ಇಲ್ಲಿ ಶೇಷ ಶಯನ ಆಕಾರದ ಮಹಾವಿಷ್ಣುವಿನ ಬಣ್ಣ ಪ್ರತಿ ಋತುವಿಗೆ ಬದಲಾಗುತ್ತದೆ. ಇದರ ಕಾವಲು ಯಾರು ಗೊತ್ತೇ?

873

ಮಹಾವಿಷ್ಣುವಿನ ಶೇಷ ಶಯನ ಅಂದರೆ ನಾಗನ ಮೇಲೆ ಮಲಗಿರುವ ಮಹಾವಿಷ್ಣುವಿನ ಬಣ್ಣ ಪ್ರತಿ ಋತುವಿಗೆ ಬದಲಾಗುತ್ತಿರುತ್ತದೆ. ಇದನ್ನು ನೋಡಲೆಂದೇ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಇದು ಬಾಂಧವಘಢ ಎನ್ನುವ ಸ್ಥಳದಲ್ಲಿದೆ. ಇಲ್ಲಿ ಹುಲಿಗಳ ಸಂಖ್ಯೆ ಬಹಳ ಇದೆ. ಇದನ್ನು ನೋಡಲು ಬರುವ ಜನರು ಮಹಾವಿಷ್ಣುವಿನ ಶೇಷಶಯನ ರೂಪವನ್ನು ನೋಡದೆ ಹಿಂದಿರುಗುವುದಿಲ್ಲ. ಹುಲಿಗಳು ಮಹಾವಿಷ್ಣುವನ್ನು ಕಾಯುತ್ತಿವೆ ಎಂದರೆ ಇಲ್ಲಿನ ಜನರ ಭಕ್ತಿ ಕೂಡ ಅಷ್ಟೇ ಹೆಚ್ಚಿರುತ್ತದೆ. ಬಾಂಧವಘಢ ಎನ್ನುವ ಪ್ರದೇಶದಲ್ಲಿ ಮಹಾವಿಷ್ಣುವಿನ ೧೨ ಅವತಾರಗಳ ಕಲ್ಲಿನ ಕೆತ್ತನೆ ಗಳಿವೆ. ಆದರೆ ಮಹಾವಿಷ್ಣುವಿನ ಈ ಶೇಷ ಶಯನ ಮೂರ್ತಿ ಪ್ರವಾಸಿಗರಿಗೆ ಬಹಳ ಆಕರ್ಷಣೆ ಉಂಟು ಮಾಡುತ್ತಿದೆ.

ಪರ್ವತದ ಹೆಸರು ಭಾಂದವಘಡ ಇದು ಮಧ್ಯ ಪ್ರದೇಶದಲ್ಲಿದೆ. ಈ ಪರ್ವತದಲ್ಲಿ ಒಂದು ಕೋಟೆ ಇದೆ. ಇದರ ನಿರ್ಮಾಣ ಸುಮಾರು ೨,೦೦೦ ವರ್ಷಗಳ ಹಿಂದೆ ಮಾಡಲಾಗಿತ್ತು. ವ್ಯಘ್ರದೇವ ಎನ್ನುವ ರಾಜನಿಂದ ನಿರ್ಮಿಸಲ್ಪಟ್ಟಿದೆ. ಇದೆ ಕೋಟೆಯ ದಾರಿಯಲ್ಲಿ ಶೇಷ ಶಯನ ಮಹಾವಿಷ್ಣುವಿನ ಮೂರ್ತಿ ಇದೆ. ಏಳು ಕುಂಡಗಳಿವೆ ಇವು ಇಂದಿಗೂ ಬತ್ತುವುದಿಲ್ಲ. ಶೇಷ ಶಯನದ ಮಹಾವಿಷ್ಣುವಿನ ಚರಣದಿಂದ ಚರಣ್ ಗಂಗಾ ಎನ್ನುವ ನದಿಯ ಉಗಮವಾಗುತ್ತದೆ. ಈ ನದಿ ಅಲ್ಲಿನ ದೊಡ್ಡ ಅರಣ್ಯದ ಪ್ರಾಣಿಗಳ ಜೀವನದಿಯಾಗಿದೆ. ಈ ಏಳು ಕುಂಡದಲ್ಲಿ ನೀರು ತುಂಬಿರುತ್ತದೆ. ಇವುಗಳಲ್ಲಿ ಎಲ್ಲ ಋತುವಿನಲ್ಲಿ ನೀರು ತುಂಬಿರುತ್ತದೆ.

AJOUTER UNE LEGENDE

ಅಲ್ಲಿನ ಜನರ ಪ್ರಕಾರ ಇಂತಹ ಮೂರ್ತಿ ಮಧ್ಯ ಪ್ರದೇಶದಲ್ಲಿ ಬೇರೆಲ್ಲೂ ಇಲ್ಲ, ಪ್ರತಿ ಋತುವಿಗೂ ಇದರ ಬಣ್ಣ ಬದಲಾಗುತ್ತದೆ. ಮಳೆಗಾಲದಲ್ಲಿ ಮಹಾವಿಷ್ಣುವಿನ ಮೂರ್ತಿ ಹಸಿರು ಬಣ್ಣದಿಂದ ಕೂಡಿರುತ್ತದೆ, ಚಳಿಗಾಲದಲ್ಲಿ ಆಕಾಶದ ಬಣ್ಣವಿರುತ್ತದೆ ಹಾಗೆಯೆ ಬೇಸಿಗೆ ಕಾಲದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಭಾರತದಲ್ಲಿ ಇಂತಹ ಅನೇಕ ಸ್ಥಳಗಳಿವೆ ಹಾಗು ಅವುಗಳು ಅಚ್ಚರಿ ಇಂದ ಕೂಡಿರುತ್ತವೆ. ಇಲ್ಲಿನ ಮಹಾವಿಷ್ಣುವಿನ ಪ್ರತಿಮೆ ಕೆಂಪು ಕಲ್ಲಿನಿಂದ ಮಾಡಿದೆ ಆದ ಕಾರಣ ಇದು ಬೇಸಿಗೆ ಕಾಲದಲ್ಲಿ ಕೆಂಪು ಬಣ್ಣದಲಿರುತ್ತವೆ. ಚಳಿಗಾಲದಲ್ಲಿ ಹೂವುಗಳು ಮೂರ್ತಿ ಮೇಲೆ ಬೀಳುವುದರಿಂದ ಆಕಾಶ ನೀಲಿ ಬಣ್ಣಕ್ಕೆ ತಿರುಗುತ್ತದೆ.

Leave A Reply

Your email address will not be published.