ಈ ವ್ಯಕ್ತಿಯ ಮನೆಯಲ್ಲಿ 8 ಎಸಿ ಮತ್ತು 20 ಫ್ಯಾನ್ ಆದರೂ ವಿದ್ಯುತ್ ಬಿಲ್ ಸೊನ್ನೆ. ಅದೇಗೆ ಅಂತೀರಾ ಇಲ್ಲಿದೆ ಪೂರ್ತಿ ಉಳಿತಾಯದ ಉಪಾಯ?

6,050

ಪ್ರತಿ ಮನೆಯಲ್ಲೂ ಹಣ ಉಳಿತಾಯ ಮಾಡಬೇಕು ಅಂತ ಯೋಚನೆ ಇದ್ದೆ ಇರುತ್ತದೆ. ಇದು ಮೊದಲು ಶುರುವಾಗುವುದು ವಿದ್ಯುತ್ ಉಳಿತಾಯದಿಂದ. ಆದರೆ ಅಹಮದೇಬಾದ್ ನಲ್ಲಿ ನೆಲೆಸಿರುವ ಅಮರೀಶ್ ಪಟೇಲ್ ಎನ್ನುವವರ ಮನೆಯಲ್ಲಿ ೨೦ ಫ್ಯಾನ್, ೮ ಎ ಸಿ ಹಾಗು ೩ ಫ್ರಿಡ್ಜ್ ಇದ್ದು ಕೂಡ ವಿದ್ಯುತ್ ಬಿಲ್ ಬರುವುದಿಲ್ಲ. ಬದಲಾಗಿ ಇವರು ಹೆಚ್ಚುವರಿ ವಿದ್ಯುತ್ ಅನ್ನು ಮಾರಿ ವರ್ಷಕ್ಕೆ ಸುಮಾರು ಎರಡು ಸಾವಿರದಿಂದ ಮೂರೂ ಸಾವಿರದವರೆಗೂ ಹಣ ಗಳಿಸುತ್ತಾರೆ. ಅದೇಗೆ ಅಂತೀರಾ ಇಲ್ಲಿದೆ ನೋಡಿ ಪೂರಾ ಕಹಾನಿ.

ಎರಡು ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ಪ್ರತಿ ಮನೆಯ ರೀತಿ ಇವರಿಗೂ ತಿಂಗಳಿಗೆ ೨೫ ಸಾವಿರ ದ ವರೆಗೆ ವಿದ್ಯುತ್ ಬಿಲ್ ಕಟ್ಟಬೇಕಿತ್ತು. ಆದರೆ ಪರಿಸರ ಪ್ರೇಮಿ ಅಮರೇಶ್ ಪಟೇಲ್ ಸೂರ್ಯನ ಕಿರಣ ಬಳಸಿಕೊಂಡು ಖರ್ಚು ಕಡಿಮೆ ಮಾಡುವ ಹಾಗು ಪ್ರಕೃತಿ ಜೊತೆ ತಮ್ಮನ್ನು ತಾವು ಒಂದಿ ಕೊಳ್ಳುವ ಉಪಾಯ ಯೋಚಿಸಿದರು. ಅಮರೀಶ್ ಪಟೇಲ್ ಅವರು ಅಮೇರಿಕಾದಲ್ಲಿ ಇದ್ದಿದ್ದರು. ಅಲ್ಲಿ ದೇಹಕ್ಕೆ ಹಾನಿ ಮಾಡುವ ಭೋಜನದಿಂದ ಬರುವ ಕಾಯಿಲೆ ಗುಣಪಡಿಸುವ ವೈದ್ಯರಾಗಿದ್ದರು. ಅಲ್ಲಿ ನಿವೃತ್ತಿ ಪಡೆದ ಬಳಿಕ ಭಾರತಕ್ಕೆ ವಾಪಸಾದರು. ಅಹಮೆದಾಬಾದ್ ಅಲ್ಲಿ ಒಂದು ದೊಡ್ಡ ಶ್ರೀಮಂತ ಮನೆ ಕಟ್ಟಿಸಿದರು.

ಅಹಮೆದಾಬಾದ್ ಎಲ್ಲ ಕೂಡ ಸಾತ್ವಿಕ ಭೋಜನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರು ಸೋಲಾರ್ ಪ್ಯಾನೆಲ್ ಬಳಸಿ ಸೌರ ಚ್ಛಕ್ತಿ ಮೂಲಕ ವಿದ್ಯುತ್ ತಯಾರಿಸುತ್ತಾರೆ. ಈ ಸೌರ ಶಕ್ತಿ ಇಂದ ನೀರು ಬಿಸಿ ಮಾಡುವುದು, ನೀರು ಶುದ್ಧ ಗೊಳಿಸುವುದು, ಇವರು ಮುನಿಸಿಪಾಲಿಟಿ ನೀರನ್ನೇ ಬಳಸುತ್ತಾರೆ, ಆದರೆ ಆ ನೀರನ್ನು ಪ್ರತಿ ದಿನ ಬಿಸಿಲಿಗೆ ಇಡುತ್ತಾರೆ. ಇದರಿಂದ ಅದರಲ್ಲಿರುವ ಬ್ಯಾಕ್ಟಿರಿಯಾ ಇದರ ಮೂಲಕ ಹೋಗುತ್ತೆ ಎನ್ನುತ್ತಾರೆ ಅಮರೀಶ್ ಪಟೇಲ್. ಇದಲ್ಲದೆ ಅವರ ಕಾಲೋನಿ ಅಲ್ಲಿ ರೈನ್ ವಾಟರ್ ಹಾರ್ವೆಸ್ಟ್ ಕೂಡ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಸುಮಾರು ೧೫೦ ಮರ ಗಿಡಗಳಿವೆ.

ಅವರ ಪ್ರಕಾರ ಕಿಚನ್ ಗಾರ್ಡನ್ ಮಾಡುವುದರ ಮೂಲಕ ಭವಿಷ್ಯತ್ತಿನಲ್ಲಿ ಅವರಿಗೆ ಮಾರುಕಟ್ಟೆ ಇಂದ ತರಕಾರಿ ಹಣ್ಣು ತರಬೇಕೆಂದಿಲ್ಲ, ಮನೆಯಲ್ಲೇ ಎಲ್ಲವನ್ನು ಬೆಳೆಯುತ್ತಾರಂತೆ. ಕಳೆದ ೧೦ ವರ್ಷಗಳಿಂದ ಪ್ಲಾಸ್ಟಿಕ್ ಬಳಕೆ ಕೂಡ ಸಂಪೂರ್ಣವಾಗಿ ನಿಲ್ಲಿಸಿದ್ದಾರಂತೆ. ಮಾರುಕಟ್ಟೆ ಇಂದ ಏನನ್ನಾದರೂ ತರಬೇಕಾಗಿದ್ದರೆ ಅವರು ಬಟ್ಟೆ ಇಂದ ಮಾಡಲಾದ ಕೈ ಚೀಲವನ್ನು ಮಾತ್ರ ಬಳಸುತ್ತಾರಂತೆ. ಈ ತರ ಪ್ರಾಕೃತಿಕ ವಸ್ತುಗಳ ಉಪಯೋಗ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀಳುತ್ತದೆ ಅಂತೇ. ಅವರ ತಾಯಿ ೮೦ ವರ್ಷವಾದರೂ ಕೂಡ ಇನ್ನು ಯಾವುದೇ ಕಾಯಿಲೆ ಇಲ್ಲದೆ ಸ್ವಾಸ್ತ್ಯವಾಗಿದ್ದರೆ. ಇಂತಹ ಕೆಲಸ ಎಲ್ಲರಿಗು ಸ್ಪೂರ್ತಿಯಾಗಲಿ ಸೌರ ಚ್ಛಕ್ತಿ ಬಳಸಿ ಹಾಗು ಮರ ಗಿಡ ಬೆಳಸಿ ಉತ್ತಮ ನಾಗರೀಕರಾಗೋಣ.

Leave A Reply

Your email address will not be published.