ಒಂದಲ್ಲ ಎರಡಲ್ಲ ನೂರು ಕೋಟಿಗೂ ಮೀರಿದ ಆಸ್ತಿ, ಆದರೆ ಕ್ಷಣಿಕ ಸುಖಕ್ಕಾಗಿ ಮನೆ ಮಗ ಮಾಡಿದ ಅವಾಂತರದಿಂದ ಎಲ್ಲಾ ಸರ್ವ ನಾಶ. ಏನಾಯ್ತು ಗೊತ್ತೇ?
ಒಂದಲ್ಲ ಎರಡಲ್ಲ ನೂರು ಕೋಟಿಗೂ ಮೀರಿದ ಆಸ್ತಿ, ಆದರೆ ಕ್ಷಣಿಕ ಸುಖಕ್ಕಾಗಿ ಮನೆ ಮಗ ಮಾಡಿದ ಅವಾಂತರದಿಂದ ಎಲ್ಲಾ ಸರ್ವ ನಾಶ. ಏನಾಯ್ತು ಗೊತ್ತೇ?
ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ನೈಜವಾಗಿ ನಡೆದಿರುವಂತಹ ಒಂದು ಹೃದಯವಿದ್ರಾವಕ ಘಟನೆಯ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದೆ. ಇದು ನಡೆದಿರುವುದು ಹರ್ಯಾಣದ ರೋಹ್ಟಕ್ ನಲ್ಲಿ. ಇಲ್ಲಿ ಪ್ರದೀಪ್ ಹಾಗೂ ಸಂತೋಷಿ ಎಂಬ ದಂಪತಿಗಳಿದ್ದರು. ಇಬ್ಬರು ಕೂಡ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದರಿಂದ ಜೀವನಪೂರ್ತಿ ಕಷ್ಟಪಟ್ಟು ರಿಯಲ್ ಎಸ್ಟೇಟ್ ನಲ್ಲಿ ದುಡಿದು ಹಣವನ್ನು ಗಳಿಸಿದ್ದರು. ಇಲ್ಲಿಂದಲೇ ಅವರ ಅದೃಷ್ಟ ಖುಲಾಯಿಸಿತು ನೂರಾರು ಕೋಟಿ ರೂಪಾಯಿ ಆಸ್ತಿಯ ಒಡೆಯರು ಕೂಡ ಆಗಿದ್ದರು.
ಇನ್ನು ಪ್ರದೀಪ ರವರಿಗೆ ಇಬ್ಬರು ವಯಸ್ಸಿಗೆ ಬಂದ ಮಕ್ಕಳಿದ್ದರು. ಮಗಳು ನೇಹಾ ಓದಿನಲ್ಲಿ ಕೂಡ ಜಾಣೆಯಾಗಿದ್ದಳು ಹಾಗೂ ನಿಜ ಜೀವನದಲ್ಲಿ ಕೂಡ ಉತ್ತಮ ನಡವಳಿಕೆಯನ್ನು ಹೊಂದಿರುವಂತಹ ಹೆಣ್ಣು ಮಗಳಾಗಿದ್ದಳು. ಅವರಿಗೆ ತಮ್ಮ ಮಗಳ ಕುರಿತಂತೆ ಯಾವುದೇ ಚಿಂತೆ ಇರಲಿಲ್ಲ ಮಗಳ ವಿದ್ಯಾಭ್ಯಾಸಕ್ಕಾಗಿ ಕೂಡ ಸಂಪೂರ್ಣ ಬೆಂಬಲವನ್ನು ಹಾಗೂ ಅದಕ್ಕೆ ಬೇಕಾಗಿರುವಂತಹ ಎಲ್ಲ ಸೌಲತ್ತುಗಳನ್ನು ಮಾಡಿಟ್ಟಿದ್ದರು. ಆದರೆ ಅವರಿಗೆ ಚಿಂತೆ ಆಗಿದ್ದಿದ್ದು ಮಗ ಅಭಿಷೇಕ್ ನದ್ದು. ಹೌದು ಗೆಳೆಯರೇ ಇದಕ್ಕೆ ಪ್ರಮುಖ ಕಾರಣವಾಗಿದ್ದು ಅಭಿಷೇಕ್ ಒಬ್ಬ ಸಲಿಂಗಿ ಆಗಿದ್ದ. ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದರೆ ಕೂಡ ಮಗನೆ ಒಂದು ಸಮಸ್ಯೆ ಅವರಿಗೆ ಚಿಂತೆಯನ್ನು ತಂದೊಡ್ಡಿತು.
ಅಭಿಷೇಕ್ ಜೀವನದಲ್ಲಿ ಯಾವತ್ತೂ ಕೂಡ ಹೆಣ್ಣಿನ ಕುರಿತಂತೆ ಆಕರ್ಷಿತನಾಗಿ ಇರಲಿಲ್ಲ. ತನ್ನ ಸ್ನೇಹಿತರೊಂದಿಗೆ ಕಾಲ ಕಳೆಯಲು ಆತ ಹೆಚ್ಚಾಗಿ ಇಷ್ಟಪಡುತ್ತಿದ್ದ. ಅದರಲ್ಲಿಯೂ ಆತ ಏರ್ಲೈನ್ ಕ್ರ್ಯೂ ನಲ್ಲಿ ಇದ್ದಾಗ ಒಬ್ಬಾತನ ಜೊತೆಗೆ ಸಲಿಂಗ ವಾಗಿ ಕೂಡ ವರ್ತಿಸುತ್ತಿದ್ದ. ಇದರ ಕುರಿತಂತೆ ಮನೆಯವರಿಗೆ ಹೇಳಲು ಹಿಂಜರಿಯುತ್ತಿದ್ದ. ಕೊನೆಗೂ ಕೂಡ ಮನೆಯವರಿಗೆ ಹೇಳಿ ನೀವು ಒಪ್ಪಿದರೆ ಸರಿ ಇಲ್ಲವಾದರೆ ನಾನು ಹೀಗೆ ಉಳಿದುಕೊಂಡು ಬಿಡುತ್ತೇನೆ ಎಂಬುದಾಗಿ ಹೇಳಿಬಿಟ್ಟಿದ್ದ.
ಇದನ್ನು ಕೇಳಿದಂತಹ ತಂದೆ ಪ್ರದೀಪ್ ಮಗನಿಗೆ ಸರಿಯಾಗಿ ಗದರಿಸಿ ಬಿಡುತ್ತಾರೆ. ನಿನಗೆ ಮಾನಸಿಕ ಸಮಸ್ಯೆ ಇದ್ದರೆ ಹೇಳಿಬಿಡು ಈಗಲೇ ಒಳ್ಳೆಯ ಡಾಕ್ಟರಿಗೆ ತೋರಿಸೋಣ ಇಂತಹ ಮಾತುಗಳನ್ನು ಇನ್ನುಮುಂದಾದರೂ ಹೋಗಬೇಡ ಎಂಬುದಾಗಿ ಗದರಿಸುತ್ತಾರೆ. ತಾಯಿ ಕೂಡ ಮಗನಿಗೆ ಬುದ್ಧಿ ಮಾತನ್ನು ಹೇಳಿ ಸುಮ್ಮನಾಗುತ್ತಾರೆ. ನಂತರ ಅಭಿಷೇಕ್ ಸಂಪೂರ್ಣವಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಇದಾದ ನಂತರ ಹಲವಾರು ಬಾರಿ ತನ್ನ ಸ್ನೇಹಿತನ ಜೊತೆಗೆ ಸೇರುತ್ತಾನೆ. ಆ ಸಂದರ್ಭದಲ್ಲಿ ನಾವಿಬ್ಬರೂ ಮನೆ ಬಿಟ್ಟು ದೂರ ಹೋಗಿ ಎಲ್ಲಾದರೂ ಜೀವಿಸೋಣ ಎಂಬುದಾಗಿ ಹೇಳುತ್ತಾನೆ.
ಆದರೆ ಅಭಿಷೇಕ್ ಗೆ ತನ್ನ ಮನೆಯವರು ಎಲ್ಲೇ ಹೋದರು ಕೂಡ ನನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂಬುದಾಗಿ ತಿಳಿದಿತ್ತು. ಅದಕ್ಕಾಗಿಯೇ ಮನೆಯವರನ್ನೇ ಮುಗಿಸಿ ಬಿಡುವ ನಿರ್ಧಾರಕ್ಕೆ ಬರುತ್ತಾನೆ. ಅದೊಂದು ದಿನ ಬೆಳಗ್ಗೆ ಎಲ್ಲರೂ ಕೂಡ ಬೆಳಗಿನ ತಿಂಡಿಯನ್ನು ತಿಂದು ತಮ್ಮ ತಮ್ಮ ಕೋಣೆಗೆ ಹೋಗಿ ತಮ್ಮ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಆ ಸಂದರ್ಭದಲ್ಲಿಯೇ ತಂದೆಯ ರಿವಾಲ್ವರನ್ನು ಎತ್ತುಕೊಂಡು ಅಭಿಷೇಕ್ ಮೊದಲು ತನ್ನ ಸಹೋದರಿಯ ರೂಮಿಗೆ ಹೋಗಿ ಟಿವಿಯ ಸೌಂಡ್ ಅನ್ನು ಜಾಸ್ತಿ ಮಾಡಿ ಆಕೆಯನ್ನು ಮುಗಿಸುತ್ತಾನೆ.
ನಂತರ ಅಜ್ಜಿ ತಾಯಿ ಹಾಗೆ ಕೊನೆಗೆ ತಂದೆಯನ್ನು ಕೂಡ ಮುಗಿಸಿಬಿಡುತ್ತಾನೆ. ಮನೆಯಲ್ಲಿರುವ ಎಲ್ಲಾ ಹಣವನ್ನು ಎತ್ತಿಕೊಂಡು ತನ್ನ ಸ್ನೇಹಿತನ ಜೊತೆಗೆ ರೈಲ್ವೆ ಸ್ಟೇಷನ್ ಗೆ ಓಡುತ್ತಾನೆ. ರೈಲ್ವೆ ಸ್ಟೇಷನ್ ಗೆ ಹೋದ ನಂತರವೂ ಕೂಡ ಮನೆಯಲ್ಲಿ ಯಾರಾದರೂ ಬಂದಿದ್ದಾರೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಮನೆಗೆ ಕರೆ ಮಾಡುತ್ತಾನೆ ಆದರೆ ಆ ಸಂದರ್ಭದಲ್ಲಿ ಯಾರೂ ಕೂಡ ರಿಸೀವ್ ಮಾಡುವುದಿಲ್ಲ. ಆಗ ಆತ ತನ್ನ ಮಾವನಿಗೆ ಕರೆ ಮಾಡಿ ಮನೆಯಲ್ಲಿ ಯಾರು ಫೋನ್ ಎತ್ತುತ್ತಿಲ್ಲ ಏನಾಯಿತು ಎಂಬುದನ್ನು ಸ್ವಲ್ಪ ನೋಡಿ ಬನ್ನಿ ಎಂಬುದಾಗಿ ಹೇಳುತ್ತಾನೆ.
ಮಾವ ಮನೆಗೆ ಹೋಗಿ ನೋಡಿದಾಗ ಅಲ್ಲಿರುವ ದೃಶ್ಯವನ್ನು ಕಂಡು ಚಿಂತಾಕ್ರಾಂತರಾಗಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಕೆಲವು ಸಮಯಗಳ ನಂತರ ಸಿಸಿಟಿವಿ ಫುಟೇಜ್ ನಲ್ಲಿ ಆ ದಿನ ಅಭಿಷೇಕ್ ಮನೆಯಿಂದ ಹೊರ ಹೋಗುತ್ತಿರುವುದು ಕಂಡುಬರುತ್ತದೆ ನಂತರ ಅಭಿಷೇಕ್ ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಆತನ ಕ್ಷಣಿಕ ಸುಖಕ್ಕೆ ಇಡೀ ಮನೆಯವರನ್ನು ಆಹುತಿ ತೆಗೆದುಕೊಂಡಿದ್ದು ತಿಳಿದುಬರುತ್ತದೆ. ಈ ವಿಚಾರದ ಕುರಿತಂತ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.