ಈ ಒಂದು ದೇಶದಲ್ಲಿ ಇನ್ನೂ ಕೇವಲ 5 ದಿನಕ್ಕೆ ಆಗುವಷ್ಟು ಡೀಸೆಲ್ ಮಾತ್ರ ಇದೆ. ಯಾವುದು ಈ ದೇಶ? ಯಾತಕ್ಕಾಗಿ ಈ ಸಮಸ್ಯೆ ಎದುರಾಯಿತು?
ಪೆಟ್ರೋಲ್ ಡೀಸೆಲ್ ಅತ್ಯಂತ ಅವಶ್ಯಕತೆ ಇರುವ ಸಂಪನ್ಮೂಲ ಗಳಲ್ಲಿ ಒಂದು. ಇದು ಇಲ್ಲವಾದರೆ ಇಡೀ ದೇಶದ ಎಲ್ಲಾ ಕಾರ್ಯ ಚಟುವಟಿಕೆ ನಿಲ್ಲುತ್ತದೆ. ಯಾಕಂದರೆ ಎಲ್ಲವು ಇದನ್ನೇ ಅವಲಂಬಿತವಾಗಿದೆ.ದೇಶದ ದಿನ ನಿರ್ವಹಣೆ ಆಗಬೇಕು ಎಂದರೆ ಇದು ಮೂಲ ಎಂದರೂ ತಪ್ಪಾಗಲಿಕ್ಕಿಲ್ಲ. ಇದರ ಗೋಜನ್ನು ತಪ್ಪಿಸಲೆಂದು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಮತ್ತು ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಾ ಇರುವುದು. ಹೀಗೆ ಇಂದು ಒಂದು ದೇಶದ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆ ಎಂದರೆ ಆ ದೇಶದಲ್ಲಿ ಇನ್ನು ಕೇವಲ ಐದು ದಿನಗಳಲ್ಲಿ ಡೀಸೆಲ್ ಮುಗಿದು ಹೋಗಲಿದೆ.
ಹೌದು ಅಚ್ಚರಿ ಎನಿಸಬಹುದು ಆದರೆ ಅದು ಸತ್ಯ ಸಂಗತಿ. ಆ ದೇಶ ಮತ್ಯಾವುದೋ ಅಲ್ಲ ನಮ್ಮ ನೆರೆಯ ದೇಶ ಪಾಕಿಸ್ತನ. ಹೌದು ಪಾಕಿಸ್ತಾನದಲ್ಲಿ ಕೇವಲ 5 ದಿನಕ್ಕೆ ಸಾಕಾಗುವಷ್ಟು ಡೀಸೆಲ್ ಮಾತ್ರ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಭಿನ್ನಾಭಿಪ್ರಾಯ ದಿಂದಾಗಿ ಹಲವಾರು ದೇಶಗಳು ಈ ಸಮಸ್ಯೆ ಎದುರಿಸುತ್ತಾ ಇದೆ . ಇದರಿಂದಾಗಿ ತೈಲ ಬೆಲೆ ಕೂಡ ಗಗನಕ್ಕೆ ಏರಿದೆ.
ಪಾಕಿಸ್ತಾನ ಸರ್ಕಾರ ಯಾವುದೇ ತೈಲ ಕಂಪನಿಗಳಿಗೆ ಸಾಲ ನೀಡುತ್ತಾ ಇಲ್ಲ. ಸಂಪೂರ್ಣವಾಗಿ ನಿಲ್ಲಿಸಿದೆ. ಇದರ ಪರಿಣಾದಿಂದಾಗಿ ಯಾವುದೇ ಕಂಪನಿಗಳು ತೈಲ ಖರೀದಿಗೆ ಮುಂದಾಗುತ್ತಿಲ್ಲ. ಇನ್ನು ಐದು ದಿನ ಎಂದರೆ ಈ ದೇಶದಲ್ಲಿ ಡೀಸೆಲ್ ಮುಗಿದೇ ಹೋಗುತ್ತದೆ. ಹಲವಾರು ಮಿತ್ರ ರಾಷ್ಟ್ರಗಳ ಮೊರೆ ಹೋದರು ಏನು ಪ್ರಯೋಜನ ಆಗುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಬರುತ್ತಾ ಇದೆ. ಇಷ್ಟು ಮಾತ್ರ ಅಲ್ಲದೆ ಅವರ ಸಾಲದ ಹೊರೆ ಕೂಡ ಗಗನಕ್ಕೇರಿದೆ. ತಿನ್ನುವ ಆಹಾರ ವಸ್ತುಗಳಿಗೆ ಬೆಲೆ ಸಿಕಾಪಟ್ಟೆ ಏರಿಕೆ ಆಗಿದೆ.