ಒಂದು ರೂಪಾಯಿ ಜಾಹಿರಾತು ನೀಡದೆ ಕೋಟ್ಯಂತರ ರೂಪಾಯಿ ಸಂಪಾಧನೆ ಮಾಡುತ್ತಿರುವ ಈ ಕಂಪನಿ ಬಗ್ಗೆ ನಿಮಗೆಷ್ಟು ಗೊತ್ತು?

2,555

ಜಾಹೀರಾತು ಎಂದರೆ ಇದೀಗ ಒಂದು ಬ್ಯುಸಿನೆಸ್ ಆಗಿದೆ. ಹೌದು ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬದಲಾಗುತ್ತಿರುವ ಫ್ಯಾಶನ್ ಇವೆಲ್ಲದಕ್ಕೂ ಒಗ್ಗಿ ಕೊಳ್ಳಲು ಕಂಪನಿಗಳು ಜಾಹೀರಾತು ನೀಡುತ್ತಾ ಇರುತ್ತದೆ. ಇದಷ್ಟೇ ಅಲ್ಲದೇ ಮತ್ತೊಂದು ಮುಖ್ಯ ಕಾರಣ ಎಂದರೆ ಹೆಚ್ಚುತ್ತಿರುವ ಪೈಪೋಟಿ. ಹೌದು ಮಾರುಕಟ್ಟೆಯಲ್ಲಿ ಇದೀಗ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ದೊಡ್ಡ ದೊಡ್ಡ ಕಂಪನಿಗಳು ಕೋಟಿಗಟ್ಟಲೆ ಹಣ ಜಾಹೀರಾತುಗಳಿಗೆ ಸುರಿಯುತ್ತದೆ. ಅದಕ್ಕೆಂದೇ ಒಂದು ತಂಡ ಇದೆ, ಅದು ಹಗಲು ಇರುಳು ಎನ್ನದೆ ಹೊಸ ಹೊಸ ರೀತಿಯಲ್ಲಿ ತಮ್ಮ ವ್ಯಾಪಾರ ಹೆಚ್ಚಿಸಲು ಪ್ರಯತ್ನಿಸುತ್ತಾ ಇರುತ್ತದೆ.

ಆದರೆ ನಾವು ಇಂದು ತಿಳಿಯಲು ಹೋರಟ ಈ ಕಂಪನಿ ಇತರ ಕಂಪನಿಗಳಿಗೆ ಹೋಲಿಸಿದರೆ ತುಸು ಭಿನ್ನ ಯಾಕಂದರೆ ಇದು ತನ್ನ ಗಳಿಕೆಯೆ ಶೇಕಡಾ ೦ % ಅನ್ನು ಜಾಹೀರಾತಿಗೆ ವ್ಯಯಿಸುತ್ತದೆ. ಅಂದರೆ ಇದು ಒಂದು ರೂಪಾಯಿ ಕೂಡ ಖರ್ಚು ಮಾಡುವುದಿಲ್ಲ ಎಂದರ್ಥ. ಯಾವುದು ಆ ಕಂಪನಿ ಬನ್ನಿ ತಿಳಿಯೋಣ. ಎಲ್ಲರಿಗೂ ಚಿರ ಪರಿಚಿತ ಕಂಪನಿ ಅದು ಜಾರ “ZARA” ಹೌದು ಇದು ಮೂಲತಃ ಬಟ್ಟೆ ಉದ್ಯಮದ ಕಂಪನಿ ಆಗಿದ್ದು ಬೆಳೆಯುತ್ತಿರುವ ಎಲ್ಲಾ ನಗರಗಳಲ್ಲಿ ಮತ್ತು ಮಾಲ್ ಗಳಲ್ಲಿ ತಮ್ಮ ಉದ್ಯಮ ಸ್ಥಾಪಿಸಿದೆ.

ಈ ಕಂಪನಿ ಅತೀ ಹೆಚ್ಚು ವಿನ್ಯಾಸದ ಬಟ್ಟೆಗಳನ್ನು ಹೊಂದಿದ್ದು ಇದೆ ಕಾರಣಕ್ಕೆ ಅದು ಅತೀ ಹೆಚ್ಚು ಫೇಮಸ್. ಈ ಒಂದು ಕಂಪನಿ ಯಾವುದೇ ರೀತಿಯ ಜಾಹೀರಾತು ನೀಡುವುದಿಲ್ಲ ಬದಾಲಗಿ ಇದು ಸದಾ ಹೊಸ ಹೊಸ ಡಿಸೈನ್ ಬಟ್ಟೆಗಳನ್ನು ಮಾರುಕಟ್ಟೆಗೆ ತರುತ್ತಾ ಇರುತ್ತದೆ. ಮತ್ತು ಅಲ್ಪ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತದೆ. ಇದರಿಂದಾಗಿ ಜನರಲ್ಲಿ ಉತ್ಸಾಹ ಹೆಚ್ಚಾಗುತ್ತದೆ, ಮತ್ತು ಆ ಹೊಸ ವಿನ್ಯಾಸದ ಬಟ್ಟೆ ಮುಗಿಯುವ ಮುನ್ನ ಖರೀದಿಸಬೇಕು ಎಂದು ಮುಗಿ ಬೀಳುತ್ತಾರೆ. ಇದರಿಂದಾಗಿಯೇ ಈ ಕಂಪನಿ ಅಷ್ಟೊಂದು ಲಾಭ ಪಡೆಯುತ್ತಿರುವುದು.

Leave A Reply

Your email address will not be published.