ಎಲಾನ್ ಮಸ್ಕ್ ಅವರ ಟೆಸ್ಲಾ ಕಾರುಗಳಿಗೆ ಸೆಡ್ಡು ಹೊಡೆದ ಭಾರತದ ಸ್ಟಾರ್ಟ್ ಅಪ್ ಕಂಪನಿ. ಎಷ್ಟಿದರ ಬೆಲೆ?

1,708

ಎಲೆಕ್ಟ್ರಿಕ್ ಕಾರುಗಳು ಎಂದಾಗ ಮೊದಲಿಗೆ ನೆನಪಿಗೆ ಬರುವುದು ಎಲಾನ್ ಮಸ್ಕ್. ಈ ಕ್ಷೇತ್ರದಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಿದ್ದ ವ್ಯಕ್ತಿ ಇವರು. ಅದೆಷ್ಟೋ ಹೊಸ ಹೊಸ ಆವಿಷ್ಕಾರ ದಿನದಿಂದ ದಿನಕ್ಕೆ ಸಾಗುತ್ತಾ ಇದೆ. ಹೊಸ ಹೊಸ ವಿನ್ಯಾಸ ಹೊಸ ಹೊಸ ಶೈಲಿಯಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಒಂದು ಕಾಲದಲ್ಲಿ ಕೇವಲ ಒಂದೇ ಕಂಪನಿಯ ಹೆಸರು ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿತ್ತು. ಆದರೆ ಇದೀಗ ನಾವು ಕೂಡ ಯಾರಿಂದಲೂ ಕಮ್ಮಿ ಇಲ್ಲ ಎಂಬಂತೆ ಸೆಡ್ಡು ಹೊಡೆದು ನಿಂತಿದೆ ನಮ್ಮ ದೇಶ.

ಭಾರತದಲ್ಲೂ ಇದೀಗ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಾ ಇದೆ. ಸರ್ಕಾರವು ಕೂಡ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಉತ್ತೇಜನ ನೀಡುತ್ತಿದೆ . ಇದರಿಂದ ಪೆಟ್ರೋಲ್ ಡೀಸೆಲ್ ಆಮದು ಕಡಿಮೆ ಆಗುತ್ತದೆ ಮತ್ತು ಪರಿಸರ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ. ಭಾರತ ಈಗ ಇಡೀ ವಿಶ್ವಕ್ಕೆ ವಿಶ್ವಗುರು ಎಂದರೆ ತಪ್ಪಾಗಲಿಕ್ಕಿಲ್ಲ, ಯಾಕೆಂದರೆ ಸಾಗುತ್ತಿರುವ ಅಭಿವೃದ್ದಿ ವೇಗ ಅಂತಹುದು. ಇದೀಗ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಒಂದು ಟೆಸ್ಲಾ ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಾರುಕಟ್ಟೆಗೆ ಬಂದಿದೆ. ಹೌದು ಏನಿದು ಬನ್ನಿ ತಿಳಿಯೋಣ.

ಪ್ರವೈಗ್ ಎಂಬ ಹೆಸರಿನ ಕಾರು ಉತ್ಪಾದನಾ ಸಂಸ್ಥೆ ಬೆಂಗಳೂರಿನಲ್ಲಿ ತಮ್ಮ ಕೇಂದ್ರ ಕಚೇರಿ ಹೊಂದಿದ್ದು. ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ನಡೆಸುತ್ತಾ ಇದೆ. 2022ರಾಲ್ಲಿ ತಮ್ಮ ಮೊದಲ ಬ್ಯಾಚ್ ಅನ್ನು ಮಾರುಕಟ್ಟೆಗೆ ಬಿಡಲಿದೆ. ಎಲ್ಲಾ ಕಾರುಗಳಂತೆ ಇದರ ಬೆಲೆ ಕೂಡಾ ಸರಿ ಸುಮಾರು 30 ರಿಂದ 35 ಲಕ್ಷದ ವರೆಗೆ ಇದೆ. ಇದು ನೋಡಲು ಕೂಡ ಲಕ್ಷುರಿ ಲುಕ್ ಹೊಂದಿದೆ. ಇದು ಟೆಸ್ಲಾ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದೆ ಎಂದು ಸಂಸ್ಥೆಯ ಸ್ಥಾಪಕರು ಹೇಳುತ್ತಾರೆ.

96kWh ಬ್ಯಾಟರಿ ಹೊಂದಿರುವ ಈ ಕಾರು ಒಮ್ಮೆಲೆ ಚಾರ್ಜ್ ಮಾಡಿದರೆ 500ಕಿಮೀ ದೂರವನ್ನು ಕ್ರಮಿಸುತ್ತದೆ. ಆಕ್ಸಿಲರೇಟರ್ ಸ್ಪೀಡ್ ಕೂಡ ಉತ್ತಮ ಆಗಿದ್ದು ಬರಿ 5 ಸೆಕೆಂಡ್ ಗಳಲ್ಲಿ 0-100km ವೇಗ ಮಿತಿ ತಲುಪುತ್ತದೆ. ಅದೇನೇ ಇರಲಿ ಇಂತಹದೊಂದು ಆವಿಷ್ಕಾರ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಮೇಕ್ ಇನ್ ಇಂಡಿಯಾ ಗೆ ಬೆನ್ನೆಲುಬಾಗಿ , ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುತ್ತಿರುವುದರಿಂದ ಇಂತಹ ಹೊಸ ಹೊಸ ಆವಿಷ್ಕಾರ ನಡೆಯುತ್ತಿದೆ ಎಂದರೂ ತಪ್ಪಾಗಲಾರದು.

Leave A Reply

Your email address will not be published.