ಕಲ್ಪತರು ನಾಡು ತುಮಕೂರು ಹೆಸರು ದೇಶವ್ಯಾಪಿ ಹೆಸರುವಾಸಿಯಾಗಿದೆ ಈ ಒಬ್ಬ ರೈತನಿಂದ. ಅಷ್ಟಕ್ಕೂ ಈ ವ್ಯಕ್ತಿ ಮಾಡಿದ್ದಾದರೂ ಏನು?
ಕಲ್ಪತರು ನಾಡು ಎಂದೇ ಹೆಸರುವಾಸಿಯಾಗಿರುವ ತುಮಕೂರಿನ ರೈತ ತನ್ನ ಜಿಲ್ಲೆ ಹಾಗು ನಮ್ಮ ರಾಜ್ಯದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯದಿದ್ದಾರೆ. ಪ್ರತಿ ವರ್ಷ ರೈತರು ಬೆಳೆ ಇಲ್ಲದೆ ಕಂಗಾಲಾಗಿರುವ ಈ ಸಂಧರ್ಭದಲ್ಲಿ ತುಮಕೂರುನ ಲಕ್ಶ್ಮಣ ಎನ್ನುವ ರೈತರೊಬ್ಬರು ಭರ್ಜರಿ ಬೆಳೆ ಬೆಳೆಯುವ ಮೂಲಕ ರಾಷ್ಟೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ತುಮಕೂರಿನ ಲಕ್ಷ್ಮಣ ಅನ್ನುವ ರೈತ ಮಾಡಿದ್ದಾದರೂ ಏನು ಅಂತೀರಾ? ಇಲ್ಲಿದೆ ನೋಡಿ ರೈತನ ಸಾಧನೆ.
ಲಕ್ಷ್ಮಣ ಎನ್ನುವ ಹಿರಿಯ ರೈತರು ಬೆಳೆದ ಹುಣಸೆ ಮರ ಇಡೀ ಭಾರತ ದೇಶದಲ್ಲಿಯೇ ವಿಶಿಷ್ಟ ಎಂದು ಹೆಸರುವಾಸುಯಾಗಿದೆ. ಪ್ರತಿ ವರ್ಷ ಗಣನೀಯವಾಗಿ ಹುಳಿ ಫಸಲು ಹೆಚ್ಚಾಗಿರುವ ಅಂಶ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಇದೀಗ ಈ ಹುಣಸೆ ಮರದ ತಳಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತುಮಕೂರಿನ ರೈತ ಲಕ್ಷ್ಮಣ ಅವರ ಹೆಸರನ್ನೇ ಇಟ್ಟು ಅವರಿಗೆ ಗೌರವ ಸಲ್ಲಿಸಿದೆ. ೬೦ವರ್ಷದ ರೈತರಾದ ಲಕ್ಷ್ಮಣ ಅವರು ಒಟ್ಟಾರೆ ೧.೫ ಎಕರೆ ಭೂಮಿ ಹೊಂದಿದ್ದಾರೆ. ಈ ಭೂಮಿಯಲ್ಲೂ ಒಟ್ಟು ೩೦ ಹುಣಸೆ ಮರಗಳನ್ನು ಬೆಳೆದಿದ್ದಾರೆ. ೪೦ ವರ್ಷಗಳ ಹಿಂದೇನೆ ೪ ಒಳ್ಳೆ ಹುಣಸೆ ಸಸಿಗಳನ್ನು ತಂದು ತಮ್ಮ ತೋಟದಲ್ಲಿ ನೆಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ೪ ಮರಗಳ ಪೈಕಿ ೨ ಮಾತ್ರ ಜೀವ ಪಡೆದವು ಅದರಲ್ಲಿ ಒಂದು ಇಡೀ ಭಾರತದ ಗಮನ ಸೆಳೆದಿದೆ. ಲಕ್ಷ್ಮಣ ಅವರ ಮಗ ಹೆಂಡತಿ ಅವರು ಕೂಡ ಈ ಹುಣಸೆ ಬೆಳೆಯುವಲ್ಲಿ ಸಹಕಾರ ನೀಡಿದ್ದಾರೆ ಎಂದು ಲಕ್ಷ್ಮಣ್ ಅವರು ಹೇಳಿದ್ದಾರೆ.ತೋಟಗಾರಿಕಾ ಸಂಶೋಧನೆ ಸಂಸ್ಥೆ ಈ ರೈತರ ಜೊತೆ ಒಪ್ಪಂದ ಮಾಡಿಕೊಂಡು ಕಸಿ ಮೂಲಕ ಬೆಳೆಸಿದ ಸಸಿಗಳ ಮಾರಾಟದಿಂದ ಬರುವ ೪೦% ಲಾಭವನ್ನು ಈ ರೈತನಿಗೆ ನೀಡುವುದಾಗಿ ಹೇಳಿದ್ದಾರೆ. ಏನೇ ಆಗಲಿ ಇಂತಹ ಮಾದರಿ ರೈತರು ಇನ್ನು ಕರ್ನಾಟಕದಲ್ಲಿ ಸಿಗಲಿ ಹಾಗೇನೇ ಸರಕಾರದಿಂದ ಇಂತಹ ರೈತರಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎನ್ನುವುದು ನಮ್ಮ ಆಶಯ.