ಈ ರಾಜ್ಯಗಳಲ್ಲಿ ಸರಕಾರ ಸಬ್ಸಿಡಿ ನೀಡುವುದರಿಂದ ಅತೀ ಕಡಿಮೆ ಬೆಲೆಗೆ ಸಿಗುತ್ತಿದೆ ಎಲೆಕ್ಟ್ರಿಕ್ ವಾಹನಗಳು. ಬೆಲೆ ಎಷ್ಟು ನಿಗದಿ ಯಾಗಿದೆ?
ಭಾರತ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶ. ಅದರ ಅಭಿವೃದ್ಧಿ ಗೆ ಅಡ್ಡ ನಿಂತಿದೆ ಪೆಟ್ರೋಲ್ ಡೀಸೆಲ್ ಮೇಲಿನ ದರಗಳು. ಈ ದರಗಳು ಭಾರತದ ಆರ್ಥಿಕತೆಯನ್ನು ಕೆಳಗೆ ಎಳೆಯುತ್ತವೆ. ಇದೇ ಕಾರಣಕ್ಕೆ ಭಾರತ ಸರಕಾರ ಎಲೆಕ್ಟ್ರಿಕ್ ವಾಹನಗಳನ್ನು ಜನರ ಬಳಿ ಉಪಯೋಗಿಸುವಂತೆ ಮನವಿ ಮಾಡುತ್ತಿದೆ. ಅದೇ ರೀತಿ ಅದರ ಬಗ್ಗೆ ಅತೀ ಉತ್ಸುಕ ಕೂಡಾ ಆಗಿದೆ. ಕೆಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಅನೇಕ ಯೋಜನೆಗಳನ್ನು ತರುತ್ತಿದೆ. ಅದರಲ್ಲಿ ಒಂದು ಈ ಸಬ್ಸಿಡಿ. ಕೆಲವು ರಾಜ್ಯಗಳಲ್ಲಿ ಹಲವು ರೀತಿಯ ಸಬ್ಸಿಡಿ ದೊರೆಯುತ್ತಿದೆ. ನೀವು ನಿಮ್ಮ ಮೊದಲ ಎಲೆಕ್ಟ್ರಿಕ್ ವಾಹನ ಖರಿದಿಸಲು ಯೋಚಿಸಿದ್ದರೆ ಈ ಮಾಹಿತಿ ನಿಮಗೆ ಗೊತ್ತಿದ್ದರೆ ಉತ್ತಮ.
ಸರಕಾರ ವಾಹನದಲ್ಲಿ ಬಳಸುವ ಲಿಥಿಯಂ ಐಯಾನ್ ಬ್ಯಾಟರಿಗೆ ಅನುಗುಣವಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡುತ್ತವೆ. ಅಷ್ಟೇ ಅಲ್ಲದೇ ನೋಂದಣಿ ಶುಲ್ಕ, ಜಿಎಸ್‌ಟಿ, ಮೇಲೆ ಕೂಡಾ ವಿನಾಯತಿ ನೀಡುತ್ತದೆ. ಕೆಂದ್ರ ಸರಕಾರ ೨೦೧೯ ರಲ್ಲಿ ಈ ವಾಹನಗಳಿಗೆ ಉತ್ತೇಜಿಸಲು FAME ಯೋಜನರ ಜಾರಿಗೆ ತಂದಿತ್ತು. ಇದರಡಿಯಲ್ಲಿ ಪ್ರತಿ KWH ಗೆ ೧೦,೦೦೦ ಸಬ್ಸಿಡಿ ನೀಡಿತ್ತು.
೨೦೨೧ ರಲ್ಲಿ ಇದರ ಪ್ರನಾಣವನ್ನು ೧೫೦೦೦ ಕ್ಕೆ ಹೆಚ್ಚಿಸಲಾಯಿತು. ಈ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಎರಡನೇ ಸ್ಥಾನದಲಿದೆ. ಇಲ್ಲಿ ಪ್ರತೀ KWH ಗೆ ೫,೦೦೦ ಸಹಾಯಧನ ಸರಕಾರದಿಂದ ಸಿಗುತ್ತದೆ. ಮೇಘಾಲಯ, ಅಸ್ಸಾಂ, ಗುಜರಾತ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ೧೦,೦೦೦ ಸಹಾಯಧನ ಸಿಗುತ್ತಿದೆ. ಇಲ್ಲಿ ೩KWH ಗಾಡಿ ಖರೀದಿಸುವುದಾದರೆ 20,000 ದವರೆಗೆ ಸಹಾಯಧನ ಸಿಗುತ್ತದೆ. ಇದಲ್ಲದೇ ಕರ್ನಾಟಕ, ಆಂದ್ರ ಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ, ಪಂಜಾಬ್,ಮಧ್ಯ ಪ್ರದೇಶಗಳಲ್ಲಿ ಯಾವುದೇ ಸಬ್ಸಿಡಿ ಸಿಗುತ್ತಿಲ್ಲ. ಆದರೆ ಕೆಲ ರಾಜ್ಯಗಳಲ್ಲಿ ರೋಡ್ ಟ್ಯಾಕ್ಸ್ ಹಾಗು ನೋಂದಣಿ ಶುಲ್ಕ ದಲ್ಲಿ ವಿನಾಯತಿ ನೀಡಲಾಗಿದೆ.