ಇದ್ದಕ್ಕಿದ್ದಂತೆ ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಜಮಾಯಿಸಿದ ಕೇರಳಿಗರು ಯಾಕೆ ?? ಇಲ್ಲಿ ಓದಿರಿ

442

ಕೊರೋನ ಸಮಯದಲ್ಲಿ ಮಂಗಳೂರಿನ ಎಲ್ಲಾ ಆಸ್ಪತ್ರೆಗಳು ಫುಲ್ ರಶ್ ಆಗಿದ್ದವು. ತುರ್ತು ಸಂದರ್ಭದಲ್ಲಿ ಕೂಡ ಒಂದು ಹಾಸಿಗೆ ಸಿಗುವುದು ಕಷ್ಟ ಇತ್ತು. ಹೆಚ್ಚಿನ ರೋಗಿಗಳು ನೆರೆಯ ಗಡಿ ಜಿಲ್ಲೆಯಾದ ಕೇರಳದಿಂದ ಬಂದು ಇಲ್ಲಿ ದಾಖಲಾಗುತ್ತಿದ್ದರು. ಕೇರಳ ಮಾಡೆಲ್ ಹೋಗಳುವವರು ಈ ವಿಚಾರದಲ್ಲಿ ಸ್ವಲ್ಪ ಶಾಂತ ನಿಲುವನ್ನು ತೋರುತ್ತಿದ್ದರು. ಆದರೆ ಮತ್ತೆ ಇದೀಗ ಗಡಿ ಭಾಗದಲ್ಲಿ ಕೇರಳಿಗರು ಜಮಾಯಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಹಾಗಾದರೆ ಇದರ ಹಿಂದಣ ರಹಸ್ಯ ಏನು ಬನ್ನಿ ಓದಿರಿ.

ಈ ಹಿಂದೆ ಪೆಟ್ರೋಲ್ ದರ ಗಗನಕ್ಕೇರಿದ ವಿಚಾರ ಎಲ್ಲರಿಗೂ ಗೊತ್ತಿತ್ತು. ಅದನ್ನೇ ನೆಪವಾಗಿ ಇಟ್ಟುಕೊಂಡ ವಿರೋಧ ಪಕ್ಷದ ನಾಯಕರು ಮೋದಿ ಆಡಳಿತ ವೈಖರಿಗೆ ಛೀಮಾರಿ ಹಾಕಿದ್ದರು. ಆದರೆ ಇದೀಗ ದೀಪಾವಳಿ ಉಡುಗೊರೆ ಎಂಬಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಮೇಲಿನ ಸೆಸ್ ಅನ್ನ ಇಳಿಸಿತ್ತು. ಇದರಿಂದಾಗಿ 114 ತಲುಪಿದ್ದ ಪೆಟ್ರೋಲ್ ದರ ಇದೀಗ 98 ರೂಪಾಯಿ ಅಲ್ಲಿದೆ. ಈಗ ಯಾವ ವಿರೋಧ ಪಕ್ಷಗಳು ಕೂಡ ನಾಲಿಗೆ ಹರಿಬಿಟ್ಟಿಲ್ಲ.

ಮೋದಿ ಏರಿಸಿದ ಪೆಟ್ರೋಲ್ ದರ ಎಂದು ಹೇಳಿದವರು ಇಂದು ಮೋದಿ ಪೆಟ್ರೋಲ್ ದರ ಇಳಿಸಿದರು ಎಂದು ಹೇಳುವಷ್ಟು ದೈರ್ಯ ಮಾಡುತ್ತಿಲ್ಲ. ಆದರೆ ವಿರೋಧ ಪಕ್ಷ ಬಣಗಳು ಇರುವ ರಾಜ್ಯದಲ್ಲಿ ಇನ್ನೂ ಪೆಟ್ರೋಲ್ ದರ ಕಡಿಮೆ ಮಾಡಿಲ್ಲ. ಕರ್ನಾಟಕದಲ್ಲಿ ಇಳಿದಿರುವ ಪೆಟ್ರೋಲ್ ದರದ ಲಾಭ ಇದೀಗ ಗಡಿ ರಾಜ್ಯವಾದ ಕೇರಳದ ಜನರು ಪಡೆಯುತ್ತಿದ್ದಾರೆ. ಪಕ್ಕದ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ಪೆಟ್ರೋಲ್ ಪಂಪ್ ಗಳಲ್ಲಿ ಜನ ಜಮಾಯಿಸುತ್ತಿದ್ದು ಎಲ್ಲರೂ ಇಲ್ಲಿಂದಲೇ ಪೆಟ್ರೋಲ್ ಹಾಕಿಸಿ ಕೊಳ್ಳುತ್ತಿದ್ದಾರೆ . ಇದೀಗ ಕೇರಳ ಮಾಡೆಲ್ ಅನ್ನು ಹೊಗಳುವ ಯಾರು ಮಾತನಾಡುತ್ತಿಲ್ಲ. ಒಟ್ಟಾರೆಯಾಗಿ ಜನಪರ ನಿಲುವು ತೋರಿದ ಕೇಂದ್ರ ಸರ್ಕಾರದ ಪರ ಜನರು ಮಾತನಾಡುತ್ತಿದ್ದಾರೆ.

Leave A Reply

Your email address will not be published.