ಆಮದು ಕೊರತೆಯಿಂದ ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಲು ಸರಕಾರ ಈ ಕ್ರಮ ತೇಗುಕೊಳ್ಳಲೇಬೇಕಿದೆ. ಈ ಕ್ರಮ ಶೀಘ್ರವೇ ಜಾರಿಗೆ ತರುವ ಮುನ್ಸೂಚನೆ ಕೂಡ ಇದೆ.

446

ಭಾರತದಲ್ಲಿ ಅಡುಗೆ ಎಣ್ಣೆ ಪ್ರತಿ ದಿನವೂ ಬೇಕೇ ಬೇಕು. ಇಂತದರಲ್ಲಿ ಅದರ ಬೆಲೆನೇ ಪೆಟ್ರೋಲ್ ಡೀಸೆಲ್ ಗಿಂತಲೂ ತುಟ್ಟಿ ಆದರೆ ಸಾಮಾನ್ಯ ಜನರ ಪಾಡೇನು? ಇದು ಸರಕಾರದ ಕ್ರಮದಿಂದ ಬೆಲೆ ಅಧಿಕವಾಗಿದ್ದು ಅಲ್ಲವೇ ಅಲ್ಲ. ಬದಲಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕೆಲ ವಿದ್ಯಮಾನಗಳಿಂದ ಈ ಅಡುಗೆ ಎಣ್ಣೆ ಬೆಲೆ ಏರಿಕೆ ಆಗಿದೆ. ಇತ್ತೀಚಿಗೆ ಅಷ್ಟೇ ಭಾರತಕ್ಕೆ ೪೫% ರಷ್ಟು ಅಡುಗೆ ಎಣ್ಣೆ ರಫ್ತು ಮಾಡುವ ಇಂಡೋನೇಷ್ಯಾ ಕೂಡ ರಫ್ತು ತಾತ್ಕಾಲಿಗವಾಗಿ ನಿಲ್ಲಿಸಿದೆ. ಕಾರಣ ಅಲ್ಲಿನ ಜನರಿಗೇನೇ ಅಡುಗೆ ಎಣ್ಣೆ ಪೂರೈಸಲು ಕಷ್ಟವಾಗುತ್ತಿದೆ ಅಂತೇ.

ಇನ್ನು ಉಕ್ರೈನ್ ಸಮಸ್ಯೆ ನಿಮಗೆ ಗೊತ್ತೇ ಇದೆ ಅಲ್ಲಿಂದಲೂ ಭಾರತಕ್ಕೆ ಅತಿ ಹೆಚ್ಚು ಅಡುಗೆ ಎಣ್ಣೆ ಬರುತ್ತಿತ್ತು. ಇಂದು ಅಲ್ಲಿಂದಲೂ ನಮಗೆ ಪೂರೈಕೆ ನಿಂತಿದೆ, ಇನ್ನು ನಾವು ಉತ್ಪಾದಿಸುವುದು ಬಹಳ ಕಡಿಮೆ ಈ ಅಡುಗೆ ಎಣ್ಣೆ, ಆದ್ದರಿಂದ ಈ ಅಡುಗೆ ಎಣ್ಣೆ ಬೆಲೆ ಗಗನಕ್ಕೆ ಏರಿದೆ. ಇನ್ನು ಸರಕಾರ ಇದಕ್ಕೆ ಏನು ಮಾಡಬಹುದು ಅದೆಲ್ಲ ಕ್ರಮ ಕೈಗೊಳ್ಳುತ್ತಿದೆ. ಆದರೆ ಅಂತಾರಾಷ್ಟ್ರೀಯ ಪರಿಸ್ಥಿತಿ ಸರಿ ಹೋಗದೆ ಅಡುಗೆ ಎಣ್ಣೆ ಇಂದ ಹಿಡಿದು ನಾವು ಗಡಿಗೆ ಬಳಸುವ ಎಲ್ಲ ಎಣ್ಣೆಗಳ ಬೆಲೆಯೂ ಗಗನಕ್ಕೇರುತ್ತದೆ.

ಸರಕಾರ ಈ ಅಡುಗೆ ಎಣ್ಣೆಗಳ ಮೇಲಿನ ಸೆಸ್ ಅನ್ನು ಕಡಿಮೆ ಗೊಳಿಸುವತ್ತ ಚಿಂತನೆ ಮಾಡುತ್ತಿದೆ. ಭಾರತ ತನ್ನ ೬೦% ಈ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿವೆ. ಇನ್ನು ಸರಕಾರ ಈ ಆಮದಿನ ಮೇಲಿನ ಸೆಸ್ ಅನ್ನು ೩೫% ರಿಂದ ೫% ತರಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.ಅದು ಮಾತ್ರ ಅಲ್ಲದೆ ಪಾಮ್ ಆಯಿಲ್, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕ ಕಡಿಮೆ ಮಾತ್ರ ಮಾಡುವುದಲ್ಲದೆ, ಅವುಗಳ ಸಂಗ್ರಹ ಮಾಡಲು ಇನ್ವೆಂಟರಿ ಬಳಸುವಂತಹ ಕೆಲಸಗಳನ್ನು ಕೂಡ ಸರಕಾರ ಮಾಡುತ್ತಿದೆ.

ಇನ್ನು ಈ ಪೆಟ್ರೋಲ್ ಡೀಸೆಲ್ ಹೇಗೆ ಜಾಸ್ತಿ ಆಗುತ್ತಿದೆಯೋ ಅದೇ ರೀತಿ ಇನ್ನು ಮುಂದೆ ಈ ಅಡುಗೆ ಎಣ್ಣೆ ಬೆಲೆ ಜಾಸ್ತಿ ಆದರೆ ಅದರಿಂದ ಬೇರೆ ವಸ್ತುಗಳು ಕೂಡ ಪರಿಣಾಮ ಎದುರಿಸಬೇಕಾಗುತ್ತದೆ. ಈ ಎಣ್ಣೆ ಬಳಸಿಕೊಂಡು ತಯಾರಾಗುವ ಅನೇಕ ವಸ್ತುಗಳಿವೆ, ಈ ವಸ್ತುಗಳು ನಾವು ಪ್ರತಿ ದಿನ ಬಳಸುವಂತಹ ವಸ್ತುಗಳೇ ಆಗಿದೆ. ಯಾವ ವಸ್ತುಗಳ ಬೆಲೆ ಏರಿಕೆ ಆಗಬಹುದು? ಐಸ್ ಕ್ರೀಮ್, ಮಹಿಳೆಯರು ಬಳಸುವ ಲಿಪ್ಸ್ಟಿಕ್, ಶಂಪೋ, ನೂಡಲ್ಸ್, ಬಟ್ಟೆ ಒಗೆಯಲು ಬಳಸುವ ಡಿಟರ್ಜೆಂಟ್ ಗಳು ಹೀಗೇನೆ ಅನೇಕ ವಸ್ತುಗಳು ಕೂಡ ಜಾಸ್ತಿ ಆಗುವ ಸಾಧ್ಯತೆ ಇದೆ. ಸರಕಾರ ಈಗಾಗಲೇ ತೆರಿಗೆ ಕಡಿಮೆ ಮಾಡುವ ಯೋಚನೆ ಪಾಲಿಸಿದರೆ ಸ್ವಲ್ಪ ದಿನದ ಮಟ್ಟಿಗೆ ಈ ಬೆಲೆ ಏರಿಕೆ ಸಮಸ್ಯೆ ಇರದು.

Leave A Reply

Your email address will not be published.