ಈ ವ್ಯಕ್ತಿ ತನ್ನ ನಾಲಗೆಗೆ ೧೦ ಲಕ್ಷ ಇನ್ಸೂರೆನ್ಸ್ ಮಾಡಿಸಿದ್ದಾನಂತೆ ಯಾಕಂತೆ ಗೊತ್ತಾ?
ಜೀವನದಲ್ಲಿ ಕಷ್ಟಗಳು ಬರುತ್ತದೆ , ಆ ಸಮಯಕ್ಕೆ ಎಂದೇ ನಾವೆಲ್ಲ ಇಂದು ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಹಣ ಕೂಡಿಟ್ಟು ಬಿಡುತ್ತೇವೆ. ಯಾಕೆಂದರೆ ಮುಂದೆ ಸಮಸ್ಯೆ ಬಂದಾಗ ಯಾವುದೇ ವ್ಯತಿರಿಕ್ತ ಪರಿಣಾಮ ನಮ್ಮ ಮೇಲೆ ಬೀಳದೆ ಇರಲಿ ಎಂದು. ಅದು ಲೈಫ್ insurance ಇರಬಹುದು ಅಥವಾ ವಾಹನ ವಿಮೆಗಳು ಕೂಡ ಇರಬಹುದು ಅಥವಾ ಆರೋಗ್ಯ ವೀಮೆಗಳು ಕೂಡ ಇರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯ ನಾಲಗೆಗೆ 10,000 ಕೊಟ್ಟು insure ಮಾಡಿದ್ದಾರೆ ಆದ್ರರೆ ಯಾತಕ್ಕಾಗಿ ಬನ್ನಿ ತಿಳಿಯೋಣ.
ಇವರ ಹೆಸರು ಜಾನ್ ಹ್ಯಾರಿಸನ್, ಅಮೆರಿಕದವರು. ಇವರು ದುಡಿಯುತ್ತಿದ್ದ ಕಂಪನಿಯವರು ಇವರಿಗೆ ಈ ವಿಮೆ ಮಾಡಿದ್ದರು. ಹೌದು ಇವರು ದುಡಿಯುತ್ತಿದ್ದು ಒಂದು ಐಸ್ ಕ್ರೀಂ ಕಂಪನಿಯಲ್ಲಿ. ಇವರ ಕೆಲಸ ಬರಿ ಐಸ್ ಕ್ರೀಮ್ ಟೇಸ್ಟ್ ಮಾಡುವುದು . ಹೌದು ಇವರು ಬರೋಬ್ಬರಿ 780ಕೆಜಿ ವರೆಗೂ ಐಸ್ ಕ್ರೀಂ ತಿಂದಿದ್ದಾರೆ. ಆದರೆ ಇವರು ಒಂತರಾ ಲಕ್ಕಿ ಅಂತ ಕಂಪನಿಯವರು ತಿಳಿದು ಕೊಂಡಿದ್ದರು. ಅಷ್ಟೇ ಅಲ್ಲದೆ ಅವರ ಕೆಲವು ನಿರ್ಧಾರದಿಂದ ಕಂಪನಿ ಆ ಮಟ್ಟಕೆ ಬೆಳೆದಿತ್ತು. ಅದೇ ಕಾರಣಕ್ಕೆ ಅವರ ನಾಲಗೆಯ ಟೇಸ್ಟ್ ಹೋಗಬಾರದು ಎಂಬ ಕಾರಣಕ್ಕೆ ಅವರ ಕಂಪನಿ ಅವರ ನಾಲಗೆಗೆ 10ಲಕ್ಷ ವೆಚ್ಚದಲ್ಲಿ ಇನ್ಸೂರೆನ್ಸ್ ಮಾಡಿತ್ತು. ಅಚ್ಚರಿ ಎನಿಸಿದರೂ ಇದು ಸತ್ಯ ಸಂಗತಿ. ಇಂತಹ ಸುದ್ದಿ ಕೇಳೋಕೆ ಒಂತರ ವಿಚಿತ್ರ ಅನಿಸಿದರೂ ಕೂಡ ಪ್ರಪಂಚದಲ್ಲಿ ಇಂತಹ ಸನ್ನಿವೇಶಗಳು ಪ್ರತಿ ದಿನ ನಡೆಯುತ್ತಲೇ ಇರುತ್ತವೆ.