ಈ ಸಹೋಧರರು ಅಂದು ೫೦ ಸಾವಿರ ಹಾಕಿ ನಡೆಸಿದ ಇಂದು ಭಾರತದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ, ಅವರ ಉದ್ಯಮದ ಉಪಾಯ ಯಾವುದು?

939

ಜೀವನದಲ್ಲಿ ಯಾವುದು ಕಷ್ಟ ಎಂಬುವುದು ಇಲ್ಲ, ಕಷ್ಟ ಎಂದು ಭಾವಿಸುವುದು ಮಾಡಲು ಮನಸು ಇಲ್ಲದಾಗ ಮಾತ್ರ. ಸಾಧಿಸುವ ಛಲ ಒಂದಿದ್ದರೆ ಏನು ಬೇಕಾದರೂ ಮಾಡಿ ಮಾಡುತ್ತಾರೆ. ಜೀವನದಲ್ಲಿ ಯಶಸ್ಸು ಕಂಡಿರುವುದು ಅಂತಹ ಜನಗಳೇ ಹೊರತು ಬೇಕಾಬಿಟ್ಟಿ ಜೀವನ ನಡೆಸಿದವರಲ್ಲ. ಹೀಗೆಯೇ ಈ ನಾಲ್ವರು ಅಣ್ಣ ತಮ್ಮಂದಿರ ಕಥೆ ಜೀವನದಲ್ಲಿ ಎಲ್ಲವನ್ನೂ ಕಂಡು ಕೊನೆಗೆ ಮಾಡಿದ ನಿರ್ಧಾರದಲ್ಲಿ ಯಶಸ್ಸು ಕಂಡ ಯಶೋಗಾಥೆ ಇದು ಬನ್ನಿ ತಿಳಿಯೋಣ.

ಮೂಲತಃ ಇವರು ಪಾಕಿಸ್ತಾನದವರು, ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು. ಇದ್ದಕ್ಕಿದ್ದಂತೆ ಸರ್ಕಾರ ದೇಶ ಇಬ್ಬಗವಾಗುತ್ತಿದೆ, ಭಾರತ ದೇಶಕ್ಕೆ ಬರುವವರು ಬರಬಹುದು ಎಂದಾಗ ಮುಂಜಾಲ್ ಪರಿವಾರ ಭಾರತಕ್ಕೆ ಬಂದಿತು. ಪಂಜಾಬ್ ನ ಲೂಧಿಯಾನಾದಲ್ಲಿ ವಾಸವಾಗುತ್ತಿದ್ದರು. ಭಾರತಕ್ಕೆ ಹೇಗೋ ಬಂದಾಯಿತು ಕೆಲಸ ಬೇಕಲ್ಲ ಎನ್ನುವಾಗ ಶುರು ಮಾಡಿದ್ದೆ ಸೈಕಲ್ ಸ್ಪೇರ್ ಪಾರ್ಟ್ ಸೇಲ್ ಮಾಡಲು. ಹೌದು ಇದು ಉತ್ತಮವಾಗಿ ಸಾಗುತ್ತಾ ಇದ್ದಾಗ ತಾವೇ ಸ್ಪೇರ್ ಪಾರ್ಟ್ಸ್ ತಯಾರಿ ಮಾಡುವ ಕಂಪನಿ ಶುರು ಮಾಡಲು ಯೋಜನೆ ಹಾಕುತ್ತಾರೆ ಇದಕ್ಕೆ ಬ್ಯಾಂಕ್ ನಿಂದಾ 50,000 ಲೋನ್ ಕೂಡ ಪಡೆಯುತ್ತಾರೆ. ಎಷ್ಟರ ಮಟ್ಟಿಗೆ ಈ ವ್ಯವಹಾರ ಕೈ ಹಿಡಿಯಿತು ಎಂದರೆ ಒಳ್ಳೆಯ ಮಟ್ಟಕ್ಕೆ ಈ ಸಂಸ್ಥೆ ಬಂದಿತು. ಆಗಲೇ ಯೋಜನೆ ಹಾಕಿದರು ಸ್ಪೇರ್ ಪಾರ್ಟ್ಸ್ ಮಾರುವ ಬದಲು ಸೈಕಲ್ ತಯಾರಿಸಿ ಮಾಡುವುದು ಉತ್ತಮ ಎಂದು. ಹೀಗೆ ಮಾರುಕಟ್ಟೆಗೆ ಬಂದಿದ್ದೆ “ಹೀರೋ ಸೈಕಲ್”.

ಬಹದ್ದೂರ್ ಚಂದ್ ಮುಂಜಾಲ್ ಟಾಕೂರ್ ಅವರ ನಾಲ್ಕು ಮಕ್ಕಳು ಸತ್ಯಾನಂದ ಮುಂಜಾಲ್ , ಓಂ ಪ್ರಕಾಶ್ ಮುಂಜಾಲ್ , ಬ್ರಜ್ ಮೋಹನ್ ಲಾಲ್ ಮುಂಜಾಲ್ , ದಯಾನಂದ್ ಮುಂಜಾಲ್ ಇವರೇ ನಾಲ್ಕು ಮಂದಿ ಅಣ್ಣ ತಮ್ಮಂದಿರು ಈ ಸಂಸ್ಥೆಯನ್ನು ಹುಟ್ಟು ಹಾಕಿದವರು.1956 ರಲ್ಲಿ ಆರಂಭವಾದ ಈ ವಹಿವಾಟು ಮೊದಲ ವರ್ಷದಲ್ಲಿ 25 ಸೈಕಲ್ ತಯಾರಿಸಿದ್ದು , ಇದೀಗ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸೈಕಲ್ ಉತ್ಪಾದನೆ ಮತ್ತು ಮಾರಾಟ ಮಾಡುತ್ತದೆ. ಸೈಕಲ್ ಅಲ್ಲದೇ ಹೀರೋ ಬೈಕ್ ಉತ್ಪಾದನೆಯಲ್ಲಿ ಕೂಡ ತೊಡಗಿದ್ದು ಇದೀಗ ವಿದೇಶ್ಗಳಿಗೂ ರಫ್ತು ಆಗುತ್ತಿದೆ. ಅದೇನೇ ಇರಲಿ ಭಾರತ ದೇಶ ಬೇಕು ಎಂದು ಭಾರತಕ್ಕೆ ಬಂದು ಅಸಾಧಾರಣ ಸಾಧನೆ ಮಾಡಿದ ಇವರಿಗೆ ನಮ್ಮದೊಂದು ಸಲಾಂ.

Leave A Reply

Your email address will not be published.