ಈ ಎಮ್ಮೆಯನ್ನು ಕಪ್ಪು ಚಿನ್ನ ಎಂದು ಕರೆಯುತ್ತಾರೆ. ಈ ಎಮ್ಮೆಯಿಂದ ಲಕ್ಷಗಟ್ಟಲೆ ಹಣ ಗಾಳಿಸುತ್ತಿದ್ದಾರಂತೆ?
ಜೀವನದಲ್ಲಿ ಹುಟ್ಟಿದ ಮೇಲೆ ಕೆಲಸ ಎಂಬುವುದು ಪ್ರತಿಯೊಬ್ಬರಿಗೂ ಬೇಕು. ಕೆಲಸ ಮಾಡದೆ ಜೀವನ ನಡೆಸುವುದು ಸಾಧ್ಯ ಇಲ್ಲ. ಹಾಗೆ ಹೆಚ್ಚಿನ ಜನರೂ ಉದ್ಯೋಗ ಹರಸಿಕೊಂಡು ಪರ ಊರಿಗೆ ಹೋಗುತ್ತಾರೆ. ಆದರೆ ಇತ್ತೀಚಿನ ಕೋರೋಣ ಹಾವಳಿಯಿಂದ ಹೆಚ್ಚಿನ ಜನರು ಮರಳಿ ಊರಿಗೆ ಬಂದು ಕೃಷಿಯನ್ನೇ ಅವಲಂಬಿಸಿ ಬದುಕುವ ನಿರ್ಧಾರ ಮಾಡಿದ್ದಾರೆ. ಇಂದು ನಾವು ತಿಳಿಯಲು ಹೊರಟ ವಿಚಾರ ಮತ್ತು ಇದಕ್ಕೆ ಸಂಬಂಧ ಇದೆ. ಬನ್ನಿ ತಿಳಿಯೋಣ.
ಎಮ್ಮೆಗಳು ಎಂದರೆ ಎಲ್ಲರಿಗೂ ಗೊತ್ತು. ಎಮ್ಮೆಗಳನ್ನು ಹಾಲಿಗಾಗಿ ಸಾಕುತ್ತಾರೆ, ಅದರಿಂದ ಉತ್ತಮ ಆದಾಯ ಕೂಡ ಇದೆ. ಅದರಲ್ಲೂ ಎಮ್ಮೆಯಲ್ಲಿ ಒಂದು ತಳಿ ಇದೆ ಅದನ್ನು ಕಪ್ಪು ಬಂಗಾರ ಎಂದೇ ಕರೆಯುತ್ತಾರೆ. ಹಾಗಾದರೆ ಅದನ್ನು ಯಾಕೆ ಹಾಗೆ ಕರೆಯುತ್ತಾರೆ ಮತ್ತು ಅದರ ವಿಶೇಷತೆ ಏನು ? ಬನ್ನಿ ಇದರ ಬಗೆಗೆ ಹೆಚ್ಚಿನ ಮಾಹಿತಿ ತಿಳಿಯೋಣ. ಬುರಾ ತಳಿಯ ಈ ಎಮ್ಮೆಗಳು ದಿನಕ್ಕೆ ಏನಿಲ್ಲ ಎಂದರೂ 20 ರಿಂದ 25ಲೀಟರ್ ಹಾಲು ಕೊಡುತ್ತದೆ. ಇದರಲ್ಲಿ ಕೆಲವು ಎಮ್ಮೆಗಳು 30 ರಿಂದ 35ಲೀಟರ್ ವರೆಗೂ ಕೊಡುತ್ತದೆ. ಡೈರಿ ಫಾರ್ಮಿಂಗ್ ಮಾಡುವ ಆಸಕ್ತಿ ಉಳ್ಳವರು ಈ ತಳಿಯನ್ನು ಬೆಳೆಸಬಹುದು.
ಇದರ ಆಯಸ್ಸು 25 ರಿಂದ 30 ವರ್ಷಗಳ ವರೆಗೆ ಇರುತ್ತದೆ. ಮತ್ತು ಮೊದಲ ಮಾರಿ ಹಾಕಲು ಇದು 6 ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. ಮತ್ತು ಒಂದು ಮರಿಯಿಂದ ಇನ್ನೊಂದು ಮಾರಿ ಹಾಕಲು 2 ರಿಂದ 3 ವರ್ಷ ಸಮಯ ತೆಗೆದು ಕೊಳ್ಳುತ್ತದೆ. ಇದರ ಉದ್ದ 4.7 ಫೀಟ್ ಇದ್ದು ಇದು 650 ರಿಂದ 700ಕೆಜಿ ತೂಕ ಇದೆ. ಯಾರಾದರೂ ಡೈರಿ ಫಾರ್ಮಿಂಗ್ ಮಾಡುವ ಯೋಚನೆಯಲ್ಲಿ ಇದ್ದರೆ , ಈ ತಳಿಯನ್ನು ಸಾಕುವ ಬಗೆಗೆ ಯೋಚನೆ ಮಾಡಬಹುದು.