ಕಡಿಮೆ ಜಾಗ ಇದ್ರೂ ಪರವಾಗಿಲ್ಲ, ಹೆಚ್ಚು ವಿದ್ಯುತ್ ತಯಾರಿಸಬಹದು ಸೋಲಾರ್ ಪ್ಯಾನೆಲ್ ನಿಂದ. ಹೇಗೆ ಖರೀದಿ ಮಾಡುವುದು?

1,178

ವಿದ್ಯುತ್ ದರ ಜಿಗಿತ ಇಂದಿನ ಪ್ರತಿ ಬಡವರು ಹಾಗು ಮಾಧ್ಯಮ ವರ್ಗದವರ ಸಮಸ್ಯೆ ಆಗಿದೆ. ಇದನ್ನು ಕಡಿಮೆ ಮಾಡುವ ಯಾವುದೇ ಉಪಾಯ ಇದ್ದರು ಕೂಡ ಜನ ಅದರ ಕಡೆ ಗಮನ ಹರಿಸುತ್ತಾರೆ. ವಿದ್ಯುತ್ ಬದಲಿಗೆ ಸೂರ್ಯನ ಕಿರಣಗಳ ಬಳಕೆ ಮಾಡಿಕೊಂಡು ಸೋಲಾರ್ ಪ್ಯಾನೆಲ್ ಅಳವಡಿಸುತ್ತಾರೆ. ಆದರೆ ಮೊದಲೆಲ್ಲ ಅದಕ್ಕೆ ದೊಡ್ಡ ಜಾಗಗಳು ಹಾಗೇನೇ ಬಹಳ ಖರ್ಚು ಕೂಡ ಆಗುತಿತ್ತು. ಅದಕ್ಕಾಗಿ ಜನರು ವಿದ್ಯುತ್ ಬಿಲ್ ಹೆಚ್ಚು ಕಟ್ಟುತ್ತಾರೆ ಹೊರತು ಈ ಸೌರ ಪ್ಯಾನೆಲ್ ಅಳವಡಿಸಲು ಹಿಂದೆ ಮುಂದೆ ನೋಡುತ್ತಾರೆ.

ಇದೆಲ್ಲ ಸಮಸ್ಯೆ ಬಗ್ಗೆ ಜನರು ತಲೆ ಬಿಸಿ ಮಾಡುತ್ತಿರುವಾಗಲೇ ಭಾರತದ ಹರಿಯಾಣದಲ್ಲಿ ವಾಸಿಸುವ ಮೂವರು ಸ್ನೇಹಿತರು ಲೂಮ್ ಸೋಲಾರ್ ಎನ್ನುವ ಒಂದು ಸ್ಟಾರ್ಟ್ ಅಪ್ ಶುರು ಮಾಡಿ ಈ ಸೋಲಾರ್ ಪ್ಯಾನೆಲ್ ಬೆಲೆ ಕಡಿಮೆ ಮಾಡಲು ಒಂದು ಉಪಾಯವನ್ನೇ ಕಂಡು ಹುಡುಕಿದ್ದಾರೆ. ಇದು ಶುರು ಮಾಡಿ ಮೂರೂ ವರ್ಷಗಳಲ್ಲೇ ಭಾರತದ ಅತ್ಯುತ್ತಮ ಸೋಲಾರ್ ಉತ್ಪಾದನೆ ಮಾಡುವ ಕಂಪನಿ ಆಗಿ ಹೆಸರು ಮಾಡಿದೆ. ಅಮೋಲ್, ಅಮೋದ್ ಆನಂದ್ ಹಾಗು ಕೊಡೊ ಭೈ ಎನ್ನುವ ೩ ಜನ ಈ ಕಂಪನಿ ಶುರು ಮಾಡಿ ಇಂದು ಯಶಸ್ವಿ ಆಗಿದ್ದಾರೆ.

ಇತರ ಕಂಪನಿ ಗಳು ಸೋಲಾರ್ ನ ದಕ್ಷತೆ ಹಾಗು ಗುಣಮಟ್ಟದ ಪ್ಯಾನೆಲ್ ತಯಾರಿಸುವತ್ತ ಗಮನ ಹರಿಸುತ್ತಿಲ್ಲ, ಆದರೆ ಲೂಮ್ ಸೋಲಾರ್ ಕಂಪನಿಯು ಜನರ ಬೇಡಿಕೆ ಗೆ ಅನುಗುಣವಾಗಿ ಈ ಉತ್ತಮ ಗುಣಮಟ್ಟದ ಹಾಗು ಅತಿ ಹೆಚ್ಚು ದಕ್ಷತೆ ನೀಡುವ ಸೋಲಾರ್ ಪನ್ನೆಲ್ ತಯಾರಿಸಿ ಜನರ ಸಮಸ್ಯೆಗೆ ಪರಿಹಾರ ನೀಡಿದೆ. ೧೦ ವಾಟ್ ಇಂದ ೪೦೦ ವಾಟಗಳವರೆಗಿನ ಸೂಪರ್ ಹೈ ದಕ್ಷತೆಯ ಸೋಲಾರ್ ಪನ್ನೆಲ್ ನಿರ್ಮಿಸಿ ಸರಿ ಎನಿಸಿಕೊಂಡಿದ್ದಾರೆ. ಸೀಮಿತ ಸ್ಥಳಗಳಲ್ಲಿ ಇದನ್ನು ಹಾಕಬಹುದು ಮಾತ್ರವಲ್ಲದೆ ಮಂಜಿನ ಹಾಗು ಸೂರ್ಯನ ಕಿರಣಗಳು ಕಡಿಮೆ ಬೀಳುವ ಪ್ರದೇಶಗಳಲ್ಲೂ ಇದು ಉತ್ತಮವಾಗಿ ಕೆಲಸ ಮಾಡುತ್ತದೆ.

ಈ ಲೂಮ್ ಸೋಲಾರ್ ಪ್ರಾರಂಭಿಸಿದಾಗ ಅದರ ಬೇಡಿಕೆ ಎಷ್ಟಿತ್ತು ಎಂದರೆ ಅಂದಿನಿಂದ ಪ್ರತಿ ವರ್ಷ ೧೦೦ ಕೋಟಿ ವಹಿವಾಟು ಮಾಡುತ್ತ ಬಂದಿದೆ ಅಂತೇ. ಇದೀಗ ಭಾರತ ಸರಕಾರ ಪಿ ಎಲ್ ಐ ಸ್ಕೀಮ್ ಮೂಲಕ ದೇಶಿಯ ಕಂಪನಿ ಗಳಿಗೆ ಅನುಧಾನ ನೀಡಲು ಪ್ರಾರಂಭಿಸಿರುವುದರಿಂದ ಈ ಸೋಲಾರ್ ಪನ್ನೆಲ್ ಮಾಡುವ ಕಂಪನಿ ಇನ್ನು ಹೆಚ್ಚಿನ ಬೇಡಿಕೆ ಬರುವುದರಲ್ಲಿ ಸಂಶಯವಿಲ್ಲ ಅನ್ನುತ್ತಾರೆ ಈ ಕಂಪನಿ ಮಾಲಕರು. ಗ್ರಾಹಕರು ಲೈಟ್ ಫ್ಯಾನ್ ಮತ್ತು ಟಿವಿ ಅಲ್ಲದೆ ಹಿಟ್ಟಿನ ಗಿರಣಿಗಳು ಮೋಟಾರ್ ಗಳು ಚಾಲನೆ ಮಾಡುವಾಗ ವಿದ್ಯುತ್ ಬಿಲ್ ಕಡಿಮೆ ಮಾಡಲು ಈ ಸೋಲಾರ್ ಪ್ಯಾನೆಲ್ ಬಳಸುವತ್ತ ಮುಖ ಮಾಡಿದ್ದಾರೆ.

ದೊಡ್ಡ ದೊಡ್ಡ ಕಂಪನಿ ಗಳು ಇಂತಹ ಸೋಲಾರ್ ಪನ್ನೆಲ್ ತಯಾರಿಸಿದೆ ಅಂತಾದರೂ ಕೂಡ ಅವುಗಳು ೩೦೦ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪನ್ನೆಲ್ ಮಾತ್ರ ತಯಾರಿಸಿದೆ. ಆದರೆ ಇದು ಗ್ರಾಹಕರಿಗೆ ಹೆಚ್ಚು ದುಬಾರಿ ಹಾಗು ಉಪಯೋಗಕ್ಕೆ ಕೂಡ ಬರುವುದಿಲ್ಲ. ಅದಕ್ಕಾಗಿಯೇ ಈ ಕಂಪನಿ ೧೦,೨೦ ವಾಟ್ ಗಳಿಂದ ಹಿಡಿದು ೩೭೫ ವಾಟ್ ಗಲವೆಗೂ ಕೂಡ ಸೋಲಾರ್ ಪ್ಯಾನೆಲ್ ಉತ್ಪಾದನೆ ಮಾಡುತ್ತಿದೆ. ಈ ಕಂಪನಿ ಇತ್ತೀಚಿಗೆ ೪೪೦ ವಾಟ್ ನ ಹೈ ದಕ್ಷತೆಯ ಪ್ಯಾನೆಲ್ ಬಿಡುಗಡೆ ಮಾಡಿದ್ದೂ ಇದಕ್ಕೆ ಶಾರ್ಕ್ ಪನ್ನೆಲ್ ಎಂದು ಹೆಸರಿಟ್ಟಿದ್ದಾರೆ.

ಈ ಶಾರ್ಕ್ ಪ್ಯಾನೆಲ್ ಇತರ ಪನ್ನೆಲ್ ಗಳಿಗಿಂತ ಹೆಚ್ಚಿನ ದಕ್ಷತೆ ಹಾಗು ಕಡಿಮೆ ಜಾಗದಲ್ಲಿ ಕೂಡ ಇದನ್ನು ಇನ್ಸ್ಟಾಲ್ ಮಾಡಬಹುದಾಗಿದೆ. ಇಂತಹ ಎರಡು ಶಾರ್ಕ್ ಪ್ಯಾನೆಲ್ ಅಳವಡಿಸಿದರೆ ಇಡೀ ಮನೆಯನ್ನು ಸೋಲಾರ್ ಮೂಲಕ ವಿದ್ಯುತ್ ಬಳಕೆ ಮಾಡಬಹದು ಹಾಗೇನೇ ವಿದ್ಯುತ್ ಸಮಸ್ಯೆಗೆ ವಿದಾಯ ಹೇಳಬಹುದಾಗಿದೆ. ಇಂದು ಒಂದು ಮನೆಗೆ ಸಾಮಾನ್ಯವಾಗಿ ೧ ರಿಂದ ೩ ಕಿಲೋವ್ಯಾಟ್ ವಿದ್ಯುತ್ ಸಾಕು AC ಇತ್ಯಾದಿ ಇದ್ದಾರೆ ೫ ಕಿಲೋವ್ಯಾಟ್ ಸಾಕಾಗುತ್ತದೆ. ಈ ೪೪೦ ವಾಟ್ ಶಾರ್ಕ್ ಪ್ಯಾನೆಲ್ ಅಳವಡಿಸಿದರೆ ಇದು ನೀವು ಬಳಸುವುದಕ್ಕಿಂತ ಹೆಚ್ಚಿನದು ಉತ್ಪಾದನೆ ಆಗುತ್ತದೆ. ಈ ಶಾರ್ಕ್ ಪ್ಯಾನೆಲ್ ಇಂದ ಪ್ರತಿ ವರ್ಷ ೬೬೦ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದ್ ಎಂದು ಈ ಕಂಪನಿಯು ಸಹ ಸಂಸ್ಥಾಪಕ ಅಮೋಲ್ ಹೇಳುತ್ತಾರೆ.

ಈ ಕಂಪನಿ ಯಾ ಕೇಂದ್ರ ಕಚೇರಿ ಫರೀದಾಬಾದ್ ಅಲ್ಲಿದೆ. ಆದರೆ ದೇಶದಾದ್ಯಂತ ಸುಮಾರು ೨೫೦೦ ಕ್ಕೂ ಹೆಚ್ಚು ವಿತರಕಾರನ್ನು ಹೊಂದಿದೆ. ಇಂದು ಭಾರತದಲ್ಲಿ ಒಟ್ಟಾರೆ ೫೦ ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಅಂದರೆ ೫೦ ಸಾವಿರಕ್ಕೂ ಹೆಚ್ಚು ಈ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಈ ಫಲಕ ಅಳವಡಿಸಲು ಅವರ ಅಧಿಕೃತ ವೆಬ್ಸೈಟ್ https://www.loomsolar.com/ ಮೂಲಕವೋ ಅಥವಾ ಹತ್ತಿರದ ಸೆಲ್ ಟಚ್ ಪಾಯಿಂಟ್ ಅಲ್ಲಿ ಸಂಪರ್ಕಿಸಿದರೆ ನಿಮ್ಮ ಮನೆಯ ಸಮೀಕ್ಷೆಗೆ ವಿತರಕರು ಅಥವಾ ಡೀಲರ್ ಬರುತ್ತಾರೆ. ಇದರ ಬಗ್ಗೆ ಇನ್ನು ಏನಾದರು ಮಾಹಿತಿ ಬೇಕಿದ್ದರೆ ಮೇಲೆ ತಿಳಿಸಿದ ಅಧಿಕೃತ ವೆಬ್ಸೈಟ್ ಗೆ ಹೋಗಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹದು.

Leave A Reply

Your email address will not be published.