ಈ ನಾಲ್ಕು ಗೆಳೆಯರು ಕೈತುಂಬಾ ಸಂಬಳ ಇದ್ದ ಕೆಲಸವನ್ನು ಬಿಟ್ಟು ಮಾಡಿದ ಈ ಉದ್ಯಮ ಈಗ 90 ಕೋಟಿ ವಹಿವಾಟು ನಡೆಸುತ್ತಾ ಇದೆ. ಯಾವುದು ಈ ಉದ್ಯಮ ಉದ್ಯಮ?
ಗೆಳೆಯರು ಎಂದರೆ ಹಾಗೆ ನೋಡಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಇರುತ್ತಾರೆ. ಅದು ಕಷ್ಟ ಆಗಲಿ ಅಥವಾ ಸುಖ ಆಗಲಿ ಎಲ್ಲವನ್ನೂ ಸಂಬಾಲಿಸಿ ಮುಂದಕ್ಕೆ ಸಾಗುತ್ತಾರೆ. ನಿಜವಾದ ಗೆಳೆಯರು ಕೇವಲ ಸಂತಸದ ಸಮಯದಲ್ಲಿ ಬರುವುದಿಲ್ಲ. ಸಂತಸ ಇಲ್ಲದೆ ಬರೀ ನೋವು ಇದ್ದಾಗ ಬಂದು ಹೆಗಲು ಕೊಡುವವನೆ ಜನುಮದ ಗೆಳೆಯ ಆಗುತ್ತಾನೆ. ನಾವು ಇಂದು ತಿಳಿಯಲು ಹೊರಟ ಈ ವಿಚಾರ ಕೂಡ ಗೆಳೆಯರದ್ದು. ಕೈತುಂಬಾ ಸಂಬಳ ಇದ್ದರೂ ಯಾಕೋ ಮತ್ತೊಬ್ಬರ ಹಂಗಿನಲ್ಲಿ ಬದುಕುತ್ತಿದ್ದೇವೆ ಎಂಬ ಭಾವನೆ ಮೂಡಿ ಶುರು ಮಾಡಿದ್ದರು ಸಣ್ಣ ವಹಿವಾಟು ಇದೀಗ ಅದು 90 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಾ ಇದೆ. ಬನ್ನಿ ತಿಳಿಯೋಣ ಈ ಸ್ನೇಹಿತರ ಬಗ್ಗೆ.
ಈ ವಹಿವಾಟಿನ ಮುಖ್ಯ ರೂವಾರಿ CA ಅಭಿನವ್ ಮೂಲತಃ ಇವರು ಜಾರ್ಕಂಡ್ ನವರು . ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ , ವಿದೇಶದ MNC ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಾ ಇದ್ದರು. ಆದರೆ ಜೀವನದಲ್ಲಿ ಯಾಕೋ ಬೇಸತ್ತು ಏನಾದರೂ ಹೊಸತು ಮಾಡಬೇಕು ಎಂದು ತನ್ನ 7 ಜನ ಸ್ನೇಹಿತರಲ್ಲಿ ಅವರ ಬ್ಯುಸಿನೆಸ್ ಐಡಿಯಾ ಇಟ್ಟರು. ಇದರಲ್ಲಿ ಮೂರು ಜನ ಸ್ನೇಹಿತರು ಪಾರ್ಟ್ನರ್ ಶಿಪ್ ಮಾಡಿಕೊಳ್ಳಲು ಒಪ್ಪಿಕೊಂಡರು ಅವರೇ ಅಭಿಷೇಕ್ ರಾಜ, ಹರ್ಷ ಟಕ್ಕರ್, ರಾಕೇಶ್ ಶರ್ಮಾ.
ಹೀಗೆ ಈ ನಾಲ್ವರು ಸ್ನೇಹಿತರು 2012ನೆಯ ಇಸವಿಯಲ್ಲಿ ಡೈರಿ ಫಾರ್ಮಿಂಗ್ ಬ್ಯುಸಿನೆಸ್ ಶುರು ಮಾಡಿದರು. ಎರಡು ವರ್ಷ ಕಷ್ಟ ಪಟ್ಟು ದುಡಿದರು 2014 ರಲ್ಲಿ ಇದು “Osam Diary” ಎಂಬ ಹೆಸರಿನಿಂದ ರಿಜಿಸ್ಟರ್ ಕೂಡಾ ಆಯಿತು. ಇಲ್ಲಿಂದ ಶುರು ಆಗಿದ್ದು ಯಶಸ್ಸಿನ ಓಟ. ನಾಲ್ಕು ಜನ ಸೇರಿ ಒಟ್ಟು ಒಂದು ಕೋಟಿ ರೂಪಾಯಿ ಹೂಡಿಕೆ ಮಾಡಿದರು. ಇದರಿಂದ 1 ಎಕರೆ ಜಮೀನು ಖರೀದಿ ಮಾಡಿದರು, ಡೈರಿ ಸೆಟ್ up ಮಾಡಲು 30 ಲಕ್ಷ ಕರ್ಚು ಮಾಡಿದರು, 40 ದನಗಳನ್ನು ಪಂಜಾಬ್ ನಿಂದಾ ತರಿಸಲಾಯಿತು. ಹೀಗೆ ಶುರುವಾದ ಈ ವಹಿವಾಟು ಇಂದು ದೇಶ ಅಲ್ಲದೇ ವಿದೇಶದಲ್ಲಿ ಕೂಡ ಹೆಸರುವಾಸಿ ಆಗಿದೆ.
ಇದೀಗ MNC ರೂಪದಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ. ಅದೇನೇ ಆಗಲಿ ಮಾಡಬೇಕು ಎಂಬ ಛಲದಿಂದ ಮಾಡಿದ ಈ ವಹಿವಾಟು ಇಂದು ಇವರನ್ನು ಕೋಟ್ಯಾಧಿಪತಿ ಮಾಡಿದೆ. ಆದರೆ ಆರಂಭದ ದಿನಗಳಲ್ಲಿ ಇವರೇ ನಾಲ್ಕು ಜನ ಸೇರಿ ದನದ ಸೆಗಣಿ ಬಾಚುತ್ತಿದ್ದರು ಎಂದು ಅಭಿನವ್ ಶಾ ಮೆಲುಕು ಹಾಕುತ್ತಾರೆ. ಯಶಸ್ಸು ಎಂಬುವುದು ಕೂತಲ್ಲಿಗೆ ಬರುವುದಿಲ್ಲ ಅದಕ್ಕೋಸ್ಕರ ಎಲ್ಲಾ ಪ್ರಯತ್ನ ಮಾಡಿದರೆ ಮಾತ್ರ ಬರುತ್ತದೆ ಎಂಬುವುದಕ್ಕೆ ಇವರೇ ಉದಾಹರಣೆ.