ಆ ಒಬ್ಬ ಹುಡುಗ 20 ವರ್ಷದವನಿದ್ದಾಗಲೇ ಕೇವಲ 30 ದಿನದಲ್ಲಿ 600 ಕೋಟಿ ಗಳಿಸಿದ್ದು ಹೇಗೆ ಗೊತ್ತೇ?? ಎಷ್ಟು ಸುಲಭ ಐಡಿಯಾ ಗೊತ್ತೇ??
ಅದೃಷ್ಟ ಲಕ್ಷ್ಮಿ ಯಾರ ಜೀವನಕ್ಕೆ ಯಾವಾಗ ಹೇಗೆ ಒಲಿದು ಬರುತ್ತಾಳೆ ಎಂದು ಊಹಿಸುವುದು ಸಹ ಕಷ್ಟವೇ, ಹಾಗಾಗಿ ಜನರು ತಮ್ಮ ಅದೃಷ್ಟ ಪರೀಕ್ಷೆ ಮಾಡಲು, ಹಣವನ್ನು ಸೈಟ್ ಖರೀದಿ ಮಾಡುವುದರಲ್ಲಿ ಅಥವಾ ಶೇರ್ ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡುವುದರಲ್ಲಿ ಖರ್ಚು ಮಾಡುತ್ತಿದ್ದಾರೆ. ಸಣ್ಣ ಕೆಲಸ ಮಾಡುವವರಿಂದ ಹಿಡಿದು ದೊಡ್ಡ ಕೆಲಸ ಮಾಡುವವರವರೆಗೂ ತಾವು ಉಳಿಸಿದ ಹಣವನ್ನು ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿ ಅದರಿಂದ ಲಾಭ ಪಡೆಯುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸಹ ಈಗ ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಲು ಶುರು ಮಾಡಿದ್ದಾರೆ ಎಂದರೆ ನಂಬಲು ಕಷ್ಟ ಆಗುವುದು ಗ್ಯಾರಂಟಿ.
ಶೇರ್ ಮಾರ್ಕೆಟ್ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಿರುವ ಜನರು, ಹೆಚ್ಚಿನ ಲಾಭ ಪಡೆಯುವ ಸಲುವಾಗಿ, ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕುಳಿತು, ಶೇರ್ ಮಾರ್ಕೆಟ್ ಹೇಗೆ ಕೆಲಸ ಮಾಡುತ್ತದೆ, ಯಾವೆಲ್ಲಾ ರೀತಿಯ ಇನ್ವೆಸ್ಟ್ಮೆಂಟ್ ಗಳು ಇದರಲ್ಲಿದೆ, ಇಲ್ಲಿ ಲಾಭ ಪಡೆಯುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಇದರ ಬಗ್ಗೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಶೇರ್ ಮಾರ್ಕೆಟ್ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರದೇಶದವರು ಸಹ ಇದರ ಬಗ್ಗೆ ಆಸಕ್ತಿ, ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾದ ವಿದ್ಯಾರ್ಥಿಯೊಬ್ಬ 215 ಕೋಟಿ ಶೇರ್ ಪಡೆದು, ಒಂದೇ ತಿಂಗಳಿನಲ್ಲಿ 664 ಕೋಟಿಗಿಂತ ಹೆಚ್ಚು ಲಾಭ ಪಡೆದಿರುವ ಘಟನೆ ನಡೆದಿದೆ.
ಈ ವಿದ್ಯಾರ್ಥಿಯ ಹೆಸರು ಜೇಕ್ ಫ್ರೀಮಿನ್, ಈತನಿಗೆ 21 ವರ್ಷ. ಬೆಡ್ ಬಾತ್ ಅಂಡ್ ಬಿಯಾಂಡ್ ಎನ್ನುವ ಕಂಪನಿಯಲ್ಲಿ ಶೇರ್ ಖರೀದಿ ಮಾಡಿ, ಒಂದು ತಿಂಗಳಿನಲ್ಲಿ 878 ಕೋಟಿ ರೂಪಾಯಿ ಗಳಿಸಿದ್ದಾರೆ. ಒಂದೇ ತಿಂಗಳಲ್ಲಿ 664 ಕೋಟಿ ಲಾಭ ಪಡೆದಿದ್ದಾರೆ. ಜುಲೈ ತಿಂಗಳಿನಲ್ಲಿ, ಈ ಸಂಸ್ಥೆಯ ಶೇರ್ ಅನ್ನು, 440 ರೂಪಾಯಿಗೆ ಒಂದರ ಹಾಗೆ 50 ಲಕ್ಷ ಶೇರ್ ಖರೀದಿ ಮಾಡಿದ್ದರು. ಒಂದು ತಿಂಗಳ ನಂತರ ಅವುಗಳನ್ನು ಮಾರಾಟ ಮಾಡುವಾಗ ಸ್ಟಾಕ್ ನ ಮೌಲ್ಯ 2160 ರೂಪಾಯಿ ಆಗಿತ್ತು. ಜೇಕ್ ಅವರು ಕುಟುಂಬ ಹಾಗೂ ಸ್ನೇಹಿತರಿಂದ ಹಣ ಸಾಲ ಪಡೆದು, ಈ ಶೇರ್ ಗಳನ್ನು ಕೊಂಡುಕೊಂಡಿದ್ದರು. ಸಂದರ್ಶನ ಒಂದರಲ್ಲಿ ಮಾತನಾಡಿರುವ ಜೇಕ್ ಇಷ್ಟು ಲಾಭ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.