ಅರ್ಧ ಬೆಲೆಗೆ ಸಿಗಲಿದೆ ಪೆಟ್ರೋಲ್ ಹಾಗು ಡೀಸೆಲ್. ಬೆಲೆಯೇರಿಕೆ ಸಮಸ್ಯೆಗೆ ಪರಿಹಾರ ಹುಡುಕಿದ ಸಾರಿಗೆ ಸಚಿವ ನಿತಿನ್ ಗಡ್ಕರಿ. ಈ ಐಡಿಯಾ ಫಲಿಸುತ್ತಾ?

1,033

ಕೇಂದ್ರೀಯ ಮಂತ್ರಿ ನಿತಿನ್ ಗಡ್ಕರಿ ಹೇಳಿಕೆ ಪ್ರಕಾರ ಭಾರತದಲ್ಲಿ ಪೆಟ್ರೋಲ್ ಬೆಲೆ ಅರ್ಧ ದಷ್ಟು ಕಡಿಮೆ ಆಗಲಿದೆ. ಇದಕ್ಕಾಗಿ ಭಾರತ ಸರಕಾರ ಅನೇಕ ಪ್ರಯಾಸಗಳನ್ನು ಮಾಡುತ್ತಿದೆ. ಈ ಪ್ರಯಾಸ ಸಫಲ ಆದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಜಾಸ್ತಿ ಅನ್ನುವ ಮಾತೆ ಇರಲ್ಲ. ಭಾರತದಲ್ಲಿ ಈಗ ಪರ್ಯಾಯ ಇಂಧನಗಳನ್ನು ಪೆಟ್ರೋಲ್ ಜೊತೆಗೆ ಸೇರಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾದುದ್ದು ಎಥನಾಲ್ ಹಾಗು ಹಸಿರು ಜಲಜನಕ/ಹೈಡ್ರೋಜೆನ್. ಇದಕ್ಕಾಗಿ ಸರಕಾರ ಮೊದಲಿಂದಲೂ ಕೆಲಸ ಮಾಡುತಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಅನೇಕ ರಾಷ್ಟ್ರಗಳು ಈ ರಶಿಯಾ ಇಂದ ಇಂಧನ ಆಮದು ಕಡಿಮೆ ಮಾಡತೊಡಗಿದೆ. ಇದೆ ಸಮಯದಲ್ಲಿ ಭಾರತಕ್ಕೆ ರಶಿಯಾ ಕಡಿಮೆ ಬೆಲೆಗೆ ಇಂಧನ ಕೊಡುವುದಾಗಿ ಕೂಡ ಆಫರ್ ನೀಡಿದೆ. ಇದಕ್ಕೆ ಭಾರತ ಸಮ್ಮತಿಸಿದ್ದು ೩೦ ಲಕ್ಷ ಬ್ಯಾರೆಲ್ ಇಂಧನ ಖರೀದಿ ಮಾಡಿದೆ. ಇದರಿಂದ ಸದ್ಯಕ್ಕೆ ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗುವುದು ಅನುಮಾನ. ಎಲ್ಲರ ಪ್ರೆಡಿಕ್ಷನ್ ಉಲ್ಟಾ ಆಗಿದೆ. ಇದರ ನಡುವೆ ಭಾರತ ಫ್ಲೆಕ್ಸ್ ಫ್ಯುಯೆಲ್ ಅಭಿವೃದ್ಧಿ ಬಗ್ಗೆ ಗಮನ ನೀಡುತ್ತಿದೆ.

ನಿತಿನ್ ಗಡ್ಕರಿ ಈಗಾಗಲೇ ಎಲ್ಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಬಳಿ ಫ್ಲೆಕ್ಸ್ ಫ್ಯುಯೆಲ್ ಮೂಲಕ ಚಲಿಸಬಲ್ಲ ಇಂಧನ ತಯಾರಿಸಲು ಶಿಫಾರಸು ಮಾಡಿದ್ದಾರೆ. ಎಲ್ಲ ಹೇಳಿದಂತೆ ನಡೆದರೆ ಈ ಇಂಜಿನ್ ಬರುವ ಆರು ತಿಂಗಳಲ್ಲಿ ತಯಾರಾಗಲಿದೆ. ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ನ ವೈಶಿಷ್ಟ್ಯ ಏನೆಂದರೆ ಇವುಗಳಿಂದ ಮಿಶ್ರಿತ ತೈಲಗಳಿಂದ ಕೂಡ ವಾಹನ ಚಲಿಸಬಲ್ಲದು. ಗಡ್ಕರಿ ಅವರ ಪ್ರಕಾರ ಮುಂದಿನ ದಿನಗಳಲ್ಲಿ ಭಾರತ ೧೦೦% ಪ್ರದೂಷಣೆ ಮುಕ್ತವಾಗಲಿದೆ. ಅದರ ಆರಂಭ ಈ ಫ್ಲೆಕ್ಸ್ ಫ್ಯುಯೆಲ್ ಮೂಲಕ ಆಗಲಿದೆ ಅಂತೇ.

ಈ ಫ್ಲೆಕ್ಸ್ ಫ್ಯುಯೆಲ್ ಅಂದರೆ ಏನು? ಫ್ಲೆಕ್ಸ್ ಫ್ಯುಯೆಲ್ ಅಂದರೆ ಮಿಶ್ರಿತ ಇಂಧನ. ಈಗ ದೇಶದಲ್ಲಿ ೨೦% ಈಥನೋಲ್ ಬಳಸಿ ಮಿಶ್ರಿತ ಪೆಟ್ರೋಲ್ ಬಳಸಲಾಗುತ್ತಿದೆ. ಇದರ ಸಹಾಯದಿಂದ ವಾಹನಗಳು ಸರಾಗವಾಗಿ ಚಲಿಸುತ್ತಿದೆ. ದೆಹಲಿ ಹಾಗು ಮುಂಬೈ ನಂತಹ ನಗರಗಳಲ್ಲಿ ಈ ರೀತಿಯ ಮಿಶ್ರಿತ ಇಂಧನ ಕೂಡ ಹಾಕಲಾಗುತ್ತಿದೆ. ಇದರಿಂದ ಜನರ ಮೇಲೆ ಪೆಟ್ರೋಲ್ ಬೆಲೆ ಹೊರೆ ಬೀಳುವುದಿಲ್ಲ ಹಾಗೇನೇ ಪ್ರದೂಷಣೆ ಕೂಡ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗುತ್ತಿದೆ. ಇದಲ್ಲದೆ ಎಲೆಕ್ಟ್ರಿಕ್ ವಾಹನಗಳಿಗೆ ಕೂಡ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ಪೆಟ್ರೋಲ್ ಬೆಲೆ ಏರಿಕೆ ಅನ್ನುವ ಗೋಜಿಗೆ ದೇಶ ಇರಲ್ಲ ಅನುವ ನಂಬಿಕೆ ಇದೆ.

Leave A Reply

Your email address will not be published.