ಆಟ ಆಡಲೆಂದು ಕೊಟ್ಟ ಮೊಬೈಲ್ ನಲ್ಲಿ ಈ ಎರಡು ವರ್ಷದ ಪೋರ ಮಾಡಿದ ಕೆಲಸ ಏನು ಗೊತ್ತೇ? ತಿಳಿದರೆ ನೀವು ಕೂಡ ದಂಗಾಗುವಿರಿ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಎಷ್ಟೊಂದು ಅಡಿಕ್ಟ್ ಆಗಿದೆ ಎಂದರೆ ಅದಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ನಾವು ಯಾವ ರೀತಿಯ ಹಾದಿಯಲ್ಲಿ ನಡೆಯುತ್ತೇವೆ ಅದರ ಮೇಲೆ ನಮ್ಮ ಮುಂದಿನ ಪೀಳಿಗೆ ನಿಂತಿದೆ. ಹೌದು ಮಕ್ಕಳು ಕೂಡ ಅಷ್ಟೇ ಮೊಬೈಲ್ ಒಂದಿದ್ದರೆ ಸಾಕು ಮತ್ತೇನು ಬೇಡ ಅವರಿಗೆ. ಅದರಲ್ಲೇ ಕಾಲ ಕಳೆಯುತ್ತಾ ಇರುತ್ತಾರೆ. ಈ ಮೊಬೈಲ್ ಬಂದ ನಂತರ ಹೊರಾಂಗಣ ಆಟ, ಗೆಳೆಯರು, ಹೊರಗಿನ ಪ್ರಪಂಚ ಇದರ ಯಾವುದರ ಅರಿವೇ ಇಲ್ಲ. ಆ ಮೊಬೈಲ್ ಒಂದು ಪ್ರಪಂಚ ಆಗಿ ಹೋಗಿದೆ. ಇದರಿಂದ ಅಡ್ಡ ಪರಿಣಾಮಗಳೇ ಹೆಚ್ಚು. ಮಕ್ಕಳಿಗೆ ಊಟ ಮಾಡುವಾಗಲೂ ಮೊಬೈಲ್ ಬೇಕು ಇಲ್ಲವಾದರೆ ಹಠ. ಅದೊಂದು ಸುಲಭ ಉಪಾಯ ಈಗಿನ ಹೆತ್ತವರಿಗೆ. ಬೆಟ್ಟದ ರುಚಿ ತೋರಿಸುವ ಕಾಲ ಹೋಯಿತು ಈಗ ಮೊಬೈಲ್ ಕೊಟ್ಟು ಮಂಗ ಮಾಡುವ ಕಾಲ ಬಂದಿದೆ. ಅಂತಹುದೇ ಒಂದು ಮನೆಯ ಕಥೆ ಇದು , ಇಲ್ಲಿ ಈ ಹುಡುಗ ಆಡಲು ಕೊಟ್ಟ ಮೊಬೈಲ್ ನಿಂದ ದೊಡ್ಡ ಅವಾಂತರವನ್ನೆ ಸೃಷ್ಟಿಸಿ ಬಿಟ್ಟಿದ್ದಾನೆ. ಬನ್ನಿ ಏನಿದು ನೋಡೋಣ.
ಮೂಲತಃ ಭಾರತದ ದಂಪತಿಗಳು ಪ್ರಮೋದ್ ಮತ್ತು ಮಧು ಇವರು ನ್ಯೂ ಜೆರ್ಸಿ ಅಲ್ಲಿ ವಾಸವಾಗಿದ್ದಾರೆ. ಅವರ ಮಗನೇ ಅಯಾಂಶ್ . ಮಗು ಏನೋ ಹಠ ಮಾಡಿತು ಎಂಬ ಕಾರಣಕ್ಕೆ ತಾಯಿ ತನ್ನ ಮೊಬೈಲ್ ಅನ್ನು ಮಗನಿಗೆ ಆಟ ಆಡಲೆಂದು ಕೊಟ್ಟಿದ್ದರು. ಆಟ ಏನೋ ಆಡುತ್ತಿದ್ದ ಆಡಿ ಆಡಿ ಬೋರ್ ಆದ ಈ ಹುಡುಗ ತಾಯಿಯ ಮೊಬೈಲ್ ನಲ್ಲಿ ಇದ್ದ ಆನ್ಲೈನ್ ಶಾಪಿಂಗ್ ಆ್ಯಪ್ ತೆರೆದಿದೆ. ತೆರೆದು ನೋಡಿದರೆ ಏನು ಸಮಸ್ಯೆ ಇಲ್ಲವಾಗಿತ್ತು, ಆದರೆ ಈತ ಬರೋಬ್ಬರಿ 1.4 ಲಕ್ಷ ಮೌಲ್ಯದ ಫರ್ನೀಚರ್ ಸೆಟ್ ಆರ್ಡರ್ ಹಾಕಿ ಬಿಟ್ಟ. ತಾಯಿಗೆ ಈ ವಿಚಾರ ಗೊತ್ತೇ ಇಲ್ಲ. ಸ್ವಲ್ಪ ದಿನ ಬಿಟ್ಟು ಮನೆ ಮುಂಬಾಗದಲ್ಲಿ ಡೆಲಿವರಿ ವಾಹನ ಬಂದು ನಿಂತಾಗಲೇ ತನ್ನ ಮಗ ಮಾಡಿದ ಕೆಲಸ ಬಯಲಿಗೆ ಬಂದಿದೆ.
ಹೆತ್ತವರು ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಡುವುದು ಸರಿ, ಆದರೆ ಮಕ್ಕಳು ತಮ್ಮ ಹದ್ದುಬಸ್ತನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಷ್ಟು ಪ್ರೀತಿ ಮಾಡುತ್ತೀರೋ ಅಷ್ಟೇ ಜೋರು ಕೂಡ ಇರಬೇಕು ಆಗಲೇ ಅದು ಒಂದು ಸಮಾಂತರ ಸ್ಥಿತಿಯಲ್ಲಿ ಇರುತ್ತದೆ. ಇಲ್ಲವಾದರೆ ಹಳಿ ತಪ್ಪಿದ ರೈಲಿನಂತೆ ಸಾಗುತ್ತದೆ. ಎಚ್ಚರ ಪೋಷಕರೇ ಎಚ್ಚರ ನಿಮ್ಮ ಮಕ್ಕಳು ಈ ರೀತಿಯ ಕೆಲಸ ಮಾಡದಂತೆ ನೋಡಿಕೊಳ್ಳಿ.