ಆನಂದ್ ಮಹಿಂದ್ರಾ ಕಾರಿನ ಬೆಲೆ 1960 ರಲ್ಲಿ ಎಷ್ಟಿತ್ತು ಗೊತ್ತೇ? ಕುತೂಹಲಕಾರಿ ಮಾಹಿತಿ ಬೈಚಿಟ್ಟ ಆನಂದ್ ಮಹಿಂದ್ರಾ.
ಆನಂದ್ ಮಹೀಂದ್ರಾ ಸದಾ ತಮ್ಮ ಒಂದಿಲ್ಲ ಒಂದು ಟ್ವೀಟ್ ಮೂಲಕ ಸದಾ ಸಕ್ರಿಯರಾಗಿ ಇರುತ್ತಾರೆ. ರತನ್ ಟಾಟಾ ನಂತರದಲ್ಲಿ ಸಮಯಕ್ಕೆ ಸರಿಯಾಗಿ ಸ್ಪಂದಿಸುವ ಮತ್ತೊಬ್ಬ ವ್ಯಕ್ತಿ ಯಾರಾದರೂ ಇದ್ದರೆ ಅದು ಆನಂದ್ ಮಹೀಂದ್ರಾ ಮಾತ್ರ. ಇತ್ತೀಚಿನ ದಿನಗಳಲ್ಲಿ ಕಾರು ಖರೀದಿ ಮಾಡಬೇಕು ಎಂದು ಅದೆಷ್ಟೋ ಜನ ಮುಗಿ ಬಿದ್ದು , ಅಡ್ವಾನ್ಸ್ ಕೊಟ್ಟು ಎಷ್ಟು ಸಮಯ ಬೇಕಾದರೂ ಕಾಯಲು ಸಿದ್ಧರಿದ್ದಾರೆ. ಇಂದು ಕಾರಿನ ಬೆಲೆ ಏನಿಲ್ಲ ಎಂದರು 4 ರಿಂದ 5 ಲಕ್ಷದ ಮೇಲೆಯೇ ಇದೆ. ಅದಕ್ಕಿಂತ ಕಡಿಮೆ ಕಾರುಗಳು ಮಾರುಕಟ್ಟೆಯಲ್ಲಿ ಇಲ್ಲ.
ಹಾಗಾದರೆ ಇಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ಆನಂದ್ ಮಹೀಂದ್ರಾ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಏನು ಹಾಗಾದರೆ ಬನ್ನಿ ತಿಳಿಯೋಣ. ಆನಂದ್ ಮಹೀಂದ್ರಾ ಅವರು ಹಳೆಯ ನೆನಪುಗಳ ಮೆಲುಕು ಹಾಕುವ ಟ್ವೀಟ್ ಒಂದನ್ನು ಮಾಡಿದ್ದಾರೆ . ಹೌದು ಇದರ ಬೆನ್ನು ಹತ್ತಿ ಹೋದರೆ 1960 ರ ಸಮಯಕ್ಕೆ ಹೋಗಬೇಕು. ಹೌದು 1960ರ ಜೀಪ್ ಖರೀದಿಯ ಬಿಲ್ ಒಂದರ ಫೋಟೋ ಹಾಕಿ ಈ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಕ್ಯಾಪ್ಶನ್ “ಎಲ್ಲಿ ಕಳೆದು ಹೋದವು ಆ ದಿನಗಳು ” ಎಂದು ಬರೆದು ಕೊಂಡಿದ್ದಾರೆ. ಬರೀ 200 ರೂಪಾಯಿ ಡಿಸ್ಕೌಂಟ್ ದರದಲ್ಲಿ ಜೀಪ್ ಅಂದು ಖರೀದಿ ಮಾಡುತ್ತಿದ್ದರು ಜನರು.
ಹೌದು ವಿಚಿತ್ರ ಎನಿಸಿದರೂ ಸತ್ಯ. ಹಾಗಾದರೆ 200 ರೂಪಾಯಿ ಡಿಸ್ಕೌಂಟ್ ಕೊಡುವ ಜೀಪಿನ ಮಾರುಕಟ್ಟೆ ದರ ಎಷ್ಟಿದ್ದಿರ ಬಹುದು ಎಂದು ಯೋಚಿಸುತ್ತ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಆ ಜೀಪಿನ ಬೆಲೆ ಅಂದು 12,421 ರೂಪಾಯಿ . ಹೌದು 12621 ರೂಪಾಯಿ ಅದರಲ್ಲಿ 200 ರೂಪಾಯಿ ಡಿಸ್ಕೌಂಟ್ ಆಗಿ ಮಹೀಂದ್ರಾ ಕಂಪನಿಯ ಜೀಪ್ ಒಂದು 12421ರೂಪಾಯಿಗೆ ದಕ್ಕುತಿತ್ತು. ಇದನ್ನೇ ಅವರು ಟ್ವೀಟ್ ಮಾಡಿ ಇಂದು ಮತ್ತೆ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.