ಏಲಕ್ಕಿ ತೋಟದಲ್ಲಿ ಕೆಲಸ ಮಾಡುವ ಈಕೆ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದಳು ಪರೀಕ್ಷೆ. ಈಗ ಏನು ಮಾಡುತ್ತಿದ್ದಾರೆ?

748

ಜೀವನದಲ್ಲಿ ಕಷ್ಟ ಎಂಬುವುದು ಎಲ್ಲರಿಗೂ ಇದ್ದೆ ಇದೆ. ಅದು ಹಣ ಇದ್ದರೂ ಸರಿ ಇಲ್ಲದಿದ್ದರೂ ಸರಿ. ಹಣ ಇದ್ದವರಿಗೆ ಒಂದು ಕಷ್ಟ ಆದರೆ , ಹಣ ಇಲ್ಲದವನಿಗೆ ಮತ್ತೊಂದು ಕಷ್ಟ. ಒಟ್ಟಾರೆಯಾಗಿ ಕಷ್ಟ ಇಲ್ಲದೆ ಬದುಕುವ ಮನುಷ್ಯ ಈ ಭೂಮಿಯ ಮೇಲೆ ಇಲ್ಲ. ಆದರೆ ಕಷ್ಟ ಎಂದು ಕೂಗಿಕೊಂಡ ಕೂತರೆ ಮುಂದೊಂದು ದಿನ ನಮ್ಮ ದಿನ ಮುಗಿದಾಗ ಕೂಗಲು ಜನರಿರುವುದಿಲ್ಲ, ಅದರ ಬದಲಾಗಿ ಆಳುವ ಸಮಯವನ್ನು ಜೀವನ ರೂಪಿಸಲು ವಿನಿಯೋಗಿಸಿದರೆ ನಾಳೆ ಇಲ್ಲದಾಗ ನಾಲ್ಕು ಜನರಾದರೂ ಹೇಳಿಕೊಳ್ಳುತ್ತಾರೆ. ಹಾಗಾದರೆ ಅಂತಹುದೇ ಒಂದು ಹೆಮ್ಮೆ ಪಡುವಂತಹ ಕಥೆಯನ್ನು ತಿಳಿಯೋಣ ಬನ್ನಿ.

ಇವರ ಹೆಸರು ಸೆಲ್ವಕುಮಾರಿ , ಕೇರಳ ಮೂಲದವರು. ಹುಟ್ಟುತ್ತಲೇ ಕಡು ಬಡತನ, ಹೇಳುವವರು ಕೇಳುವವರು ತಾಯಿ ಮಾತ್ರ. ತಂದೆ ಚಿಕ್ಕಂದಿನಲ್ಲೇ ತಾಯಿ ಮತ್ತು ಮಗಳು ಬಿಟ್ಟು ಹೋಗಿದ್ದ. ತಾಯಿ ಏಲಕ್ಕಿ ತೋಟದಲ್ಲಿ ದುಡಿದು ದುಡಿದು ಮಗಳನ್ನು ಸಾಕಿದರು ಓದಿಸಿದರು. ಮಗಳು ಹೊಟ್ಟೆ ಪಾಡಿಗೆ ಅದೇ ಏಲಕ್ಕಿ ತೋಟದಲ್ಲಿ ಕೆಲಸ ಮಾಡುತ್ತಾ ಇದ್ದಳು. ಆದರೆ ಓದುವುದನ್ನು ಬಿಟ್ಟಿಲ್ಲ, ಸಲ್ಎಲ್ಲಾ ಸರ್ಕಾರಿ ಪರೀಕ್ಷೆಗಳನ್ನು ಬರೆಯುತ್ತಿದ್ದಳು. ದೇವರು ಯಾವಾಗಲೂ ಯಾವ ರೂಪದಲ್ಲಿ ಬೇಕಾದರೂ ಸಹಾಯ ಮಾಡುತ್ತಾರೆ. ಹೀಗೆ ಈ ಭಗೀರಥ ಪ್ರಯತ್ನಕ್ಕೆ ಫಲ ಎಂಬ ಹಾಗೆ ಕೊನುಗು ಅಪರು ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದೀಗ ಏಲಕ್ಕಿಯ ಬುಟ್ಟಿ ಹಿಡಿಯುವ ಕೈಗಳಿಗೆ ಪೆನ್ನುಗಳು ಬರುತ್ತಿದ ಇದು ಎಲ್ಲರೂ ಹೆಮ್ಮೆ ಪಡುವ ವಿಚಾರ. ಅದೇನೇ ಆಗಲಿ ಇವರ ಈ ಹಾದಿ ಎಲ್ಲರಿಗೂ ಮಾದರಿ ಆಗಲಿ.

Leave A Reply

Your email address will not be published.