ಈ ಒಂದು ಕಾರಣಕ್ಕೆ ಇಂಡಿಗೋ ವೆಬ್ಸೈಟ್ ಅನ್ನೇ ಹ್ಯಾಕ್ ಮಾಡಿ ಬಿಟ್ಟ ಭೂಪ? ನಂತರ ತನ್ನ ಕೆಲಸವಾದ ಮೇಲೆ ಟ್ವಿಟ್ಟರ್ ಅಲ್ಲಿ ಹಂಚಿಕೊಂಡ ವ್ಯಕ್ತಿ.

778

ಜೀವನದಲ್ಲಿ ನಾವು ಹಲವಾರು ಘಟನೆಗಳನ್ನು ಎದುರಿಸುತ್ತೇವೆ. ಆದರೆ ಒಮ್ಮೊಮ್ಮೆ ನಡೆಯುವ ಘಟನೆ ಎಷ್ಟರ ಮಟ್ಟಿಗೆ ನಮ್ಮ ತಾಳ್ಮೆ ಕಳೆದು ಕೊಳ್ಳುವಂತೆ ಮಾಡುತ್ತದೆ ಎಂದು ನಮಗೂ ಗೊತ್ತಿರುವುದಿಲ್ಲ. ಅಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏನಿದು ಘಟನೆ ಬನ್ನಿ ತಿಳಿಯೋಣ. ನಂದನ್ ಕುಮಾರ್ ಇವರ ಹೆಸರು ಮೂಲತಃ ಬೆಂಗಳೂರಿನವರು. ಇಲ್ಲೇ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಾರೆ. ಇವರು ಕೆಲಸದ ನಿಮಿತ್ತ ಪಾಟ್ನಾ ಗೆ ಹೋಗಿದ್ದಾಗ, ಅಲ್ಲಿಂದ ವಾಪಾಸ್ಸು ಬರಲು ಇಂಡಿಗೋ ವಿಮಾನ ಹಿಡಿದು ಬಂದಿದ್ದರು.

ಇಲ್ಲೇ ನಡೆದದ್ದು ಘಟನೆ, ಅವರ ಸಹ ಪ್ರಯಾಣಿಕ ಒಬ್ಬ ಇವರ ಹಾಗೆ ಬ್ಯಾಗ್ ಹಿಡಿದು ಕೊಂಡಿದ್ದ. ಇಳಿಯುವ ಅವಸರದಲ್ಲಿ ಬ್ಯಾಗ್ ಅದಲು ಬದಲು ಆಗಿತ್ತು. ಮನೆಗೆ ಬಂದು ನೋಡಿದ್ದಾಗಲೆ ಗೊತ್ತಾಗಿದ್ದು. ಇಂಡಿಗೋ ಕಂಪನಿಯ ಕಸ್ಟಮರ್ ಕೇರ್ ಗೆ ಕಾಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಸುಮಾರು ಬಾರಿ ಪ್ರಯತ್ನ ಮಾಡಿ ಕೊನೆಗೂ ಸಿಕ್ಕಿದಾಗ ಹೇಳಿದರು ನಾವು ಮತ್ತೊಂದು ಗ್ರಾಹಕರ ಬಳಿ ವಿಚಾರಿಸಿ ಕಾಲ್ ಮಾಡುತ್ತೇವೆ ಎಂದು. ಆದರೆ ಯಾವುದೇ ರೀತಿಯ ರಿಟರ್ನ್ ಕರೆ ಬರಲಿಲ್ಲ. ಒಂದು ದಿನ ಕಾದರೂ ಆದರೂ ಏನು ಅಪ್ಡೇಟ್ ಇಲ್ಲ. ಮತ್ತೊಮ್ಮೆ ಕಾಲ್ ಮಾಡಿದಾಗ ಆ ಕಸ್ಟಮರ್ ಕೇರ್ ತೆಗೆಯುವುದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದರು.

ಇಷ್ಟೊಂದು ಅಸಡ್ಡೆ ತೋರಿದ್ದ ಕಾರಣ ನಂದನ್ ಅವರು ಇಂಡಿಗೋ ಕಂಪನಿಯ website ಅನ್ನೇ ಹ್ಯಾಕ್ ಮಾಡಿ ಬಿಟ್ಟರು. ಅದರಿಂದ ಸಹ ಪ್ರಯಾಣಿಕನ ಮೊಬೈಲ್ ನಂಬರ್ ತೆಗೆದು ನೇರವಾಗಿ ಸಂಪರ್ಕ ಮಾಡಿದಾಗ ಅವರಿಗೂ ವಿಷಯ ಗೊತ್ತಾಗಿ ಅಚ್ಚರಿ ಆಗಿತ್ತು. ನಡೆದ ಎಲ್ಲಾ ಘಟನೆ ಹೇಳಿದಾಗ ಅವರು ಕೂಡ ಬೆಂಗಳೂರಿನವರೇ ಆಗಿದ್ದ ಕಾರಣ ಬ್ಯಾಗ್ ಅದಲು ಬದಲು ಮಾಡಿಕೊಂಡರು. ಇದೆ ವಿಚಾರವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಂಪನಿ ತೋರಿದ ಅಸಡ್ಡೆ ಬಗ್ಗೆ ವಿವರಿಸಿದ್ದಾರೆ. ಮತ್ತು ಅವರ ವೆಬ್ಸೈಟ್ ನಲ್ಲಿ ಇರುವ ಲೋಪದೋಷ ಬಗ್ಗೆ ಕೂಡ ಗಮನಕ್ಕೆ ತಂದಿದ್ದು. ಯಾವುದೇ ಪ್ರಯಾಣಿಕರ ಡಾಟಾ ಇಷ್ಟು ಬೇಗ ಲೀಕ್ ಆಗಬಾರದು ಸರಿಯಾದ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.