ಇಂಟರ್ನೆಟ್ ಸ್ಲೋ ಎಂದು ಬೇಸತ್ತಿದ್ದೀರಾ? ನಿಮ್ಮ ಮೊಬೈಲ್ ನಲ್ಲೂ ಫುಲ್ ಸ್ಲೋ ನ?? ಹಾಗಿದ್ದರೆ ಹೀಗೆ ಮಾಡಿ ಸಾಕು, ನೆಟ್ವರ್ಕ್ ಹುಡುಕಿಕೊಂಡು ಬರುತ್ತೆ.
ಈಗ ಪ್ರತಿಯೊಬ್ಬರು ಸ್ಮಾರ್ಟ್ ಫೋನ್ ಬಳಸುತ್ತಾರೆ. ಮತ್ತೊಬ್ಬರನ್ನು ಸಂಪರ್ಕ ಮಾಡುವ ಒಂದೇ ಕಾರಣಕ್ಕೆ ಮಾತ್ರವಲ್ಲ, ಮನರಂಜನೆ ಗೇಮಿಂಗ್ ಇದೆಲ್ಲದಕ್ಕೂ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿದೆ. ಇದೆಲ್ಲದರ ಪ್ರಯೋಜನವನ್ನು ಸ್ಮಾರ್ಟ್ ಫೋನ್ ನಲ್ಲಿ ಪಡೆಯಬೇಕು ಎಂದರೆ ಬಹಳ ಅವಶ್ಯಕವಾಗಿ ಬೇಕಾಗುವುದು ಇಂಟರ್ನೆಟ್. ಇಂಟರ್ನೆಟ್ ಎಷ್ಟು ವೇಗವಾಗಿ ಇರುತ್ತದೆಯೋ ಅಷ್ಟೇ ಚೆನ್ನಾಗಿ ನೀವು ಮೊಬೈಲ್ ನಲ್ಲಿ ಮನರಂಜನೆ ಪಡೆಯಲು ಗೇಮ್ಸ್ ಆಡಲು ಸಾಧ್ಯ. ಒಂದು ವೇಳೆ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಲೋ ಇದ್ದರೆ, ಕಿರಿ ಕಿರಿ ಉಂಟಾಗುತ್ತದೆ. ಇಂಟರ್ನೆಟ್ ಸ್ಲೋ ಆಗಲು ನೆಟ್ವರ್ಕ್ ಮಾತ್ರವಲ್ಲದೆ, ಮೊಬೈಲ್ ನ ಅತಿಯಾದ ಬಳಕೆ ಸಹ ಕಾರಣವಾಗಿರಬಹುದು. ಹಾಗಾಗಿ ಇಂದು ನಾವು ನಿಮಗೆ ಮೊಬೈಲ್ ನ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಏನು ಮಾಡಬಹುದು ಎನ್ನುವುದರ ಬಗ್ಗೆ ಸಲಹೆ ನೀಡಲಿದ್ದೇವೆ, ಇದನ್ನು ಫಾಲೋ ಮಾಡಿ, ಇಂಟರ್ನೆಟ್ ಸ್ಪೀಡ್ ಹೆಚ್ಚಿಸಿಕೊಳ್ಳಿ..
ಇಂಟರ್ನಲ್ ಮೆಮೊರಿ ಉಳಿಸಿ :- ನಿಮ್ಮ ಮೊಬೈಲ್ ನ ಇಂಟರ್ನಲ್ ಮೆಮೊರಿ ಎಷ್ಟಿರುತ್ತದೆ ಎಂದು ನಿಮಗೆ ಗೊತ್ತಿರುತಗದೆ, 64ಜಿಬಿ ಅಥವಾ 128ಜಿಬಿ ಇದ್ದರೆ, ಶೇ.50ರಷ್ಟು ಮೆಮೊರಿ ಉಳಿದಿರುವ ಹಾಗೆ ನೋಡಿಕೊಳ್ಳಿ. ಮತ್ತು ಬ್ರೌಸರ್ ನಲ್ಲಿ ಕ್ಯಾಶೆಯನ್ನು ಡಿಲೀಟ್ ಮಾಡುತ್ತಾ ಇರಿ, ಇದರಿಂದ ನೀವು ವೆಬ್ಸೈಟ್ ಗಳನ್ನು ವೇಗವಾಗಿ ಲೋಡ್ ಮಾಡಬಹುದು. ಜೊತೆಗೆ ಇಂಟರ್ನೆಟ್ ಸ್ಪೀಡ್ ಹೆಚ್ಚಾಗುತ್ತದೆ.
ಬ್ಯಾಗ್ರೌಂಡ್ ಆಪ್ ಆಫ್ ಮಾಡಿ :- ಮೊಬೈಲ್ ನಲ್ಲಿ ಸದಾ ಇಂಟರ್ನೆಟ್ ಕೇಳುವ ಕೆಲವು ಅಪ್ಲಿಕೇಶನ್ ಗಳಿವೆ. ಅವುಗಳ ಸೆಟ್ಟಿಂಗ್ಸ್ ನಲ್ಲಿ ಅಪ್ಲಿಕೇಶನ್ ಓಪನ್ ಮಾಡಿದ್ದಾಗ ಮಾತ್ರ ಲೋಕೇಶನ್ ಮತ್ತು ಇನ್ನಿತರ ಮಾಹಿತಿಗಳು ಸಿಗುವ ಹಾಗೆ ಮಾಡಿ. ಇದರಿಂದ ಮೊಬೈಲ್ ಡೇಟಾ ಸ್ಪೀಡ್ ಕಡಿಮೆ ಆಗುವುದಿಲ್ಲ. ಹಾಗೆಯೇ ಬಿಟ್ಟರೆ ನಿಮ್ಮ ಮೊಬೈಲ್ ಡೇಟಾ ಸ್ಪೀಡ್ ಕಡಿಮೆ ಆಗುತ್ತದೆ.
ನೆಟ್ವರ್ಕ್ ಸೆಟ್ಟಿಂಗ್ಸ್ ಸರಿ ಮಾಡಿ :- ನೆಟ್ವರ್ಕ್ ಸೆಟ್ಟಿಂಗ್ಸ್ ನಲ್ಲಿ ಸಮಸ್ಯೆ ಇದ್ದರು ಸಹ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಬಹುದು. ಮೊಬೈಲ್ ಸೆಟ್ಟಿಂಗ್ಸ್ ನಲ್ಲಿ ನೆಟ್ವರ್ಕ್ ಆಪ್ಶನ್ ಓಪನ್ ಮಾಡಿ, ಅದರಲ್ಲಿ SIM Card Manager ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಬಳಿಕ, Mobile Data/Network ಆಯ್ಕೆ ಮಾಡಿ, LTE/3G/2G ಆಯ್ಕೆ ಮಾಡಿ. ಇದರಿಂದ ನೀವು ಎಲ್ಲೇ ಇದ್ದರು ಇಂಟರ್ನೆಟ್ ಸ್ಪೀಡ್ ಹೆಚ್ಚಾಗುತ್ತದೆ.
ಅಪ್ಲಿಕೇಶನ್ ಆಟೋ ಅಪ್ಡೇಟ್ಸ್ ಆಫ್ ಮಾಡಿ :- ಅಪ್ಲಿಕೇಶನ್ ಗಳ ಅಪ್ಡೇಟ್ ಬ್ಯಾಗ್ರೌಂಡ್ ನಲ್ಲಿ ನಡೆಯುವುದರಿಂದ ಇದು ನಿರಂತರವಾಗಿ ಮೊಬೈಲ್ ಡೇಟಾ ಮತ್ತು ಬ್ಯಾಟರಿ ಎರಡನ್ನು ಕೂಡ ಕಡಿಮೆ ಮಾಡುತ್ತದೆ. ಹಾಗಾಗಿ ಆಟೋ ಅಪ್ಡೇಟ್ಸ್ ಆಫ್ ಮಾಡಿ.
ಸ್ಮಾರ್ಟ್ ಫೋನ್ ರೀಸೆಟ್ ಮಾಡಿ :- ನೆಟ್ವರ್ಕ್ ತೊಂದರೆ ಆದಾಗ ರೀಬೂಟ್ ಅಥವಾ ರೀಸ್ಟಾರ್ಟ್ ಮಾಡುವುದು ಸಹ ಒಳ್ಳೆಯ ಆಯ್ಕೆ. ಇದರಿಂದ ನೆಟ್ವರ್ಕ್ ಹೊಸದಾಗಿ ಡಿಟೇಕ್ಟ್ ಆಗುತ್ತದೆ, ಹಾಗು ಸ್ಪೀಡ್ ಹೆಚ್ಚಾಗುತ್ತದೆ. ಮೊಬೈಲ್ ಅನ್ನು 5 ಸೆಕೆಂಡ್ ಗಳ ಕಾಲ ಏರ್ ಪ್ಲೇನ್ ಗೆ ಸಹ ಹಾಕಬಹುದು.