ಈ ಒಂದು ಜ್ಯೂಸ್ ಶಾಪ್ ನಲ್ಲಿ ಯಾವುದೇ ಪ್ಲಾಸ್ಟಿಕ್ ಅಥವಾ ಗಾಜಿನ ಲೋಟೆಯಲ್ಲಿ ಜ್ಯೂಸ್ ನೀಡುವುದಿಲ್ಲ? ಹೊಸ ಶೈಲಿಯಲ್ಲಿ ಕೆಲಸ ನಡೆಯುತ್ತೆ ಇಲ್ಲಿ.

496

ಜ್ಯೂಸ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಉತ್ತಮ ಆರೋಗ್ಯ ಕಾಪಾಡಲು ಎಲ್ಲರೂ ಜ್ಯೂಸ್ ಇಷ್ಟ ಪಡುತ್ತಾರೆ. ಹಾಗೆಯೇ ಈ ಬೇಸಿಗೆ ಸಮಯ ಅಥವಾ ಮಧ್ಯಾಹ್ನ ದ ಸುಡು ಬಿಸಿಲಿಗೆ ತಣ್ಣನೆ ಜ್ಯೂಸ್ ಸಿಕ್ಕಿತು ಎಂದರೆ ಆಯ್ಯಬ್ಬ ಎನ್ನುವ ಭಾವನೆ ಬರುತ್ತದೆ. ಆದರೆ ಇಲ್ಲೊಬ್ಬ ಜ್ಯೂಸ್ ಮಾರುವವರು ಜ್ಯೂಸ್ ಏನೋ ತಯಾರಿಸುತ್ತಾರೆ ಆದರೆ ಅದನ್ನು ಗ್ಲಾಸ್ ನಲ್ಲಿ ಕೊಡುವುದಿಲ್ಲ ? ಅರೆ ವಿಚಿತ್ರ ಎನಿಸ ಬಹುದು ಆದರೂ ಸತ್ಯ ಇದು.

ಇವರ ಹೆಸರು ಆನಂದ್ ರಾಜ, ಬೆಂಗಳೂರಿನ ನಿವಾಸಿ ಆದ ಇವರು ರೇಡಿಯೋ ಜಾಕಿ ಆಗಿದ್ದರು. ತಮ್ಮ ತಂದೆ ನಡೆಸುತ್ತಿದ್ದ ಜ್ಯೂಸ್ ಸೆಂಟರ್ ಅನ್ನು ಮುಂದುವರೆಸಲು ಇವರು ರೇಡಿಯೋ ಹಾಕಿ ಕೆಲಸ ಬಿಟ್ಟು ಜ್ಯೂಸ್ ಶಾಪ್ ನಲ್ಲಿ ಕುಳಿತರು. ಅದೆಷ್ಟು ಪ್ಲಾಸ್ಟಿಕ್ ಪೇಪರ್ ಕಪ್ ಗಳು ದಿನ ನಿತ್ಯ ಉತ್ಪತ್ತಿ ಆಗುತ್ತಿತ್ತು ಇದನ್ನು ಕಂಡು ಇವರು ಹೊಸದೇನಾದರು ಮಾಡಬೇಕು ಎಂದು ಯೋಚಿಸಿ ಆರಂಭಿಸಿದ್ದೆ ಈ “Eat Raja” ಇದು ಇವರ ಜ್ಯೂಸ್ ಸೆಂಟರ್ ಹೆಸರು. ಇವರು ಹೇಳುವ ಪ್ರಕಾರ ಪ್ರತಿ ತಿಂಗಳು ಇಡೀ ಭೂಮಿಯಲ್ಲಿ 500 ಬಿಲಿಯನ್ ನಶ್ಟು ಪ್ಲಾಸ್ಟಿಕ್ ಗ್ಲಾಸ್ ಗಳ ಉಪಯೋಗ ಆಗುತ್ತದೆ ಇದು ಪ್ರಕೃತಿಗೆ ಎಷ್ಟು ಮಾರಕ ಆದರಿಂದಲೆ ನಾನು ಈ ಒಂದು ಯೋಜನೆ ಜಾರಿಗೆ ತಂದೆ.

ಅವರು ಇಲ್ಲಿ ಯಾವ ಹಣ್ಣಿನಿಂದ ಜ್ಯೂಸ್ ತಯಾರಿಸುತ್ತಾರೆ ಅದೇ ಹಣ್ಣನ್ನು ಗ್ಲಾಸ್ ಆಕಾರದಲ್ಲಿ ಕೇವಲ ಅದರ ತಿರುಳು ಮಾತ್ರ ತೆಗೆದು ಜ್ಯೂಸ್ ತಯಾರಿಸುತ್ತಾರೆ. ನಂತರ ಅದರಲ್ಲೇ ಅವರು ಜ್ಯೂಸ್ ಸರ್ವ್ ಮಾಡುತ್ತಾರೆ. ಕೆಲವೊಂದು ಹಣ್ಣಿನ ಸಿಪ್ಪೆಯನ್ನು ಜ್ಯೂಸ್ ಕುಡಿದು ನಂತರ ತಿನ್ನಬಹುದು. ತಿನ್ನಲು ಆಗದ ಹಣ್ಣಿನ ಸಿಪ್ಪೆಗಳನ್ನು ಇವರು ದನಗಳಿಗೆ ತೆಗೆದುಕೊಂಡು ಹಾಕಿ ಬರುತ್ತಾರೆ. ಅದು ಏನೇ ಇರಲಿ ಪ್ರಕೃತಿ ಬಗೆಗಿನ ಇವರ ಈ ಒಂದು ಹೆಜ್ಜೆ ಮೆಚ್ಚಲೇ ಬೇಕು. ಮುಂದಕ್ಕೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಜ್ಯೂಸ್ ಸೆಂಟರ್ ತೆರೆಯಬೇಕು ಎಂದು ಅವರು ಆಶಿಸುತ್ತಾ ಇದ್ದಾರೆ. ಅವರ ಎಲ್ಲಾ ಆಶಯಗಳು ಈಡೇರಲಿ ಎಂದು ಹಾರೈಸುವ.

Leave A Reply

Your email address will not be published.