ಈ ದೊಡ್ಡ ದೊಡ್ಡ ಕಂಪನಿಗಳ ಸಿಇಒ ಗಳು ಪಡೆಯುತ್ತಿರುವುದು ಕೇವಲ 1 ಡಾಲರ್ ಸಂಬಳ ಮಾತ್ರ. ಯಾತಕ್ಕಾಗಿ? ಯಾವುದು ಆ ಕಂಪನಿಗಳು?

654

ಈ ಬೆಳಗುತ್ತಿರುವ ಜಗತ್ತಿನಲ್ಲಿ ವ್ಯಾಪಾರ ವಹಿವಾಟುಗಳು ಮಹತ್ತರ ಪಾತ್ರ ವಹಿಸುತ್ತದೆ. ಅದೆಷ್ಟೋ ಜನರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಬೇಕು ಎಂಬ ಆಸೆಯಿಂದ ಇರುತ್ತಾರೆ. ಅದಕ್ಕಾಗಿ ಅದೆಷ್ಟೋ ಓದುತ್ತಾರೆ ನಿದ್ದೆ ಬಿಟ್ಟು ಶ್ರಮ ಪಡುತ್ತಾರೆ. ಅದೆಷ್ಟೋ ಜನರ ಆಸೆಗಳು ಈಡೇರುತ್ತದೆ ಲಕ್ಷಾಂತರ ರೂಪಾಯಿ ಸಂಪಾದನೆ ಕೂಡ ಮಾಡುತ್ತಾರೆ. ಅವರು ಇಷ್ಟೊಂದೆಲ್ಲಾ ಸಂಪಾದನೆ ಮಾಡುವಾಗ ಅವರ ಕಂಪನಿ ಡೈರೆಕ್ಟರ್ ಸಿಇಒ ಗಳಿಗೆ ಎಷ್ಟು ಸಂಪಾದನೆ ಇರಬಹುದು ಎಂದು ಯೋಚನೆ ಬರುವುದು ಸಹಜ. ಆದರೆ ಇಂದು ನಾವು ತಿಳಿಯಲು ಹೊರಟ ಈ ಕಂಪನಿಗಳ ಸಿಇಒ ಗಳು ಪಡೆಯುವುದು ಕೇವಲ 1 ಡಾಲರ್ ಸಂಬಳ ಮಾತ್ರ. ಅಚ್ಚರಿ ಎನಿಸಿದರೂ ಸತ್ಯ ಸಂಗತಿ. ಇದು ಸಣ್ಣ ಪುಟ್ಟ ಕಂಪನಿಗಳಲ್ಲ ಬದಲಾಗಿ ಹೆಚ್ಚು ಪ್ರಚಲಿತ ದಲ್ಲಿರುವ ಕಂಪನಿಗಳು . ಹಾಗಾದರೆ ಯಾವುದು ಆ ಕಂಪನಿಗಳು ? ಏನಿದು 1 ಡಾಲರ್ ಸಂಬಳ ಹಿಂದಿನ ಗುಟ್ಟು ಬನ್ನಿ ತಿಳಿಯೋಣ.

ಆ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಬರುವುದು ಅಲೋನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ, ಮಾರ್ಕ್ ಜುಕರ್ ಬರ್ಗ್ ಅವರ ಫೇಸ್ಬುಕ್, ಭಾರತದ ಇನ್ಫೋಸಿಸ್, ಹೌದು ಅಚ್ಚರಿ ಆದರೂ ಇದು ಸತ್ಯ ಸಂಗತಿ ಈ ಎಲ್ಲಾ ಕಂಪನಿಯ ಸಿಇಒ ಗಳು ಪಡೆಯುವುದು ಕೇವಲ 1 ಡಾಲರ್ ಸಂಬಳ ಹಾಗಾದರೆ ಇಷ್ಟು ಕಡಿಮೆ ಸಂಬಳಕ್ಕೆ ಯಾರು ಯಾಕೆ ಕೆಲಸ ಮಾಡಬೇಕು ಎಂಬ ಯೋಚನೆ ನಿಮ್ಮೊಳಗೆ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ

ಈ ಕಂಪನಿಯ ಸಿಇಒ ಗಳು ಸ್ಯಾಲರಿ ಬದಲಿಗೆ ಕಂಪನಿಯ ಷೇರುಗಳನ್ನು ಪಡೆಯುತ್ತಾರೆ. ಕಡಿಮೆ ಸಂಬಳ ಇರುವುದರಿಂದ ಆದಾಯ ತೆರಿಗೆಯ ಹೊರೆ ಕಡಿಮೆ ಆಗುತ್ತದೆ. ಮತ್ತು ಶೇರುಗಳಿಂದ ಬಂದ ಆದಾಯ ಕ್ಯಾಪಿಟಲ್ ಗೈನ್ ಎಂದು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ ಮತ್ತು ಇದಕ್ಕೆ ತೆರಿಗೆ ಕಡಿಮೆ ಆಗಿರುತ್ತದೆ. ಸಿಇಒ ಸ್ಯಾಲರಿ ಬದಲಿಗೆ ಷೇರು ಖರೀದಿಸಿದಾಗ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜನರಿಗೆ ಕಂಪನಿಯ ಮೇಲೆ ನಂಬಿಕೆ ಬರುತ್ತದೆ ಮತ್ತು ಅವರು ಇದರಿಂದ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಾರೆ. ಅದೇನೇ ಇರಲಿ ಯಾವುದಾದರೂ ಒಂದು ರೂಪದಲ್ಲಿ ಸಿಇಒ ಲಾಭ ಪಡೆದೇ ಪಡೆಯುತ್ತಾನೆ. ಆದರೆ ಈ ಹೂಡಿಕೆಗಳು ದೀರ್ಘ ಕಾಲದ ಹೂಡಿಕೆ ಆಗಿದ್ದು ಉತ್ತಮ ಆದಾಯ ಒದಗಿಸುತ್ತದೆ.

Leave A Reply

Your email address will not be published.