ಅಮೆರಿಕಾದ ಹೋಟೆಲ್ ಗಳಲ್ಲಿ ಪಾತ್ರೆ ತೊಳೆದು ವಿಧ್ಯಾಭ್ಯಾಸ ಮಾಡುತ್ತಿದ್ದ ಆ ಹುಡುಗ ಈಗ ಭಾರತದ ಅಮೂಲ್ಯ ರತ್ನ. ಯಾರಿವರು? ಬನ್ನಿ ತಿಳಿಯೋಣ.

923

ಜೀವನವೇ ಹಾಗೆ ನೋಡಿ ಕೆಲವೊಂದು ಸಮಯದಲ್ಲಿ ಅತ್ಯಂತ ಕಠಿಣ ಸಮಯಗಳ ನಮ್ಮೆದುರಿಗೆ ತರುತ್ತದೆ. ಆದರೆ ನಮ್ಮ ದೃಢತೆ ಮತ್ತು ಜೀವನದ ಗುರಿಯೆಡೆಗೆ ಸಾಗುವ ಆ ಛಲ ನಮ್ಮನ್ನು ಮುಂದಕ್ಕೆ ಹೋಗುವಂತೆ ಮಾಡುತ್ತದೆ. ಒಂದು ಸಧೃಡ ಕುಟುಂಬದಲ್ಲಿ ಹುಟ್ಟಿದ ಈ ಹುಡುಗ ತನ್ನ ತಂದೆಯ ಆಸ್ತಿ ಅಂತಸ್ತಿನಲ್ಲಿ ಬದುಕಲು ಅವರ ಹೆಸರಿನಲ್ಲಿ ತಾನು ಬದುಕದೆ ಸ್ವತಂತ್ರ ಜೀವನ ನಡೆಸಿದ ಯಶೋಗಾಥೆಯ ಕಥೆ ಇದು. ಬಾಲ್ಯದಲ್ಲೇ ಅಪ್ಪ ಅಮ್ಮನ ವಿಚ್ಚೇದನ ಕಂಡು ಅಜ್ಜಿಯೊಂದಿಗೆ ಬೆಳೆದು ದೊಡ್ಡವನಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಅಮೆರಿಕಾಗೆ ತೆರಳುತ್ತಾನೆ. ಆದರೆ ಅಲ್ಲಿ ತನ್ನ ತಂದೆಯ ಹೆಸರನ್ನು ಬಳಸದೆ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.

ಹೀಗೆ ಅಲ್ಲಿ ಬಂದ ಹಣದಿಂದ ತನ್ನ ಜೀವನ ಸಾಗಿಸುತ್ತಿದ್ದ ಹೇಗೋ ಕಷ್ಟ ಪಟ್ಟು ಅಲ್ಲಿ ವಿಧ್ಯಾಭ್ಯಾಸ ಮುಗಿಸಿದ. ಹಾಗಾದರೆ ಯಾರು ಆ ಹುಡುಗ ಎಂದು ಮನಸಿನಲ್ಲಿ ಗೊಂದಲ ಇದ್ದರೆ ಉತ್ತರ ಇಲ್ಲಿದೆ ನೋಡಿ ಅವರು ಮತ್ಯಾರು ಅಲ್ಲ ನಮ್ಮ ನಿಮ್ಮ ನೆಚ್ಚಿನ ರತನ್ ಟಾಟಾ. ಹೌದು ಅಚ್ಚರಿ ಆದರೂ ಸತ್ಯ ಇದು. ಡಿಗ್ರಿ ಮುಗಿಸಿದ ನಂತರ ಭಾರತದಲ್ಲೇ ಏನಾದರೂ ಮಾಡಬೇಕು ಎಂದು ಬಂದು ತಂದೆಯ ಕಂಪನಿಯ ವಿವಿಧ ಘಟಕಗಳಲ್ಲಿ ಕೆಳಮಟ್ಟದ ಕೆಲಸಗಾರನಾಗಿ ದುಡಿಯುತ್ತಿದ್ದರು. ಎಲ್ಲಾ ಆಗು ಹೋಗು ಏಳು ಬೀಳುಗಳನ್ನು ಹತ್ತಿರದಿಂದ ಕಂಡವರು ಮುಂದಕ್ಕೆ 1975 ರಲ್ಲಿ ಅವರು ಕಂಪನಿಯ ಆಡಳಿತ ಮಂಡಳಿಗೆ ಬಂದರು ಅಲ್ಲಿಂದ ಶುರುವಾದ ಅವರ ಜರ್ನಿಯಲ್ಲಿ ಹಲವಾರು ಏಳು ಬೀಳುಗಳು ಬಂತು ಅವರು ವಹಿಸಿಕೊಂಡ NELCO ರೇಡಿಯೋ manufacturing unit ಮತ್ತು ಅದರ ನಂತರ ಕೈಗೆತ್ತಿದ ಟಾಟಾ express mill ಕೂಡಾ ಮುಚ್ಚಿತು.

pc financial express
pc- financial express

ಆರಂಭದಲ್ಲೇ ಸೋಲನ್ನು ಕಂಡ ಇವರು ಕುಗ್ಗಲಿಲ್ಲ ಬದಲಾಗಿ ಮಾಡಿದ ತಪ್ಪನ್ನು ಮರುಕಳಿಸದಂತೆ ನೋಡಿಕೊಂಡರು. ನಂತರ ಅವರು ಹಿಂದೆ ನೋಡಲಿಲ್ಲ ಮುಂದಕ್ಕೆ ಬೆಳೆದು ವಾಹನ ತಯಾರಿಕಾ ಘಟಕ, ಕಾರ್ manufacturing unit , ಎಲ್ಲವನ್ನೂ ಸ್ಥಾಪಿಸಿದರು ಮುಂದಕ್ಕೆ ನಡೆದದ್ದು ಇತಿಹಾಸ . ಹೀಗೆ ಜೀವನದ ಉದ್ದಕ್ಕೂ ಕಷ್ಟಗಳು ಬರುತ್ತದೆ . ಜೀವನದಲ್ಲಿ ಎದುರಾದ ಒಂದು ಸೋಲಿನಿಂದ ಕುಗ್ಗದೆ ಎಂದು ಬಂದು ನಿಲ್ಲಬೇಕು ಆಗಲೇ ಯಶಸ್ಸು ಕೈ ಸೇರುತ್ತದೆ ಎಂಬುದಕ್ಕೆ ರತನ್ ಟಾಟಾ ಅವರೇ ನೈಜ ನಿದರ್ಶನ.

Leave A Reply

Your email address will not be published.