ಅಮೆರಿಕಾಗೆ ಕ್ಯಾರೇ ಅನ್ನದೆ ತೈಲದ ಬಳಿಕ ರಷ್ಯಾದಿಂದ ನೈಸರ್ಗಿಕ ಅನಿಲ ಖರೀದಿಸಿದ ಭಾರತ. ಖರೀದಿ ಮಾಡಿದ ಅನಿಲ ಎಷ್ಟು ಗೊತ್ತೇ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನ ನಿಮಗೂ ಗೊತ್ತಿದೆ. ಅಮೇರಿಕ ಹಾಗು ಐರೋಪ್ಯ ಒಕ್ಕೂಟಗಳು ರಶಿಯಾ ಮೇಲೆ ಹಾಕಿರುವ ತಡೆಗಳು ಕೂಡ ನಿಮಗೆ ಗೊತ್ತಿದೆ. ಇದೆ ಕಾರಣದಿಂದ ಪ್ರಪಂಚದಾದ್ಯಂತ ತೈಲ ಬೆಲೆ ಗಗನಕ್ಕೇರಿದೆ. ಭಾರತದಂತಹ ದೇಶ ೮೦% ತೈಲ ಆಮದು ಮಾಡಿಕೊಳ್ಳುತ್ತಿದೆ. ನಮ್ಮಂತಹ ದೇಶಗಳಿಗೆ ಇದು ದೊಡ್ಡ ತಲೆ ನೋವಾಗಿದೆ. ಭಾರತ ಈ ಎಲ್ಲ ವಿದ್ಯಮಾನಗಳಲ್ಲಿ ತಟಸ್ಥ ನಿಲುವನ್ನು ಹೊಂದಿದೆ. ಶಾಂತಿ ಮಾತುಕತೆಗೆ ಹೆಚ್ಚು ಒತ್ತುಕೊಡುತ್ತಿದೆ.
ಆಗಲೇ ಹೇಳಿದ ಹಾಗೆ ಅಮೇರಿಕ ಹಾಗು ಐರೋಪ್ಯ ದೇಶಗಳು ರಷ್ಯಾದಿಂದ ಖರೀದಿ ಹಾಗು ಮಾರಾಟ ಮಾಡಲು ತಡೆ ಹಾಕಿದೆ. ಆದರೆ ಭಾರತ ತನ್ನ ಹಳೆಯ ಸ್ನೇಹಿತ ದೇಶ ರಶಿಯಾ ದಿಂದ ೩೦ ಲಕ್ಷ ಬ್ಯಾರೆಲ್ ಗಿಂತಲೂ ಹೆಚ್ಚು ತೈಲ ಖರೀದಿ ಮಾಡಿ ಅಮೇರಿಕ ಹಾಗು ಯೂರೋಪ್ ತಾಳಕ್ಕೆ ಭಾರತ ಕುಣಿಯುವುದಿಲ್ಲ ಎಂದು ಹೇಳಿದೆ. ಇದಕ್ಕೆ ಅಮೇರಿಕ ಹಾಗೇನೇ ಆಸ್ಟ್ರೇಲಿಯಾ ಕೂಡ ಭಾರತಕ್ಕೆ ಯಾವುದೇ ತಡೆ ಹಾಕದೆ, ಭಾರತ ಸ್ವತಂತ್ರ ಎಂದು ಹೇಳಿದೆ.ತೈಲದ ಬಳಿಕ ಭಾರತ ಈಗ ನೈಸರ್ಗಿಕ ಅನಿಲ ಖರೀದಿ ಮಾಡಿದೆ.
ಭಾರತದ GAIL ಕಂಪನಿ ರಶಿಯಾ ದಿಂದ ೨೫ ಲಕ್ಷ ಟನ್ ಗಳಷ್ಟು ನೈಸರ್ಗಿಕ ಅನಿಲ ಖರೀದಿ ಮಾಡಿದೆ. ಅಲ್ಲದೆ ರಶಿಯಾ ಭಾರತಕ್ಕೆ ಡಾಲರ್ ರೂಪದಲ್ಲಿ ಪಾವತಿ ಮಾಡಲು ಕೂಡ ಒಪ್ಪಿಕೊಂಡಿದೆ. ಇದಕ್ಕಿಂತ ಮೊದಲು ರಶಿಯಾ ಐರೋಪ್ಯ ದೇಶಗಳಿಗೆ ರುಬೆಲ್ ಮೂಲಕ ಪಾವತಿ ಮಾಡಬೇಕು ಎಂದು ಹೇಳಿತ್ತು. ಆದರೆ ಭಾರತಕ್ಕೆ ಡಾಲರ್ ರೂಪದಲ್ಲಿ ಕೊಟ್ಟೂರು ಕೂಡ ನಡೆಯುತ್ತದೆ ಎಂದು ಹೇಳಿದೆ. ಇದು ಭಾರತದ ರಾಜತಾಂತ್ರಿಕತೆಗೆ ದೊಡ್ಡ ಗೆಲುವು ಎಂದು ಹೇಳಿದರು ಕೂಡ ತಪ್ಪಾಗಲ್ಲ.