ಕಲಿಯುಗ ಅಂತ್ಯ ಹೇಗಿರುತ್ತದೆ ಗೊತ್ತೇ? ಏನೆಲ್ಲಾ ನಡೆದು ಅಂತ್ಯವಾಗುತ್ತದೆ ಗೊತ್ತೇ?? ದುಸ್ಥಿತಿ ಹೇಗಿರಲಿಗೆ ಏನೆಲ್ಲಾ ಆಗಲಿದೆ ಗೊತ್ತೇ?

502

ನಮಸ್ಕಾರ ಸ್ನೇಹಿತರೇ ಈ ಯುಗಗಳು ಆಯಾ ಕಾಲಮಾನದ ಜನ ಜೀವನ ಶೈಲಿಯನ್ನು ಮತ್ತು ಜನರ ವ್ಯಕ್ತಿತ್ವ, ಆಸೆ ಲಾಲಸೆಗಳನ್ನು ತಿಳಿಸುತ್ತವೆ. ಒಂದೊಂದು ಯುಗ ಒಂದೊಂದು ರೂಪದಲ್ಲಿ ಅಂತ್ಯ ಕಾಣುತ್ತವೆ. ಅದೇ ರೀತಿ ಕಲಿಯುಗದ ಅಂತ್ಯ ಹೇಗಿರಲಿದೆ ಅನ್ನೋ ಈ ಸತ್ಯ ನಿಜಕ್ಕೂ ಕೂಡ ಬಹಳ ಕುತೂಹಲ ಮೂಡಿಸುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಈಗಾಗಲೇ ನಮಗೆ ನಾಲ್ಕು ಯುಗಗಳ ಬಗ್ಗೆಯೂ ತಿಳಿಸಿಕೊಡಲಾಗಿದೆ.

ಅವುಗಳೆಂದರೆ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕೊನೆಯದಾಗಿ ಕಲಿಯುಗ. ನಾವು ಈಗಾಗಲೇ ಕಳೆದ ಯುಗಗಳ ಬಗೆಗಿನ ಸಂಪೂರ್ಣ ಮಾಹಿತಿ ಅಂದರೆ ಅವುಗಳ ಆರಂಭ ಹಾಗೂ ಅಂತ್ಯಗಳ ಬಗ್ಗೆ ಕೆಲವು ಪ್ರಸಿದ್ಧ ಗ್ರಂಥಗಳಲ್ಲಿ ನೋಡಿ ತಿಳಿಯಬಹುದಾಗಿದೆ. ಕೊನೆಯದಾಗಿ ನಾವು ಇಂದು ಕಲಿಯುಗದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಕಳೆದ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಇಂದಿನ ಕಲಿಯುಗದ ಬಗ್ಗೆ ಪಾಂಡವರಿಗೆ ವಿವರಿಸಿದ್ದಾನೆ. ಹಾಗಾದ್ರೆ ಶ್ರೀ ಕೃಷ್ಣ ಹೇಳಿರುವ ಪ್ರಕಾರ ಕಲಿಯುಗದ ಅಂತ್ಯ ಹೇಗೆ ಇರಲಿದೆ ಎಂಬುದನ್ನ ತಿಳಿಯೋಣ.

ಶ್ರೀ ಕೃಷ್ಣನು ಪಾಂಡವರಿಗೆ ಕಲಿಯುಗದ ಆರಂಭ ಹಾಗೂ ಅಂತ್ಯದ ಬಗ್ಗೆ ಹೇಳಿರುವುದಾದರು ಏನು ಎಂದು ನೋಡುವುದಾದರೆ . ಈ ಕಲಿಯುಗವು ನಾಲ್ಕು ಲಕ್ಷದ ಮೂವತ್ತು ಸಾವಿರ ವರ್ಷಗಳ ಕಾಲಾವಧಿಯನ್ನು ಹೊಂದಿದೆ. ಸದ್ಯ ಈ ಕಲಿಯುಗ ಪ್ರಾರಂಭವಾಗಿ ಇಂದಿಗೆ ಕೇವಲ ಐದು ಸಾವಿರದ ನೂರು ಒಂದು ದಿನ ಮಾತ್ರ ಕಳೆದಿವೆ. ಹಾಗಾದರೆ ಇನ್ನೂ ಉಳಿದ ದಿನಗಳು ಹಾಗೂ ಕಲಿಯುಗದ ಅಂತ್ಯ ಅಂದರೆ ಕೊನೆಯ ದಿನಗಳು ಹೇಗಿರಲಿವೆ. ಈ ಕಲಿಯುಗದ ಅಂತ್ಯವೂ ಸಮೀಪಿಸುತ್ತಿದ್ದಂತೆ ಮಾನವನ ಆಯಸ್ಸು ಇಪ್ಪತ್ತಕ್ಕೆ ಇಳಿಯಲಿದೆಯಂತೆ. ಆಗ ತನ್ನ ಐದು ವರ್ಷಕ್ಕೆ ಮಹಿಳೆಯರು ಗರ್ಭಾವತಿಯಾಗಲಿದ್ದಾರೆಯಂತೆ.

ಹದಿನಾರು ವರ್ಷಕ್ಕೆ ಮುಪ್ಪು ಬರಲಿದೆ ಹಾಗೂ ಇಪ್ಪತ್ತು ವರ್ಷಕ್ಕೆ ಜನರು ತನ್ನ ಮರಣ ಕಂಡುಕೊಳ್ಳುತ್ತಾರೆ. ಹೇಗೆ ಪಾಪಿಗಳು ಹಾಗೂ ಪಾಪ ಕರ್ಮಗಳು ಹೆಚ್ಚಾಗುತ್ತಾ ಹೋಗುತ್ತದೆಯೋ ಹಾಗೆ ಮನುಷ್ಯನ ಶಕ್ತಿ, ಸೌಂದರ್ಯ, ಆಯಸ್ಸು ಕಡಿಮೆ ಆಗುತ್ತಾ ಹೋಗುತ್ತದೆ. ಇದರ ಜೊತೆ ಜೊತೆಗೆ ದೇಹದ ಆಕಾರ ಕೂಡ ಚಿಕ್ಕದಾಗುತ್ತಾ ಹೋಗುತ್ತದೆ. ಗೋ ಮಾತೆ ಎಂದು ಕರೆಸಿಕೊಳ್ಳುವ ಆಕಳು ಕೂಡ ಹಾಲು ಕೊಡುವುದನ್ನು ಕ್ರಮೇಣ ಕಡಿಮೆ ಮಾಡಿ ಕೊನೆಗೆ ನಿಲ್ಲಿಸಿ ಬಿಡುತ್ತದೆ. ಭೂಮಿಯಲ್ಲಿ ದವಸ- ಧಾನ್ಯಗಳು ಬೆಳೆಯಲು ಸಹ ಆಗುವುದಿಲ್ಲ. ಮರ – ಗಿಡಗಳು ಸಹ ಹಣ್ಣು ಹಂಪಲು ಬಿಡುವುದಿಲ್ಲ

ಕಾಲ ಕಾಲಕ್ಕೆ ಸರಿಯಾಗಿ ಮಳೆ ಆಗುವುದಿಲ್ಲ. ಮಹಾ ಭಾರತದಲ್ಲಿ ಹೇಳಿರುವ ಪ್ರಕಾರ, ಭೂಮಿಯ ತಾಪಮಾನ ಹೆಚ್ಚಾಗಿ ನದಿ ಸರೋವರಗಳ ನೀರು ಹಾವಿ ಆಗುತ್ತವೆ. ಹೀಗೆ ತಾಪಮಾನ ಹೆಚ್ಚಾಗಿ ಜನರು ವಾಸಿಸಲು ಕಷ್ಟ ಆಗುತ್ತದೆ. ನಂತರ ಭೂಮಿ ಸುಟ್ಟು ಕೆಂಪು ಕೆಂಡವಾಗುತ್ತದೆ. ಹೀಗೆ ಕಲಿಯುಗದ ಅಂತ್ಯವಾಗಲಿದೆ ಎಂದು ಶ್ರೀ ಕೃಷ್ಣನು ಪಾಂಡವರಿಗೆ ತಿಳಿಸಿದ್ದಾರೆ. ಈ ಕಲಿಯುಗದ ಅಂತ್ಯವಾದ ನಂತರ ಏನೂ ಎಂಬ ಪ್ರಶ್ನೆಗಳಿಗೂ ಸಹ ಪುರಾಣಗಳಲ್ಲಿ ಮಾಹಿತಿ ನೀಡಲಾಗಿದೆ. ಅದರ ಪ್ರಕಾರ, ಕಲಿಯುಗದ ಅಂತ್ಯದಲ್ಲಿ ಭೂಮಿ ತಾಪಮಾನ ಹೆಚ್ಚಾಗಿ ಸಂಪೂರ್ಣ ನದಿ ಸರೋವರ ಬತ್ತು ಹೋಗಿದ್ದವು.

ಇದಾದ ಬಳಿಕ ಸುಮಾರು ಹನ್ನೆರಡು ಸಾವಿರ ವರ್ಷಗಳ ಬಳಿಕ ಮತ್ತೆ ಮಳೆ ಆಗಿ ಭೂಮಿಯನ್ನು ತಂಪು ಮಾಡುತ್ತದೆ. ಇದೆ ಹೊಸ ಯುಗದ ಆರಂಭ ಕೂಡ ಆಗಿರುತ್ತದೆ ಅಂತೆ ಅದುವೇ ಸತ್ಯಯುಗ. ಹೀಗೆ ಕಲಿಯುಗ ಅಂತ್ಯವಾಗಿ ಹೊಸ ಯುಗದ ಆರಂಭಕ್ಕೆ ನಾಂದಿಯಾಗುತ್ತದೆ ಎಂದು ತಿಳಿಸಿದ್ದಾರೆ. ನಿಜಕ್ಕೂ ಕೂಡ ಈ ಕಲಿಯುಗದಲ್ಲಿ ನಾವು ಕಂಡು ಕಾಣಿರದ, ನೋಡಿ ಅನುಭವಿಸಲಾಗದ ಅನೇಕ ಸಂಗತಿಗಳನ್ನು ಕಂಡಿದ್ದೇವೆ. ಕಲಿಯುಗ ಅಂದ್ರೆ ಮೋಸದ ಯುಗ, ಜನರು ಅತಿ ಆಸೆ ವ್ಯಾಮೋಹದಿಂದಾಗಿ ತನ್ನ ರಕ್ತ ಸಂಬಂಧವನ್ನು ಕೂಡ ಕಳೆದುಕೊಂಡು ಕೇವಲ ಆಸೆ ಲಾಲಸೆಗಾಗಿ ಜೀವನ ನಡೆಸುತ್ತಾರೆ. ಇಂತಹ ಕಲಿಯುಗದ ಅಂತ್ಯ ಎಷ್ಟರ ಮಟ್ಟಿಗೆ ಭೀಕರವಾಗಿ ಇರಲಿದೆ ಅನ್ನೋದು ಮಾತ್ರ ಭಾರಿ ರೋಮಾಂಚನಕಾರಿ ಆಗಿದೆ.

Leave A Reply

Your email address will not be published.