ಏನಿದು ಬಿಎಚ್ ಸೀರೀಸ್ ವಾಹನ ನೋಂದಣಿ ?? ಸರಕಾರದ ಈ ಹೊಸ ಕ್ರಮದ ಬಗ್ಗೆ ತಿಳಿದಿದಿಯೇ

400

ಯಾರೇ ಆಗಲಿ ತಮ್ಮ ವಾಹನವನ್ನು ಖರೀದಿಸಿದಾಗ ಅದನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಈಗಿರುವ ಕ್ರಮದ ಪ್ರಕಾರ ಆಯಾ ರಾಜ್ಯವಾರು ವಾಹನ ನೋಂದಣಿ ನಡೆಯುತ್ತದೆ ಹಾಗೂ ರಾಜ್ಯದ ಹೆಸರಿಗೆ ತಕ್ಕಂತೆ ನಂಬರ್ ಪ್ಲೇಟ್ ಬರುತ್ತದೆ ಉದಾಹರಣೆ ಕರ್ನಾಟಕ ನೋಂದಣಿ ವಾಹನ ಆದರೆ KA ಎಂದು ನಮೂದಿಸಲಾಗುತ್ತದೆ. ಹಾಗೆಯೇ ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿ ನೆಲೆ ನಿಲ್ಲಲು ವಾಹನದ ಮರು ನೋಂದಣಿ ಮಾಡಬೇಕು. ಒಬ್ಬ ವ್ಯಕ್ತಿ ಒಂದು ರಾಜ್ಯದಲ್ಲಿ ತನ್ನ ಬೇರೆ ರಾಜ್ಯದ ನೋಂದಾಯಿತ ಸಂಖ್ಯೆಯ ವಾಹನವನ್ನು 12 ತಿಂಗಳು ಬಳಸಬಹುದು ನಂತರ ಅದರ ಮರು ನೋಂದಾವಣಿ ಕಡ್ಡಾಯವಾಗಿತ್ತು ಆದರೆ ಈ ಹೊಸ ಬಿಎಚ್ ಸೀರೀಸ್ ವಾಹನ ನೋಂದಣಿಯ ನಿಯಮವನ್ನೇ ಬದಲಾಯಿಸುತ್ತದೆ.

ಬಿಎಚ್ (ಭಾರತ್ ಸೀರೀಸ್) ಎಂದು ಕರೆಯಲ್ಪಡುವ ಇದು ವಾಹನ ಮಾಲೀಕರು ಒಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಮರು ನೋಂದಣಿ ಪ್ರಕ್ರಿಯೆಯಿಂದ ಮುಕ್ತಗೊಳಿಸುತ್ತದೆ. ಈ ಸರಣಿಯನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ರಸ್ತೆ ಸಾರಿಗೆ ಸಚಿವಾಲಯ ಪರಿಚಯಿಸಿದೆ. ನೋಂದಣಿ ಗುರುತು YY BH #### XX ರೂಪದಲ್ಲಿರುತ್ತದೆ ಅಲ್ಲಿ YY ಮೊದಲ ನೋಂದಣಿಯ ವರ್ಷವನ್ನು ಸೂಚಿಸುತ್ತದೆ, BH ಭಾರತ್ ಸರಣಿಯ ಸಂಕೇತವಾಗಿದೆ, #### ನಾಲ್ಕು ಅಂಕಿಯ ಸಂಖ್ಯೆ ಮತ್ತು XX ಎರಡು ವರ್ಣಮಾಲೆಗಳು.

ಹೊಸ ಅಧಿಸೂಚನೆಯ ಪ್ರಕಾರ, ಭಾರತ್ ಸರಣಿಯ (ಬಿಎಚ್-ಸರಣಿ) ಅಡಿಯಲ್ಲಿ ವಾಹನ ನೋಂದಣಿ ಸೌಲಭ್ಯವು ರಕ್ಷಣಾ ಸಿಬ್ಬಂದಿ, ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಕೇಂದ್ರ/ ರಾಜ್ಯ ಸಾರ್ವಜನಿಕ ವಲಯದ ಉದ್ಯೋಗಿಗಳು ಮತ್ತು ಖಾಸಗಿ ವಲಯದ ಕಂಪನಿಗಳು/ ಸಂಸ್ಥೆಗಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಲಭ್ಯವಿರುತ್ತದೆ.

Leave A Reply

Your email address will not be published.