ಇಂಜಿನಿಯರಿಂಗ್ ಮಾಡಿದ್ದ ಈ ವ್ಯಕ್ತಿ ಕೆಲಸ ಬಿಟ್ಟು ನಡೆಸಿದ ಗುಲಾಬಿ ಕೃಷಿ. ಪ್ರೇಮಿಗಳ ದಿನದಂದು ಗಳಿಸಿದ ಲಾಭ ಎಷ್ಟು ಗೊತ್ತೆ?
ಮನುಷ್ಯನಾಗಿ ಹುಟ್ಟಿದ ಮೇಲೆ ವಿದ್ಯೆ ಎಂಬುವುದು ಬೇಕೆ ಬೇಕು. ವಿದ್ಯೆ ಪಡೆದ ನಂತರ ಆ ವಿದ್ಯೆಗೆ ತಕಂತೆ ಉದ್ಯೋಗ ಪಡೆಯಬೇಕು ಎಂಬುವುದು ಎಲ್ಲರ ಆದೆ ಇಚ್ಚೆ. ಆದರೆ ಅದರಲ್ಲಿ ಎಷ್ಟೋ ಜನ ಯಶಸ್ಸು ಕಾಣುತ್ತಾರೆ ಎಷ್ಟೋ ಜನ ಎಡವುತ್ತಾರೆ. ಆದರೆ ಕೆಲವರು ತಾವು ಕಲಿತ ವಿದ್ಯೆಗೆ ಉದ್ಯೋಗ ಬೇಕು ಎಂದು ಜೀವನ ವ್ಯರ್ಥ ಮಾಡುತ್ತಾರೆ. ಮತ್ತೆ ಕೆಲವರು ಉದ್ಯೋಗ ಯಾವುದಾದರೂ ಪರವಾಗಿಲ್ಲ ಜೀವನ ಸಾಗಿಸಬೇಕು ಎಂದು ದುಡಿಯುತ್ತಾರೆ. ಹೀಗೆ ನಡೆದ ಒಂದು ಘಟನೆ ಇದು.
ಖಾಸಗಿ ಕಂಪನಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಉದ್ಯೋಗ ಬಿಟ್ಟು ಕೃಷಿಯನ್ನು ಕಾಯಕವಾಗಿದೆ ಮಾಡಿಕೊಂಡು ಉತ್ತಮ ಲಾಭ ಪಡೆದಿದ್ದಾರೆ. ಇವರು ಛತ್ತೀಸ್ ಘಡ ಮೂಲದವರು, ಅಮರ್ ಚಂದ್ರಾಕರ್ ಎಂದು ಇವರ ಹೆಸರು. ಖಾಸಗಿ ವೃತ್ತಿ ತೊರೆದು ತಮ್ಮದೇ ಜಮೀನಿನಲ್ಲಿ ಗುಲಾಬಿ ಗಿಡಗಳನ್ನು ನೆಡುವ ಮೂಲಕ ಕೃಷಿಯನ್ನು ಆರಂಭಿಸಿದ್ದರು. ತಮ್ಮಲ್ಲಿ ಇದ್ದ 4 ಎಕರೆ ಭೂಮಿಯಲ್ಲಿ ಡಚ್ ಗುಲಾಬಿ ಬೆಳೆಸುತ್ತಾ ಇದ್ದರು. ಗುಲಾಬಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಎಲ್ಲಾ ರೀತಿಯ ಡೆಕೋರೇಷನ್, ಮಾಳೆಗಳಲ್ಲಿ ಗುಲಾಬಿಯನ್ನು ಬಳಸುತ್ತಾರೆ.
ಹೀಗೆ ಇಷ್ಟಲ್ಲದೆ ಕಳೆದ ತಿಂಗಳು ಪ್ರೇಮಿಗಳ ದಿನ ಆಚರಿಸಲಾಯಿತು. ಈ ದಿನದಂದು ಗುಲಾಬಿಗೆ ಅತೀ ಹೆಚ್ಚು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂವುಗಳಿಗೆ ಚಿನ್ನದ ಬೇಲೆ ಬರುತ್ತದೆ. ಹೀಗೆ ಈ ಒಂದು ದಿನದಲ್ಲಿ ಗುಲಾಬಿ ಹೂವುಗಳನ್ನು ಮಾರಿ ಬರೋಬ್ಬರಿ 12ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ ಈ ಯುವ ರೈತ. ಇವರು ಈಗ ಎಲ್ಲರಿಗೂ ಮಾದರಿ ಆಗಿದ್ದಾರೆ. ಯಾವುದೇ ಕೆಲಸ ಇರಲಿ ಶ್ರಮ ಪಟ್ಟು ಮಾಡಿದರೆ ಫಲ ಸಿಗುತ್ತದೆ ಎನ್ನುವುದಕ್ಕೆ ಈತನೇ ಉದಾಹರಣೆ.