ಈಗಿನ ಹುಡುಗಿಯರು ಧರಿಸುವ ಹೈ ಹೀಲ್ಡ್ ಚಪ್ಪಲ್ ಮೊದಲು ಧರಿಸುತ್ತಿದ್ದದ್ದು ಪುರುಷರು. ಆದರೆ ಯಾತಕ್ಕಾಗಿ ಧರಿಸುತ್ತಿದ್ದರು?

302

ಬದಲಾಗುತ್ತಿರುವ ಜೀವನದಲ್ಲಿ ನಾವು ಕೂಡ ಬದಲಾಗುತ್ತಾ ಸಾಗಬೇಕು . ಆಗ ಮಾತ್ರ ಬದಲಾಗುವ ಜಗತ್ತಿಗೆ ನಾವು ಒಗ್ಗಿ ಕೊಳ್ಳಬಹುದು. ಇಲ್ಲವಾದರೆ ಫ್ಯಾಷನ್ ಎಂಬ ಹೆಸರಿನಲ್ಲಿ ನಾವು ಹಿಂದುಳಿದು ಬಿಡುತ್ತೇವೆ. ನಾವು ಇಂದು ನೋಡುತ್ತೇವೆ ಎಲ್ಲಾ ಮಹಿಳೆಯರು ಹುಡುಗಿಯರಿಗೆ ಹೈ ಹೀಲ್ಡ್ ಎಂದರೆ ಬಾರಿ ಇಷ್ಟ. ಆದರೆ ಇದನ್ನು ಆರಂಭದಲ್ಲಿ ಪುರುಷರು ಧರಿಸುತ್ತಿದ್ದರು ಎಂದರೆ ಹೇಗೆ ಅನಿಸುತ್ತದೆ? ಹೌದು ನಿಮಗೆ ನಗು ಬಂದರೂ ಕೂಡ ಇದನ್ನು ಆರಂಭದಲ್ಲಿ ಧರಿಸಲು ಶುರು ಮಾಡಿದ್ದೆ ಪುರುಷರು, ಕಾಲಾಂತರದಲ್ಲಿ ಇದು ಬದಲಾಗಿ ಈಗ ಮಹಿಳೆಯರು ಹಾಕುತ್ತಾರೆ.

ಆದರೆ ಪುರುಷರು ಇದನ್ನು ಹಾಕುತ್ತಾ ಇದ್ದಿದ್ದು ಆದರೂ ಯಾಕೆ ಎಂಬ ಪ್ರಶ್ನೆ ಮನಸಿನಲ್ಲಿ ಬಂದರೆ ಅದಕ್ಕೆ ಉತ್ತರ ಇಲ್ಲಿದೆ. ಹೀಲ್ಡ್ ಚಪ್ಪಲ್ ಧರಿಸಲು ಆರಂಭ ಆಗಿದ್ದು 10ನೆಯ ಶತಮಾನದಲ್ಲಿ. ಆಗ ಇದನ್ನು ಧರಿಸುತ್ತಾ ಇದ್ದವರು ಗಂಡಸರು. ಅಚ್ಚರಿ ಆದರೂ ಸತ್ಯ , ಪರ್ಷಿಯನ್ ಆರ್ಮಿ ಯ ಕುದುರೆ ಸವಾರರು ಇದನ್ನು ಧರಿಸುತ್ತಿದ್ದರು. ಇದನ್ನು ಅವರಿಗೆಂದೆ ತಯಾರು ಮಾಡಲಾಗಿತ್ತು. ಯಾಕೆಂದರೆ ಕುದುರೆಯಲ್ಲಿ ಕುಳಿತಿರುವಾಗ ಅದರಲ್ಲಿನ ಹುಕ್ ನಿಂದ ಕಾಲು ಸ್ಲಿಪ್ ಆಗದಿರಲಿ ಎಂಬ ಕಾರಣಕ್ಕೆ ಇದನ್ನು ಡಿಸೈನ್ ಮಾಡಲಾಗಿತ್ತು.

ಆದರೆ ಇದು ಮುಂದುವರೆದು ಯುರೋಪ್ ವರೆಗೆ ತರುಪಿತು ಅಲ್ಲಿ ಶ್ರೀಮಂತ ಜನರು ಯಾರೆಲ್ಲ ದೇಹ ಗಾತ್ರದಲ್ಲಿ ಕುಳ್ಳಗೆ ಇದ್ದರೂ ಅಂತಹ ಗಂಡಸರು ಇದನ್ನು ಹಾಕಿ ಎತ್ತರಕ್ಕೆ ಕಾಣುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾಗುತ್ತಾ ಹೋದ ಹಾಗೆ ಫ್ಯಾಷನ್ ಎಂಬ ಹೆಸರಿನಿಂದ ಎಲ್ಲವೂ ಬದಲಾಯಿತು. ಗಂಡು ಹೆಣ್ಣು ಭೇದಭಾವ ಇಲ್ಲ ಎಂದಿದ್ದರೆ ಅದು ಧರಿಸುವ ಬಟ್ಟೆಯಲ್ಲಿ ಮಾತ್ರ ಎನ್ನಬಹುದು.

Leave A Reply

Your email address will not be published.