ಇಂಜಿನಿಯರಿಂಗ್ ಮಾಡಿ ಸರಿಯಾದ ಉದ್ಯೋಗ ಸಿಗದೆ ಹೋದಾಗ ಮಾಡಿದ ಈ ವ್ಯವಹಾರದಿಂದ ತಿಂಗಳಿಗೆ 1.5 ಲಕ್ಷ ಆದಾಯ ಬರುತ್ತಿದೆ?
ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಡಾಕ್ಟರ್ ಕಲಿಯುವುದು ಸಾಮಾನ್ಯ ಆಗಿದೆ. ಕಲಿತವರು ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಉದ್ಯೋಗದ ಸಮಸ್ಯೆ ಶುರು ಆಗುತ್ತದೆ. ಬೇಕು ಎಂದಾಗ ಉದ್ಯೋಗ ಸಿಗುವುದಿಲ್ಲ. ಉದ್ಯೋಗ ಸಿಕ್ಕರೂ ಕೈತುಂಬಾ ಸಂಬಳ ಸಿಗುವುದಿಲ್ಲ. ಒಂದಿಲ್ಲ ಒಂದು ಸಂಸ್ಯೆ ಬರುತ್ತಲೇ ಇರುತ್ತದೆ. ಹೇಗೋ ಕೆಲಸ ಸಿಕ್ಕಿ ನೆಮ್ಮದಿಯ ಜೀವನ ಸಾಗಿಸುವ ಹೊತ್ತಿಗೆ ಕೊರೋನ ದಂತಹ ಮಹಾಮಾರಿ. ಎಲ್ಲವನ್ನೂ ಕಳೆದುಕೊಂಡ ಕೆಲ ಜನರು. ಆದರೆ ಒಂದು ಮಾರ್ಗ ಮುಚ್ಚಿದಾಗ ಭಗವಂತ ಮತ್ತೊಂದು ಹಾದಿಯನ್ನು ಕರುಣಿಸುತ್ತಾನೆ ಎಂಬುವುದಕ್ಕೆ ಇದೆ ಘಟನೆ ನಿದರ್ಶನ.
ಕೇರಳದ ಕೊಲ್ಲಂ ಮೂಲದ ಗೆಳೆಯರು ಆನಂದು, ಮೊಹಮ್ಮದ್ ಸೈಫಿ, ಮೊಹಮ್ಮದ್ ಶಾ ನವಾಜ್ ಸಣ್ಣ ಉದ್ಯೋಗದಲ್ಲಿದ್ದ ಇವರು ತಮ್ಮ ಉದ್ಯೋಗ ಕೋರೋನ ಸಮಯದಲ್ಲಿ ಕಳಕೊಂಡರು. ಎಲ್ಲವೂ ಮುಚ್ಚಿ ಜೀವನವೇ ಅಸ್ತ ವ್ಯಸ್ತ ಆಗಿ ಹೋಗಿತ್ತು. ಆಗಲೇ ಇವರ ತಲೆಗೆ ಹೊಳೆದಿದ್ದು ಚಾಯ್ ಬ್ಯುಸಿನೆಸ್. ಹೀಗೆ ಹುಟ್ಟಿಕೊಂಡದ್ದು “ಬಿ ಟೆಕ್ ಚಾಯ್ ” . ಹೌದು ಇದೀಗ ದೇಶದ ಹಲವಾರು ಮೂಲೆಗಳಲ್ಲಿ ತನ್ನ ಫ್ರಾಂಚೈಸಿ ತೆರೆದು ಕೊಂಡಿದೆ. ಇಲ್ಲಿ 50ಕ್ಕಂತಲೂ ಹೆಚ್ಚು ತರಹದ ಚಹಾ ಸಿಗುತ್ತದೆ. 5 ರಿಂದ ಹಿಡಿದು 50 ರೂಪಾಯಿ ತನಕ ಬೆಲೆ ಇಡಲಾಗಿದೆ. ಎಲ್ಲಾ ರೀತಿಯ ಚಹಾ ಜನರನ್ನು ಮತ್ತಷ್ಟು ಆಕರ್ಷಿಸುತ್ತಿದೆ. ಇದೀಗ ಇದೆ ಉದ್ಯಮ ಪ್ರತಿ ತಿಂಗಳು 1.5ಲಕ್ಷದಷ್ಟು ಲಾಭ ತಂದು ಕೊಡುತ್ತಿದೆ . ಕಷ್ಟ ಪಟ್ಟವರಿಗೆ ಎಲ್ಲಿಯಾದರೂ ದಾರಿ ಸಿಕ್ಕೆ ಸಿಗುತ್ತದೆ. ಸೋಂಬೇರಿ ಜೀವನ ಮಾಡಿ ಸರ್ಕಾರದ ಪುಕ್ಕಟೆ ಲಾಭ ಪಡೆದು ಸರ್ಕಾರಕ್ಕೆ ಬಯ್ಯುತ್ತಾ ಕೂರುವ ಜನರು ಅಲ್ಲೇ ಉಳಿದು ಬಿಡುತ್ತಿದ್ದಾರೆ.