ಅರಬ್ ದೇಶದ ಇಂಜಿನಿಯರ್ ಕೆಲಸ ತೊರೆದು ಭಾರತದಲ್ಲಿ ಹೊಸ ಉದ್ಯಮ ಶುರು ಮಾಡಿ ಇದೀಗ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ ಈ ದಂಪತಿಗಳು?

1,453

ವಿದೇಶ ಅಂದರೆ ಯಾವ ಭಾರತೀಯರಿಗೆ ಇಷ್ಟ ಇಲ್ಲ ಹೇಳಿ. ಇಲ್ಲಿನ ಅನೇಕರು ಇಂಜಿನಿಯರ್ ಮಾಡಿದವರು ವಿದೇಶದಲ್ಲಿ ಕೆಲಸ ಸಿಕ್ಕಲಿ ಅಂತ ಕಾಯುತ್ತಿರುತ್ತಾರೆ. ಅದೇ ರೀತಿ ಅಲ್ಲಿನ ಸಂಬಳ ಕೂಡ ಅಷ್ಟೇ ಜಾಸ್ತಿ ಇರುತ್ತದೆ. ನಾವಿಂದು ಈ ದಂಪತಿಗಳ ಬಗೆ ಹೇಳ ಹೊರಟಿದ್ದೇವೆ UAE ನ ಲಕ್ಷಾಂತರ ಸಂಬಳ ಬಿಟ್ಟು ಭಾರತದಲ್ಲಿ ಸ್ವಂತ ಕೃಷಿ ಮಾಡಲು ಬಂದಿದ್ದಾರೆ. ಕೃಷಿ ಮಾಡಿ ಸಫಲತೆ ಕೂಡ ಪಡೆದಿದ್ದರೆ. ಈ ಕೇರಳದ ಕಾಸರಗೋಡು ಜಿಲ್ಲೆಯ ದಂಪತಿಯ ಸ್ಪೂರ್ತಿಯ ಕತೆ ನೀವೆಲ್ಲರೂ ಕೇಳಲೇ ಬೇಕು.

ಕಾಸರಗೋಡಿನ ದೇವಕುಮಾರ್ ನಾರಾಯಣ್ ಹಾಗು ಅವರ ಪತ್ನಿ ಶರಣ್ಯ ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರ್ ಮುಗಿಸಿ ೨೦೧೪ ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ ಗೆ ಹೋಗಲು ನಿರ್ಧರಿಸಿದರು. ಎಲ್ಲರ ಮನಸ್ಥಿತಿ ಹಾಗೇನೇ ಇವರಿಗೂ ಕೂಡ ವಿದೇಶಕ್ಕೆ ಹೋಗಿ ದುಡಿಯಬೇಕು ಎಂದಿತ್ತು. ದೇವಕುಮಾರ್ ಒಂದು ದೊಡ್ಡ ಟೆಲಿಕಾಂ ಕಂಪನಿ ಅಲ್ಲಿ ಕೆಲಸ ಮಾಡಿದರೆ ಶರಣ್ಯ ಅವರು ವಾಟೆರ್ ಪ್ರೂಫಿಂಗ್ ಕಂಪನಿ ಅಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ಆದರೆ ಅಲ್ಲಿ ಹೋದ ಮೇಲೆ ಅವರ ಊರು ಹಾಗು ದೇಶದ ನೆನಪು ಸದಾಕಾಲ ಬರುತಿತ್ತು.

೨೦೧೮ ರಲ್ಲಿ ಊರಿಗೆ ಮರಳಿದರು ಈ ದಂಪತಿಗಳು. ಇಲ್ಲಿಗೆ ಬಂದು ಅವರು ಒಂದು ಪಾಪ್ಲ ಎನ್ನುವ ಕಂಪನಿ ತೆರೆದರು. ಈ ಕಂಪನಿ ಮೂಲಕ ಅವರು ವೀಳ್ಯದೆಲೆ ಇಂದ ಟೇಬಲ್ ವೆರ್ ತಯಾರಿಸುತ್ತಾರೆ. ಚೀಲಗಳಿಂದ ಸೋಪ್ ಪ್ಯಾಕೇಜಿಂಗ್ ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳು ಭಾರತದಲ್ಲಿ ಹೊರತುಪಡಿಸಿ ಅಮೇರಿಕ UAE ಗಳಲ್ಲಿ ಬೇಡಿಕೆ ಇದೆ. ಅವರ ತಿಂಗಳ ಆಧಾಯ ೧.೫ ಲಕ್ಷಕ್ಕಿಂತಲೂ ಜಾಸ್ತಿ ಇದೆ. ತಮ್ಮ ಕಂಪನಿ ಗಾಗಿ ಅವರದೇ ಊರಿನ ಏಳು ನಿರ್ಗತಿಕ ಮಹಿಳೆಯರನ್ನು ಕೂಡ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ.

ಪ್ರಪಂಚದಲ್ಲಿ ಅನೇಕ ಕಡೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲಾಗುತ್ತಿದೆ ಅದೇ ರೀತಿ ಪರಿಸರ ಸ್ನೇಹಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆಗಳಿವೆ. ಇದರಿಂದ ಪ್ರೇರಿತರಾಗಿ ಅಡಿಕೆ ತಟ್ಟೆಗಳನ್ನು ತಯಾರು ಮಾಡಲು ಪ್ರಾರಂಭಿಸಿದರು. ಈ ಉದ್ಯಮ ಕೇವಲ ೫ ಲಕ್ಷದಲ್ಲಿ ಪ್ರಾರಂಭಿಸಿದರು ಈ ದಂಪತಿಗಳು. ಇದರ ಮಾರ್ಕೆಟಿಂಗ್ ಗಾಗಿ ಸಾಮಾಜಿಕ ಜಾಲತಾಣವನ್ನು ಬಳಸಿದರು. ಇವರು ಈ ಅಡಿಕೆ ಪ್ಲೇಟ್ ಅಲ್ಲದೆ ಅದರಿಂದಾ ಚಮಚ, ಕಟೋರಿಸ್, ಸೋಪ್ ಕವರ್ ಹಾಗು ID ಕಾರ್ಡ್ ಗಳನ್ನೂ ಕೂಡ ತಯಾರಿಸುತ್ತಿದ್ದರಂತೆ. ಒಟ್ಟು ೧೮ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಅವರ ಈ ಉತ್ಪನ್ನಗಳ ಬೆಲೆ ೧-೧೦೦ ರೂಪಾಯಿಗಳ ವರೆಗೆ ಇರುತ್ತದೆ. ಇದರ ಮೇಲೆ ಶೇಕಡಾ ೫೦ ರಷ್ಟು ರಿಯಾಯತಿ ಕೂಡ ನೀಡುತ್ತಿದ್ದಾರೆ ಅಂತೇ. ಈಗಾಗಲೇ ಕೇರಳದ ೨೦ ಇಂತಹದೇ ಉತ್ಪನ್ನ ತಯಾರು ಮಾಡುವ ಘಟಕಗಳೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದರಂತೆ. ಅಲ್ಲದೆ ಮೊದಲು ವಿದೇಶಕ್ಕೆ ರಫ್ತು ಮಾಡುತ್ತಿದ್ದವರು ಇದೀಗ ಅಲ್ಲಿಯೇ ಸ್ಥಳೀಯ ಸೂಪರ್ ಮಾರ್ಕೆಟ್ ಅಲ್ಲೂ ಇದನ್ನು ಮಾರಾಟ ಮಾಡುತ್ತಿದ್ದಾರೆ. ನಿಮಗೆ ಇವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ https://www.papla.in/home ಅವರ ಅಧಿಕೃತ ವೆಬ್ಸೈಟ್ ಗೆ ಹೋಗಿ ತಿಳಿದುಕೊಳ್ಳಬಹುದು ಹಾಗೇನೇ ಖರೀದಿ ಕೂಡ ಮಾಡಬಹುದು.

Leave A Reply

Your email address will not be published.