಾಗುತ್ತದೆ. ಇದಾದ ನಂತರ ಅಮುಲ್ ಕಂಪನಿ ಗೆ ಒಂದು ಮನವಿ ಪತ್ರ ಬರೆಯಬೇಕಾಗುತ್ತದೆ. ಅಥವಾ ರಿಟೇಲ್@ಅಮುಲ್.ಕಾರ್ಪ್ ಗೆ ಮೇಲ್ ಮಾಡಬೇಕಾಗುತ್ತದೆ. ಅಥವಾ ನೀವು ಈ ಅಮುಲ್ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಫ್ರಾಂಚೈಸ್ ತೆರೆಯುವ ಬಗ್ಗೆ ಮನವಿ ಮಾಡಬಹುದು. ಅವರ ಒಪ್ಪಿಗೆ ಸಿಕ್ಕ ನಂತರ ನೀವು ನಿಮ್ಮ ಡೇರಿ ಉದ್ಯಮ ಶುರು ಮಾಡಬಹುದಾಗಿದೆ.

Leave A Reply

Your email address will not be published.