ಕರ್ನಾಟಕ ಕಂದಾಯ ಇಲಾಖೆಯಲ್ಲಿ 3000 ಹುದ್ದೆಗಳಿಗೆ ಅರ್ಜಿ ಅಹ್ವಾನ. ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕ ಸರಕಾರವು ಈಗಾಗಲೇ ಹಲವು ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಿದೆ. ಸರಕಾರಿ ಕೆಲಸಕ್ಕೆ ತಯಾರಿ ನಡೆಸುತ್ತಿರುವವರಿಗೆ ಇದೀಗ ಸುವರ್ಣಾವಕಾಶ ಸಿಗುತ್ತಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಅಡಿಯಲ್ಲಿ 2022 ರ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು. ಖಾಲಿ ಇರುವ 3000 ಭೂ ಮಾಪಾಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಹತೆ ಮಟ್ಟ ಸರಿಹೊಂದುವ ವಿಧ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.
ಇಲಾಖೆ ಹೆಸರು: ಕಂದಾಯ ಇಲಾಖೆ ಹುದ್ದೆಗಳು ಭೂ ಮಾಪಕರು ಒಟ್ಟು ಹುದ್ದೆಗಳು 3000 ಅರ್ಜಿ ಸಲ್ಲಿಸುವ ಬಗೆ ಆನ್ಲೈನ್. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗ, ಬಿಟೆಕ್ ಸಿವಿಲ್, ಡಿಪ್ಲೊಮಾ ಸಿವಿಲ್,ITI, ಪದವಿ ಪೂರ್ವ ಡಿಪ್ಲೋಮ ಪದವಿ ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 65 ಮತ್ತು ಕನಿಷ್ಠ ವಯೋಮಿತಿ 18 ವರ್ಷ. ಆಯ್ಕೆ ಆದ ಅಭ್ಯರ್ಥಿಗಳು ಇಲಾಖೆ ನಿಗದಿ ಪಡಿಸಿದ ಹಾಗೆ ಪ್ರತಿ ಅಳತೆಗೆ ಅನುಗುಣವಾಗಿ ಸೇವಾ ಶುಲ್ಕ ನೀಡಲಾಗುತ್ತದೆ.
ಸಾಮಾನ್ಯ /ಆರ್ಥಿಕವಾಗಿ ಹಿಂದುಳಿದ/ಒಬಿಸಿ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿ ಎಲ್ಲರಿಗೂ 1000/- ರೂಪಾಯಿ ಆಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್ಲೈನ್ ಪರೀಕ್ಷೆ ನೀಡಬೇಕು ಅದರಲ್ಲಿ ತೇರ್ಗಡೆ ಹೊಂದಿದವರ ಆಯ್ಕೆ ಪಟ್ಟಿ ಮಾಡಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿರಿ. ಈಗಾಗಲೇ ಸರಕಾರಿ ಉದ್ಯಮಕ್ಕೆ ಪ್ರಯತ್ನ ಮಾಡುತ್ತಿರುವ ನಿಮ್ಮ ಗೆಳೆಯರಿಗೂ ಈ ಮಾಹಿತಿ ತಲುಪಿಸಿ.