ಈ ಐದು ಕಾರಣಗಳಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ.

370

ರಾಜ್ಯದಲ್ಲಿ ರಾಜಕಾರಣ ತುಂಬಾ ಜೋರಾಗಿಯೇ ನಡೆಯುತ್ತಿದೆ, ಸಂಪುಟ ವಿಸ್ತರಣೆ ಮಾಡುವ ಮುಂಚೆ ಇಂದ ಹಾಗು ನಂತರ ಮಂತ್ರಿ ಸ್ಥಾನ ಸಿಗಲಿಲ್ಲ ಅಂತ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಹಳ ಪ್ರಯತ್ನ ನಡೆಯುತ್ತಿದೆ. ಇದು ವಿಪಕ್ಷಗಳಿಗಿಂತ ಹೆಚ್ಚು ಸ್ವಪಕ್ಷದವರೇ ಇಂತಹ ಕಾರ್ಯ ಮಾಡುತ್ತಿದ್ದರೆ. ಇದಕ್ಕೆ ವಿಪಕ್ಷಗಳು ಬೆಂಬಲ ನೀಡಿದರೂ ಅವರ ಪ್ರಯತ್ನ ಹಿಂದೆಯೂ ಸಫಲವಾಗಿಲ್ಲ ಮುಂದೆಯೂ ಸಫಲವಾಗುವುದಿಲ್ಲ. ಅದಕ್ಕೆ ಕಾರಣಗಳೇನು ಇಲ್ಲಿದೆ ಓದಿ.

ಮೊದಲನೇ ಕಾರಣ– ಬಿಜೆಪಿ ಒಂದು ಸೈದ್ದಂತಿಕವಾಗಿ ಬಲಿಷ್ಠವಾಗಿರುವ ಪಕ್ಷವಾಗಿದ್ದು ಸಿದ್ದಂತಕ್ಕೆ ಅನುಗುಣವಾಗಿ ತನ್ನ ಕೆಲಸ ಮಾಡುತ್ತ ಬಂದಿದೆ ಅದಕ್ಕೆ ಕಾರಣವಾಗಿ ದೇಶದ ಬಹುತೇಕ ರಾಜ್ಯದಲ್ಲಿ ಬಿಜೆಪಿ ತನ್ನ ಸರಕಾರ ರಚನೆ ಮಾಡಿದೆ. ಕೇಂದ್ರದಲ್ಲಿಯೂ ತನ್ನ ಎರಡು ಬರಿ ಅಧಿಕಾರ ಸ್ಥಾಪಿಸಿ ಜನರ ಮನ್ನಣೆ ಗಳಿಸಿದ ಪಕ್ಷ ಬಿಜೆಪಿ. ಕೇಂದ್ರ ನಾಯಕರು ಸೈದ್ದಂತಿಕವಾಗಿ ಯಾರು ಬಲಿಷ್ಠರೊ ಅಂತವರನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗಿ ನೇಮಕ ಮಾಡಿದ್ದಾರೆ. ಇದು ಎಲ್ಲ ರಾಜ್ಯಗಳಲ್ಲಿಯೂ ಇದೆ ತರಹದ ಪ್ರಕ್ರಿಯೆ ನಡೆದಿದೆ. ಆದ್ದರಿಂದ ಯಡಿಯೂರಪ್ಪ ಅವರನ್ನು ಕೇಂದ್ರ ನಾಯಕರು ನೇಮಕ ಮಾಡಿರುವುದರಿಂದ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಮತ್ತೆ ಬರುದಿಲ್ಲ.

ಎರಡನೇ ಕಾರಣ– ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿರುವ ಏಕೈಕ ರಾಜ್ಯ ಎಂದರೆ ಅದು ಕರ್ನಾಟಕ, ಅಲ್ಲದೆ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಭಲವಾಗಿ ನೆಲೆಯೂರಿರುವ ಪಕ್ಷ ಎಂದರೆ ಬಿಜೆಪಿ. ಅಕ್ಕ ಪಕ್ಕ ದ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗು ಎಡಚರ ಪಕ್ಷಗಳು ಅಧಿಕಾರ ನಡೆಸುತ್ತಿರುವಾಗ ಒಂದು ರಾಜ್ಯದಲ್ಲಾದರೂ ಬಿಜೆಪಿ ಬಲಾಢ್ಯವಾಗಿರಬೇಕು. ಇದರಿಂದ ಬಿಜೆಪಿ ಮುಂದಿನ ದಿನಗಳಲ್ಲಿ ನೆರೆ ರೆಅಜ್ಯಗಳಲ್ಲಿ ಅಧಿಕಾರ ಸ್ಥಾಪನೆಗೆ ಅವಕಾಶ ಸಿಗುತ್ತದೆ. ಉದಾಹರಣೆಗೆ ಅಣ್ಣಾಮಲೈ ತಮಿಳುನಾಡಿನಲ್ಲಿ ಪಕ್ಷ ಬಲಪಡಿಸಲು ಕರ್ನಾಟಕದ ಸಹಾಯ ಬಹಳಷ್ಟಿದೆ, ಅದೇ ರೀತಿ ಕೇರಳದಲ್ಲಿಯೂ ಕೂಡ. ಆದಕಾರಣ ಸಮರ್ಥ ನಾಯಕ ಇಲ್ಲದಿದ್ದರೆ ಇದು ಖಂಡಿತ ಸಾಧ್ಯವಿಲ್ಲ, ಅದಕ್ಕೆ ನಾಯಕ ಬದಲಾವಣೆ ವಿಷಯ ಬಂದಾಗ ಕೇಂದ್ರ ನಾಯಕರು ಬದಲಾವಣೆ ಮಾಡುವುದು ಬಹಳ ದೂರದ ಮಾತು.

ಮೂರನೇ ಕಾರಣ– ಕರ್ನಾಟಕದಲ್ಲಿ ಪಕ್ಷದ ಅಸ್ತಿತ್ವವೇ ಇಲ್ಲದ ಸಂಧರ್ಭದಲ್ಲಿ ರಾಜ್ಯವಿಡೀ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಇಂದು ಎಲ್ಲರು ಹೇಳಬಹುದು ನಾವು ಪಕ್ಷಕ್ಕಾಗಿ ದುಡಿದಿದ್ದೇವೆ ಹಾಗೆ ಹೀಗೆ ಎಂದು ಆದರೆ ದುಡಿಯಲು ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ನೆರೆಯೂರಿ ನಿಲ್ಲುವಂತೆ ಮಡಿದು ಯಡಿಯೂರಪ್ಪ. ಅದ ಕಾರಣ ಯೆಡಿಯೂರಪ್ಪ ಅವರನ್ನು ಅಲಂಗಡಿಸಲು ಅಷ್ಟು ಸುಲಭದ ಮಾತಲ್ಲ. ನಾಲ್ಕನೇ ಕಾರಣ– ಜಾತಿ ಸಮೀಕರಣ ಕರ್ನಾಟಕದಲ್ಲಿ ಜಾತಿ ರಾಜಕಾರಣ ಬಹಳಷ್ಟು ನಡೀತಿದೆ, ಅದು ಕೇವಲ ಒಂದು ಪಕ್ಷದ್ದು ಮಾತ್ರವಲ್ಲ ಇರುವ ಎಲ್ಲ ಪಕ್ಷಗಳು ಇದನ್ನು ಅನುಸರಿಸುತ್ತಿವೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಡಿಯೂರಪ್ಪಹಾಗು ಅವರ ಲಿಂಗಾಯತ ವೀರಶೈವ ವೋಟ್ ಬ್ಯಾಂಕ್, ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಾತಿಯ ಜನರಲ್ಲಿ ಲಿಂಗಾಯತ ಬಹುದೊಡ್ಡ ಪಾಲು ಹೊಂದಿದೆ. ಆದ್ದರಿಂದ ಯೆಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಬಿಜೆಪಿ ಗೆ ಬಹುದೊಡ್ಡ ಹೊಡೆತ ಬೀಳುತ್ತದೆ, ಇದಕ್ಕಿಂತ ಮೊದಲು ಇದೆ ರೀತಿ ಆದಾಗ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದರು ಇದರ ಕಾರಣ ಬಿಜೆಪಿ ಅಧಿಕಾರ ಕಳೆದುಕೊಂಡಿತು ಹಾಗು ಬಹಳ ನಷ್ಟ ಅನುಭವಿಸಿತ್ತು, ಇದೆ ತಪ್ಪು ಇನ್ನೊಮ್ಮೆ ನಡೆಯಲು ಬಿಜೆಪಿ ಕೇಂದ್ರ ನಾಯಕರು ಅವಕಾಶ ಕೊಡುವುದಿಲ್ಲ.

ಐದನೇ ಕಾರಣ– ಯಡಿಯೂರಪ್ಪ ಅವರ ಮಕ್ಕಳು ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವಿಕೆ ಯಡಿಯೂರಪ್ಪ ಅವರಿಗೆ ದೊಡ್ಡ ಆನೆಬಲ ಬಂದಂತಿದೆ, ಮಕ್ಕಳು ಬಿ ವೈ ರಾಘವೇಂದ್ರ ಹಾಗು ಬಿ ವೈ ವಿಜಯೇಂದ್ರ ನಿಂತ ಚುನಾವಣೆಯಲ್ಲಿ ಗೆದ್ದು ತಮ್ಮ ಬಲಿಷ್ಠತೆಯನ್ನು ತೋರಿಸಿದ್ದಾರೆ, ಅದಾದ ನಂತರ ನಡೆದ ಉಪಚುನಾವಣೆ ಆಗಿರಬಹುದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಗೆಲುವು ಸಾದಿಸಿದ್ದಾಗಿರಬಹುದು ಅದರಲ್ಲಿ ಯಾದಿತುರಪ್ಪ ಅವರ ಮಕ್ಕಳ ಯೋಗಾಧಾನ ಬಹಳಷ್ಟಿದೆ. ಈ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಪಕ್ಷದಲ್ಲಿ ಯಡಿಯೂರಪ್ಪ ಅವರ ನಿಷ್ಠಾವಂತ ಮಂತ್ರಿ ಹಾಗು ಶಾಸಕರು ಇರುವುದರಿಂದ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎನ್ನುವುದು ನಮ್ಮ ಅಭಿಪ್ರಾಯ.

Leave A Reply

Your email address will not be published.