ಅಮೆರಿಕಾದ ಬೌಲ್ಡರ್ ಸಿಟಿಯಲ್ಲಿ ನಡೆದ ಈ ಒಂದು ಘಟನೆ ಇತಿಹಾಸದಲ್ಲೇ ಪ್ರಶ್ನಾತೀತ ಘಟನೆಯಲ್ಲಿ ಒಂದು. ಏನಿದು ಘಟನೆ?

954

ಇಡೀ ವಿಶ್ವದ ಹಿರಿಯಣ್ಣ ಎಂದೇ ಕರೆಯಲ್ಪಡುವ ಅಮೆರಿಕಾದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿ ಹೋಗಿ ಬೇಕಾದರೂ ಅಮೆರಿಕಾದ ಹೆಸರು ಹೇಳಿದರೆ ಎಲ್ಲರಿಗೂ ಗೊತ್ತೇ ಇರುತ್ತದೆ. ಯಾಕಂದರೆ ಅಷ್ಟು ಬಾಲಶಾಲಿ ಸಂಪದ್ಭರಿತ ದೇಶ ಇದು. ಎಲ್ಲರೂ ಅಮೆರಿಕಾಗೆ ಒಂದು ಬಾರಿ ಹೋಗಬೇಕು ಎಂಬ ಕನಸು ಕಾಣುತ್ತಾರೆ. ಆದರೆ ನಾವು ಇಂದು ತಿಳಿಯಲು ಹೊರಟ ವಿಚಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ನೋಡಿ. ಆದರೆ ಅಮೆರಿಕಾದಲ್ಲಿ ನಡೆದ ಈ ಘಟನೆ ಮಾತ್ರ ಅದೆಷ್ಟೋ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಪ್ರಶ್ನಾತೀತ ಘಟನೆ ಎಂದರೂ ತಪ್ಪಾಗಲಾರದು. ಇದಕ್ಕೆ ಉತ್ತರ ಹುಡುಕುವುದು ಕಷ್ಟ . ಹಾಗಾದರೆ ನಿಮ್ಮೊಳಗೆ ಕುತೂಹಲ ಮೂಡಿರಬಹುದು ಏನಿದು ವಿಚಾರ ಎಂದು ? ಬನ್ನಿ ತಿಳಿಯೋಣ ಈ ಘಟನೆಯ ಬಗೆಗೆ.

ಅಮೆರಿಕಾದಲ್ಲಿ ಹೋವರ್ ಡ್ಯಾಂ ನಿರ್ಮಾಣ ಆಗುತ್ತಿದ್ದ ಸಂದರ್ಭ ಅದು. 1922 ರಲ್ಲಿ ನಡೆಯುತ್ತಿದ್ದ ಕೆಲಸ ಅದು. ಎಲ್ಲವೂ ಒಳ್ಳೆಯ ರೀತಿಯಲ್ಲಿ ಸಾಗುತ್ತಿತ್ತು. ಯಾವುದೇ ಒಂದು ಅನಾಹುತ ನಡೆಯದಂತೆ ಅಚ್ಚುಕಟ್ಟಿನ ಕೆಲಸ ಮಾಡಬೇಕು ಎಂದು ಯೋಜನೆ ಕೂಡ ಆಗಿತ್ತು. ಆದರೆ ದುರಾದೃಷ್ಟ ವಶಾತ್ 1922 ರಲ್ಲಿ ಇಲ್ಲಿ ಒಂದು ದುರ್ಘಟನೆಯಲ್ಲಿ ಮೊದಲ ಮರಣ ಸಂಭವಿಸುತ್ತದೆ. ಆ ವ್ಯಕ್ತಿಯ ಹೆಸರು ಜೆ ಜಿ ಟಿಯರ್ನಿ. ಎಲ್ಲರಲ್ಲೂ ನೋವಿನ ವಾತಾವರಣ. ಆದರೆ ಅದರಲ್ಲೇ ಕೂರುವಂತೆ ಇಲ್ಲ ಕೆಲಸ ಮುಗಿಸುವ ಒತ್ತಡ ಕೂಡ ಇತ್ತು. ವಿಚಿತ್ರ ಎಂದರೆ ಈ ಡ್ಯಾಂ ಸಂಪೂರ್ಣ ಆಗುವ ವರೆಗೆ ಇಲ್ಲಿ ಎರಡು ಮರಣ ಸಂಭವಿಸಿತ್ತು.

ಹೌದು, ಜಿ ಜೇ ಟಿಯರ್ನಿ ಘಟನೆ ನಡೆದು ಸರಿಯಾಗಿ 13 ವರ್ಷಗಳಲ್ಲಿ ಅಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಆ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಯು ಬಲಿಯಾಗುತ್ತಾರೆ. ಅವರ ಹೆಸರು ಪ್ಯಾಟ್ರಿಕ್ .ಈ ಘಟನೆ ನಡೆದದ್ದು 20 ಡಿಸೆಂಬರ್ 1935. ಆದರೆ ಆ ಘಟನೆ ಮತ್ತು ಈ ಘಟನೆಗೆ ಸಂಬಂಧ ಏನು ಎಂದು ಯೋಚಿಸುತ್ತಿದ್ದರೆ, ಖಂಡಿತಾ ಸಂಬಂಧ ಇದೆ ಈ ಘಟನೆಯಲ್ಲಿ ಮೃತ ಪಟ್ಟ ಪ್ಯಾಟ್ರಿಕ್ ಬೇರೆ ಯಾರೂ ಅಲ್ಲ ಮೊದಲ ಘಟನೆಯಲ್ಲಿ ಮೃತ ಪಟ್ಟ ಜಿ ಜೇ ಟಿಯರ್ನಿ ಅವರ ಮಗ. ಹೌದು ಪ್ಯಾಟ್ರಿಕ್ ಟಿಯರ್ನಿ ಮತ್ತು ಜಿ ಜೇ ಟಿಯರ್ನಿ ಅಪ್ಪ ಮತ್ತು ಮಗ. ಈ ಒಂದು ಘಟನೆ ಎಲ್ಲರಲ್ಲೂ ಪ್ರಶ್ನೆ ಮೂಡಿಸಿತ್ತು.

Leave A Reply

Your email address will not be published.