ಈ ಅನೇಕ ಬಿಸ್ಕುಟ್ ಗಳಲ್ಲಿ ಸಣ್ಣ ಸಣ್ಣ ತೂತುಗಳಿರುತ್ತವೆ ಯಾಕೆ ಗೊತ್ತೇ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು??

2,107

ಮಕ್ಕಳಾಗಲಿ ದೊಡ್ಡವರಾಗಿರಲಿ ಈ ಬಿಸ್ಕುಟ್ ಎಂದರೆ ಎಲ್ಲರಿಗು ಅಚ್ಚುಮೆಚ್ಚು. ನಾವು ಬೆಳಿಗ್ಗೆ ಸಂಜೆ ಚಹಾ ಕಾಫಿ ಜೊತೆ ತಿನ್ನುವುದರ ಮಜಾ ಬೇರೇನೇ ಇರುತ್ತದೆ. ಕೆಲ ಮನೆಗಳಲ್ಲಿ ಮನೆಗೆ ಬರುವ ಅತಿಥಿ ಗಳಿಗೂ ಈ ಚಹಾ ಬಿಸ್ಕುಟ್ ಗಳಿಂದಲೇ ಸ್ವಾಗತ ಮಾಡಲಾಗುತ್ತದೆ. ಇನ್ನೊಂದು ವಾಕ್ಯದಲ್ಲಿ ಹೇಳಬೇಕೆಂದರೆ ಈ ಬಿಸ್ಕುಟ್ ಪ್ರತಿಯೊಬ್ಬರ ದೈನಂದಿನ ದಿನಚರಿಯಲ್ಲಿ ಬಳಕೆ ಇದ್ದೆ ಇರುತ್ತದೆ. ಆದರೆ ನೀವು ಯಾವತ್ತಾದರೂ ಗಮನಿಸಿದ್ದೀರಾ ಈ ಬಿಸ್ಕುಟ್ ಗಳಲ್ಲಿ ಸಣ್ಣ ಸಣ್ಣ ತೂತುಗಳು ಏಕೆ ಇರುತ್ತವೆ ಎಂದು.

ಗೊತ್ತಿಲ್ಲ ಅಂದರೆ ಇಂದು ನಾವು ಈ ಬಿಸ್ಕುಟ್ ನಾಳಿನ ತೂತುಗಳ ವೈಜ್ಞಾನಿಕ ಕಾರಣ ನಿಮಗೆ ತಿಳಿಸುತ್ತೇವೆ. ಬಿಸ್ಕುಟ್ ಪ್ರಿಯರು ಇಡೀ ಜಗತ್ತಲ್ಲೇ ಇದ್ದಾರೆ, ಅದಕ್ಕಾಗಿಯೇ ಎಲ್ಲ ಕಂಪನಿಗಳು ಕೂಡ ಬೇರೆ ಬೇರೆ ಡಿಸೈನ್ ಮೂಲಕ ತಮ್ಮ ಬ್ರಾಂಡ್ ನ ಬಿಸ್ಕುಟ್ ಗಳನ್ನೂ ಮಾರುಕಟ್ಟೆಗೆ ತರುತ್ತಾರೆ. ಕೆಲ ಬಿಸ್ಕುಟ್ ಗಳಲ್ಲಿ ಬೇರೆ ಬೇರೆ ಡಿಸೈನ್ ಅಲ್ಲಿ ತೂತು ಗಳಿರುತ್ತವೆ. ಇವುಗಳು ಕೇವಲ ಡಿಸೈನ್ ಮಾತ್ರವಲ್ಲ ಇದರ ಹಿಂದೆ ವಿಜ್ಞಾನ ಕೂಡ ಅಡಗಿದೆ. ಈ ತೂತುಗಳನ್ನು ಡೋಕರ್ಸ್ ಎಂದು ಕರೆಯಲಾಗುತ್ತದೆ. (Docking Holes). ಈ ತೂತುಗಳಿಂದ ಗಲಿ ಸರಾಗವಾಗಿ ಸಾಗಲಿ ಇದರಿಂದ ಈ ಬಿಸ್ಕತ್ ಗಳು ಉಬ್ಬುವುದು ನಿಲ್ಲುತ್ತದೆ.

ಈ ತೂತುಗಳಿಂದ ಬಿಸ್ಕುಟ್ ಗಳು ಚೆನ್ನಾಗಿ ತಯಾರಾಗುತ್ತದೆ. ಯಾಕೆಂದರೆ ಬಿಸ್ಕುಟ್ ಮಾಡುವಾಗ ಗಾಳಿ ತುಂಬಿಸಲಾಗುತ್ತದೆ. ನಂತರ ಈ ಬಿಸ್ಕುಟ್ ಬ್ಯಾಟರ್ ತೆಗೆದು ಓವೆನ್ ಅಲ್ಲಿ ಇರಿಸಲಾಗುತ್ತದೆ. ಬಿಸಿಯಾಗುತ್ತಲೇ ಈ ಬಿಸ್ಕುಟ್ ಗಳು ಉಬ್ಬುತ್ತವೆ. ಆಗ ಈ ಬಿಸ್ಕುಟ್ ಡಿಸೈನ್ ಅಲ್ಲದೆ ಆಕಾರ ಕೂಡ ಹಾಳಾಗುತ್ತದೆ. ಇದೆ ಕಾರಣಕ್ಕೆ ಈ ತೂತುಗಳನ್ನು ಬಿಸ್ಕುಟ್ ಅಲ್ಲಿ ಮಾಡಲಾಗುತ್ತದೆ. ಈ ತೂತುಗಳನ್ನು ಮಾಡಲು ಆಧುನಿಕವಾಗಿ ಯಂತ್ರಗಳನ್ನು ಕೂಡ ಬಳಸಲಾಗುತ್ತದೆ. ಇದರಿಂದ ಈ ಬಿಸ್ಕುಟ್ ಗಳು ಸುಂದರ ಹಾಗು ನಾವು ಮೊದಲೇ ಯೋಚಿಸಿದ ಆಕಾರ ಹಾಗು ಡಿಸೈನ್ ಅಲ್ಲಿ ತಯಾರಿಸಲು ಸಾಧ್ಯವಾಗುತ್ತದೆ.

Leave A Reply

Your email address will not be published.