ಕಣ್ಣಿಗೊಂದು ಪರೀಕ್ಷೆ, ಈ ಫೋಟೋದಲ್ಲಿ ಅಡಗಿರುವ ನಂಬರ್ ಹೇಳಿ. ಸರಿಯಾದ ಉತ್ತರ ಗೊತ್ತಿಲ್ಲ ಅಂದರೆ ನಾವು ಹೇಳುತ್ತೇವೆ ನಿಮಗೆ.

825

ಆಪ್ಟಿಕಲ್ ಇಲ್ಲ್ಯೂಷನ್ ಬಗ್ಗೆ ಕೇಳಿರಬಹುದು. ಕೆಲವರು ತಪ್ಪಾಗಿ ಮ್ಯಾಜಿಕ್ ಅಂತಾನೂ ಕರೆಯುತ್ತಾರೆ. ಇಲ್ಲಾಂದರೆ ಭ್ರಮೆ ಅಂತಾನೂ ಹೇಳುತ್ತಾರೆ. ನಮಗೆ ಕಂಡಿದ್ದು ಆಮೇಲೆ ಅದು ನಿಜಾನೋ ಅಥವಾ ಭ್ರಮೆಯೋ ಎನ್ನುವುದು ತುಂಬಾ ಗೊದಲವಾಗಿರುತ್ತದೆ. ಅಥವಾ ಜಾದೂಗಾರ ಒಮ್ಮೆ ಮ್ಯಾಜಿಕ್ ಮಾಡುವಾಗ ನಮ್ಮ ಕಣ್ಣಿಗೆ ಕಾಣುವುದು ನಿಜ ಜಾದೂಗಾರನಿಗೆ ಅತಿಂದ್ರೀಯ ಶಕ್ತಿಗಳಿವೆ ಎಂದು ನಂಬುತ್ತೇವೆ. ಅದು ಕೇವಲ ಟ್ರಿಕ್ಸ್ ಅಷ್ಟೇ ವಿನಃ ಬೇರೇನೂ ಅಲ್ಲ. ನಮ್ಮ ಕಣ್ಣಿಗೆ ಸೋಜಿಗದ ಹಾಗೆ ಕಾಣಿಸುತ್ತದೆ ಅಷ್ಟೇ.

ಈ ಭ್ರಮಣೆ ಇಂದ ಹೊರ ಬರುವುದು ಅಷ್ಟು ಸುಲಭವಲ್ಲ. ನಾವು ತೋರಿಸುವ ಫೋಟೋ ಕೂಡ ಅಂತದ್ದೇ ಆಗಿದೆ. ನಿಮ್ಮ ಕಣ್ಣಿಗೆ ಒಂದು ಬಾರಿ ಒಂದು ಸಂಖ್ಯೆ ಕಾಣಿಸಿದರೆ ಇನ್ನೊಮ್ಮೆ ಇನ್ನೊಂದು ತರ ಕಾಣಿಸುತ್ತದೆ. ನೀವು ನೋಡಿದಷ್ಟು ಬಾರಿಯೂ ಬೇರೆ ಬೇರೆ ಸಂಖ್ಯೆ ಕಾಣಿಸುತ್ತದೆ ಹಾಗೇನೇ ಮುಂಚೆ ನೋಡಿದ್ದು ತಪ್ಪಾಗಿಯೇ ಕಾಣಿಸುತ್ತದೆ. ಈಗ ನಾವು ಶೇರ್ ಮಾಡಿದ ಚಿತ್ರ ಸಾಕಷ್ಟು ವೈರಲ್ ಆಗಿದ್ದು ನಿಮ್ಮ ದೃಷ್ಟಿ ಎಷ್ಟು ಒಳ್ಳೆದಿದೆ ಎಂದು ತಿಳಿದುಕೊಳ್ಳಲು ಒಂದು ಪರೀಕ್ಷೆ ಅಂದರು ಕೂಡ ತಪ್ಪಾಗಲಾರದು. ಈ ಚಿತ್ರ ನೋಡಿ ಅದರಲ್ಲಿ ಎಷ್ಟು ನಂಬರ್ ಅಡಗಿದೆ ಎನ್ನುವುದು ನೀವು ಹೇಳಬಲ್ಲಿರಾ?

ಈ ಚಿತ್ರದಲ್ಲಿ ಕೆಲವು ಸಂಖ್ಯೆಗಳನ್ನು ಅಡಗಿಸಲಾಗಿದೆ ಪೂರ್ತಿಯಾಗಿ ಅಲ್ಲದೆ ಇದ್ದರು ಮೊದಲ ಬಾರಿ ನೋಡುವಾಗ ಕಾಣುವುದು ಸ್ವಲ್ಪ ಕಷ್ಟವೇ ಸರಿ. ಈ ಸಂಖ್ಯೆಗಳನ್ನು ಕೆಲವು ಜನ ಮಾತ್ರ ಸರಿಯಾಗಿ ಉತ್ತರಿಸಿದ್ದಾರೆ. ಈ ಚಿತ್ರ ಟ್ವಿಟ್ಟರ್ ಕತೆಯಲ್ಲಿ ಒಬ್ಬರು ಹಂಚಿಕೊಂಡಿದ್ದರು. ಈಗ ಇದು ವೈರಲ್ ಆಗುತ್ತಿದ್ದಂತೆಯೇ ೪,೦೦೦ ಕ್ಕೂ ಅಧಿಕ ಲೈಕ್ ಬಂದಿದೆ. ಹಾಗೇನೇ ೨೫೦ ಕ್ಕೂ ಅಧಿಕ ಜನ retweet ಮಾಡಿದ್ದಾರೆ. ಕೆಲವರು ಈ ಚಿತ್ರದಲ್ಲಿ 3452839 ಎಂದು ಹೇಳಿದ್ದರೆ, ಇನ್ನು ಕೆಲವರು 528 ಮಾತ್ರ ಇದೆ ಅಂತ ಹೇಳಿದ್ದಾರೆ. ಇನ್ನು ಕೆಲವರು 45283 ಅಂದರೆ ಇದರಲ್ಲಿ ನಿಜವಾಗಿ ಇರುವುದು 3452839 ಮಾತ್ರ. ನೀವು ಈ ಚಿತ್ರ ನೋಡಿ ನಿಮ್ಮ ಪ್ರಕಾರ ಎಷ್ಟು ಸಂಖ್ಯೆ ಅಡಗಿದೆ ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.