ಏಕದಿನ ಪಂದ್ಯಕ್ಕೆ ತಾತ್ಕಾಲಿಕವಾಗಿ ಉಪನಾಯಕನಾದ ಬುಮ್ರಾ. ಇದು ಈ ಆಟಗಾರರಿಗೆ ಆಯ್ಕೆ ಸಮಿತಿ ನೀಡಿರುವ ಪರೋಕ್ಷ ಎಚ್ಚರಿಕೆಯೇ?

1,399

ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದೆ. ವಿರಾಟ್ ಕೊಹ್ಲಿಗೆ ಏಕದಿನ ನಾಯಕತ್ವ ಸ್ಥಾನದಿಂದ ಕೊಕ್ ಸಿಕ್ಕಿದ್ದು ಉಳಿದ ಆಟಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಇದೀಗ ರೋಹಿತ್ ಶರ್ಮ ಸೌತ್ ಆಫ್ರಿಕಾ ವಿರುದ್ದದ ಏಕದಿನ ಪಂದ್ಯದಲ್ಲಿ ಲಭ್ಯವಿಲ್ಲದೆ ಇರುವ ಕಾರಣ ತುಳುವ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡಿದೆ ಭಾರತೀಯ ಆಯ್ಕೆ ಮಂಡಳಿ. ಅಷ್ಟೇ ಅಲ್ಲದೆ ಉಪನಾಯಕನಾಗಿ ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್ ಅವರು ಆಯ್ಕೆ ಆಗುತ್ತಾರೆ ಎಂದು ಬಹುತೇಕರು ನಂಬಿದ್ದರು. ಆದರೆ ಅವರೆಲ್ಲರ ಊಹಾಪೋಹ ಉಲ್ಟಾ ಮಾಡಿ ಆಯ್ಕೆ ಸಮಿತಿ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿ ಉಳಿದ ಆಟಗಾರರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.

೨೦೧೬ ರಲ್ಲಿ ಭಾರತೀಯ ತಂಡಕ್ಕೆ ಆಯ್ಕೆ ಆದ ಬುಮ್ರಾ ಅಂದಿನಿಂದಲೂ ಸ್ಥಿರ ಹಾಗು ಉತ್ತಮ ಪ್ರದರ್ಶನ ನೀಡಿದ್ದಾರೆ. ಅದಕ್ಕೆ ಅವರಿಗೆ ಈ ಉಪನಾಯಕ ಪಟ್ಟ ಬಂದಿದೆ ಅಂತ ಹೇಳುತ್ತಿದ್ದಾರೆ. ಅಲ್ಲದೆ ಶ್ರೇಯಸ್ ಅಯ್ಯರ್ ಹಾಗು ರಿಷಬ್ ಪಂತ್ ಅವರುಗಳು ಉತ್ತಮ ವಾಗಿ ಐಪಿಎಲ್ ಅಲ್ಲಿ ಪ್ರದರ್ಶನ ನೀಡಿದ್ದರು ಕೂಡ ಅಂತಾರಾಷ್ಟ್ರೀಯ ಮಟ್ಟದ ಆಟದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಚೇತನ್ ಶರ್ಮಾ ಅವರ ನಾಯಕ್ತ್ವದಲ್ಲಿ ಆಯ್ಕೆ ಸಮಿತಿ ಶ್ರೇಯಸ್ ಅಯ್ಯರ್ ಹಾಗು ರಿಷಬ್ ಪಂತ್ ಅವರಿಗೆ ಈ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ ಎಸ್ ಕೆ ಪ್ರಸಾದ್ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ಕೇವಲ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಗೆ ಮಾತ್ರ ಉಪನಾಯಕನನ್ನಾಗಿ ಮಾಡಲಾಗಿದೆ. ಇದು ಅವರಿಗೆ ನೀಡಿದ ಗೌರವವಾಗಿದೆ. ಅಲ್ಲದೆ ಅವರ ಸ್ಥಿರ ಪ್ರದರ್ಶ ಮಾತ್ರ ಅಲ್ಲದೆ ತುಂಬಾ ಬುದ್ದಿವಂತ ಕ್ರಿಕೆಟ್ ಆಟಗಾರ ಎಂದು ಬುಮ್ರಾ ಅವರನ್ನು ಹೊಗಳಿದ್ದಾರೆ. ಒಬ್ಬ ವೇಗದ ಬೌಲರ್ ಉತ್ತಮ ಪ್ರದರ್ಶನ ನೀಡಿದರೆ ಅವನನ್ನು ಏಕೆ ನಾಯಕನನ್ನಾಗಿ ಮಾಡಬಾರದು ಎಂದು ಹೇಳಿದ್ದಾರೆ. ಏನೇ ಆಗಲಿ ಇಂತಹ ಪ್ರದರ್ಶನ ನೀಡಿದರೆ ತಂಡದಲ್ಲಿ ಸ್ಥಾನ ಎನ್ನುವ ಕಾನ್ಸೆಪ್ಟ್ ನಿಜವಾಗಿಯೂ ಯುವ ಪ್ರತಿಭೆಗಳಿಗೆ ಒಂದು ಉತ್ತಮ ಅವಕಾಶ ಒದಗಿಸುವುದರಲ್ಲಿ ಅನುಮಾನವಿಲ್ಲ.

Leave A Reply

Your email address will not be published.