ಕರ್ನಾಟಕ ಪ್ರಾಥಮಿಕ ತರಗತಿಗಳಿಗೆ ೧೫,೦೦೦ ಶಿಕ್ಷಕರ ನೇಮಕಾತಿ. ಎಷ್ಟಿದೆ ಹುದ್ದೆ, ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ.

2,849

ಉದ್ಯೋಗದ ನಿರೀಕ್ಷೆಯಲ್ಲಿರುವ ಕರ್ನಾಟಕದ ಜನತೆಗೆ ಸರ್ಕಾರ ಸಿಹಿ ಸುದ್ದಿಯನ್ನು ಹೊರಡಿಸಿದೆ. ತನ್ನ ರಾಜ್ಯ ಪಾತ್ರದಲ್ಲಿ ಹೊರಡಿಸಿರುವ ಗೆಜೆಟೆಡ್ ನೋಟಿಫಿಕೇಶನ್ ಪ್ರಕಾರ 15,000ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಹೇಳುತ್ತಿದ್ದ ಕಾರಣ ಈ ಅಧಿಸೂಚನೆ ಹೊರಡಿಸಿದೆ. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ವಿದ್ಯಾರ್ಹತೆ ಏನು ಬನ್ನಿ ತಿಳಿಯೋಣ. 15000 ಹುದ್ದೆಗಳ ಪೈಕಿ ವಿಷಯವಾರು ಹುದ್ದೆಗಳ ವಿವರ ಹೀಗಿದೆ.

ಆಂಗ್ಲ ಭಾಷೆ ಶಿಕ್ಷಕರು 1500, ಗಣಿತ ವಿಷಯ, ಶಿಕ್ಷಕರು 6500, ಸಮಾಜ ವಿಜ್ಞಾನ ವಿಷಯ 5000, ಜೀವ ವಿಜ್ಞಾನ ವಿಷಯ 2000. ಪದವಿಯಲ್ಲಿ ಕನಿಷ್ಠ 50 ಶೇಕಡ ಅಂಕ ಪಡೆದಿರಬೇಕು ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ ವಿಷಯದಲ್ಲಿ 2 ವರ್ಷಗಳ ಡಿಪ್ಲೊಮ ಉತ್ತೀರ್ಣರಾಗಿರಬೇಕು. ಪದವಿಯಲ್ಲಿ ಕನಿಷ್ಠ 50 ಶೇಕಡ ಅಂಕಗಳೊಂದಿಗೆ ಉತ್ತೀರ್ಣರಾಗಿ ಇರಬೇಕು ಜೊತೆಗೆ ಬಿ.ಎಡ್ ಪದವಿ ಪಡೆದಿರಬೇಕು. ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ 50ಶೇಕಡ ಅಂಕ ಪಡೆದು ಉತ್ತೀರ್ಣ ಆಗಿರಬೇಕು ಮತ್ತು ಅದರ ಜೊತೆಗೆ 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷ ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.

ಸಮಾಜ ಪಾಠಗಳು ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ವರು ಸಮಾಜ ಪಾಠ ಸಮೂಹ ವಿಷಯಗಳಲ್ಲಿ ಒಂದಾದ ಇತಿಹಾಸ , ಅರ್ಥಶಾಸ್ತ್ರ , ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಮುಖ್ಯ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು. ಇಂದೆ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಉದ್ಯೋಗ ಪಡೆಯಲು ತಯಾರಿ ನಡೆಸಿ. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಶುಭವಾಗಲಿ.

Leave A Reply

Your email address will not be published.