ಈ ವ್ಯಕ್ತಿ ಬಾಳೆಹಣ್ಣಿನ ಸಿಪ್ಪೆ ಇಂದ ಚಾಪೆ, ಬುಟ್ಟಿ ಹಾಗು ಬ್ಯಾಗ್ ಮಾಡುವ ಹೊಸ ಯಂತ್ರ ತಯಾರಿಸಿದ್ದಾರೆ. ಇದರಿಂದ ಈ ವ್ಯಕ್ತಿಗೆ ಸಿಗುತ್ತಿದೆ ಉತ್ತಮ ಆಧಾಯ?
ಇಂದು ಹಲವಾರು ರೈತರು ಹೊಸ ಹೊಸ ಆವಿಷ್ಕಾರ ಮೂಲಕ ಕೃಷಿ ಮಾಡಿ ಲಕ್ಷಾಂತರ ಆಧಾಯ ಸಂಪಾದಿಸುತ್ತಿದ್ದಾರೆ. ಇದು ಅನೇಕರಿಗೆ ಪ್ರೇರಣೆ ಕೂಡ ಆಗಿದೆ. ತಮಿಳುನಾಡಿನಲ್ಲಿ ವಾಸಿಸುವ ಎಂಟನೇ ತರಗತಿ ಪಾಸ್ ಆದ ರೈತ ಮುರುಗೇಶ್ ಒಂದು ಯಂತ್ರ ಕಂಡು ಹುಡುಕಿದ್ದಾರೆ ಇದರ ಮೂಲಕ ಬಾಳೆ ನಾರಿನಿಂದ ಚಾಪೆ, ಬುಟ್ಟಿ ಹಾಗೇನೇ ಬ್ಯಾಗ್ ಕೂಡ ತಯಾರಿಸಬಹುದಾಗಿದೆ. ಅಲ್ಲದೆ ಈ ಉದ್ಯಮ ಮೂಲಕ ಲಕ್ಷಾಂತರ ರೂಪಾಯಿಗಳವರೆಗೆ ಆಧಾಯ ಗಳಿಸುತ್ತಿದ್ದಾರೆ.
ಮದುರೈ ನ ಮುರುಗೇಶ್ ಕುಟುಂಬ ಕೂಡ ರೈತರೇ ಆಗಿದ್ದರೆ ಚಿಕ್ಕ ವಯಸ್ಸಿನಿಂದ ಕೃಷಿ ಮಾಡುವುದು ಇವರ ಕಸುಬಾಗಿದೆ. ಅಲ್ಲದೆ ಇವರದು ಬಡ ಕುಟುಂಬ ತಾವು ಮಾಡಿದರಲ್ಲಿ ಉಳಿತಾಯ ಮಾಡಲು ಸಾಲುತ್ತಿರಲಿಲ್ಲ ತಮ್ಮ ದೈನಂದಿನ ಖರ್ಚಿಗೆ ಸಾಲುತಿತ್ತು. ಒಂದು ದಿನ ಅವರು ಊರಿನಲ್ಲಿ ಹೋಗುತ್ತಿದ್ದಾಗ ಅವರಿಗೆ ಒಬ್ಬರು ಬಾಳೆಹಣ್ಣಿನ ತೊಗಟೆಯಲ್ಲಿ ಹಗ್ಗ ಮಾಡುವುದನ್ನು ನೋಡಿದರು. ಇದರ ಬಗ್ಗೆ ಸಂಪೂರ್ಣ ವಿಷಯ ಆ ವ್ಯಕ್ತಿ ಬಳಿ ತಿಳಿದುಕೊಂಡರು. ಈ ಕೆಲಸ ಮಾಡಬೇಕು ಎಂದು ಅವತ್ತು ನಿರ್ಧಾರ ಮಾಡಿಕೊಂಡರು.
ಮುರುಗೇಶ್ ಪ್ರಕಾರ ಜನರು ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆ ಬಿಸಾಡುತ್ತಾರೆ, ಅದರ ಸಿಪ್ಪೆ ಮೂಲಕ ಹಗ್ಗ ತಯಾರಿಸುವ ಕಮರ್ಷಿಯಲ್ ಫಾರಂ ಅನ್ನು ಬಹಳ ಜನರು ಮಾಡುತ್ತಿಲ್ಲ. ಈ ಸಿಪ್ಪೆ ಇಂದ ಹಗ್ಗ ತಯಾರಿಸುವ ಉಪಾಯ ತನ್ನ ತಂದೆ ಬಳಿ ಹೇಳಿದರು ಈ ಉಪಾಯ ಅವರ ತಂದೆಗೂ ಇಷ್ಟವಾಯಿತು. ೨೦೦೮ ರಲ್ಲಿ ಈ ಉದ್ಯಮ ಪ್ರಾರಂಭಿಸಿದರು ಮುರುಗೇಶ್. ಪ್ರತಿ ವರ್ಷ ೫೦೦ ಟನ್ ಬಾಳೆ ನಾರಿನ ಪ್ರೊಸೆಸಿಂಗ್ ಮಾಡುತ್ತಾರೆ. ಮೊದಲು ಈ ಕೆಲಸ ಬಹಳ ಕಷ್ಟಕರವಾಗಿತ್ತು, ಈ ಪ್ರೊಸೆಸಿಂಗ್ ಅಲ್ಲಿ ನಾರಿನ ಹಗ್ಗ ಕೂಡ ಸರಿಯಾಗಿ ಆಗುತ್ತಿರಲಿಲ್ಲ.
ಬಳಿಕ ತಮ್ಮ ಸ್ನೇಹಿತರ ಬಳಿ ಈ ನಾರಿನ ಹಗ್ಗ ತಯಾರಿಸುವ ಯಂತ್ರದ ಬಗ್ಗೆ ತಿಳಿದುಕೊಂಡರು. ಆದರೆ ಇದರಿಂದ ಅವರಿಗೆ ಅಂತಹದ್ದೇನು ಸಹಾಯವಾಗಲಿಲ್ಲ. ನಂತರ ಈ ಮಷೀನ್ ಮಾಡಲು ಅವರು ಬಹಳ ಪ್ರಯತ್ನ ಮಾಡುತ್ತಿದ್ದರು. ಅವರ ಹಳತ್ತು ಸೈಕಲ್ ನ ರಿಮ್ ಹಾಗು ರೇಟ್ ಸಹಾಯದಿಂದ ಒಂದು ಮಷೀನ್ ತಾವೇ ತಯಾರಿಸಿದರು. ಇದು ಅವರ ಕೆಲಸಕ್ಕೆ ಬಹಳ ಸಹಾಯವಾಯಿತು. ಅದೇ ರೀತಿ ಉಪಯುಕ್ತ ಕೂಡ ಆಯಿತು. ಇದರ ಯಶಸ್ಸಿನ ಬೆನ್ನಲ್ಲೇ ಇವರ ವಾರ್ಷಿಕ ವ್ಯವಹಾರ ೧ ಕೋಟಿಗೂ ಗು ಅಧಿಕವಾಯಿತು.
ಈ ಮಷೀನ್ ಗೆ ಈಗಾಗಲೇ ಪೇಟೆಂಟ್ ಕೂಡ ಪಡೆದಿದ್ದರೆ ಮುರುಗೇಶ್. ಈ ಯಂತ್ರಕ್ಕೆ ಒಟ್ಟಾರೆ ೧.೫ ಲಕ್ಷ ಖರ್ಚಾಗಿದೆ. ಇದನ್ನು ಈಗಾಗಲೇ ಬಯೋ ಟೆಕ್ನಾಲಜಿ ಇಂಡಸ್ಟ್ರೀಸ್ ರಿಸರ್ಚ್ ಅಸಿಸ್ಟೆಂಟ್ ಕೋನ್ಸಿಲಿಂಗ್ ಕೂಡ ಪರಿಚಯ ಮಾಡಿಸಲಾಗಿದೆ. ಅವರಿಗೂ ಕೂಡ ಈ ಯಂತ್ರ ಖುಷಿ ನೀಡಿದೆ. ಮುರುಗೇಶ್ ಎಂ ಎಸ್ ರೋಡ್ ಪ್ರೊಡಕ್ಷನ್ ಹೆಸರಿನ ಕಂಪನಿ ಮಾಡಿ ಅದರ ಮೂಲಕ ಜನರಿಗೆ ಈ ಯಂತ್ರದ ಬಗ್ಗೆ ಮಾಹಿತಿ ಹಾಗೇನೇ ಮಾರಾಟ ಮಾಡುತ್ತಾರೆ. ಇಲ್ಲಿಯವರೆಗೆ ಒಟ್ಟಾರೆ ೪೦ ಇಂತಹ ಮಷೀನ್ ಅನ್ನು ಮಾರಾಟ ಮಾಡಿದ್ದಾರೆ. ಅದೇ ಅಲ್ಲದೆ ನಬಾರ್ಡ್ ಗೆ ಕೂಡ ೪೦ ಮಷೀನ್ ಗಳ ಸಪ್ಲೈ ಮಾಡಿದ್ದಾರೆ.