ಕಾನ್ಸ್ಟೇಬಲ್ ಒಬ್ಬರು ಸಿನಿಮಾ ನೋಡಿ ಐಪಿಎಸ್ ಅಧಿಕಾರಿಯೇ ಆಗಬೇಕೆಂದು ಮೂರು ಸರ್ಕಾರಿ ನೌಕರಿ ಬಿಟ್ಟು ಕಥೆ ಇದು? ಮುಂದಕ್ಕೆ ಏನಾಯಿತು ಈ ಹುಡುಗನ ಕಥೆ?

721

ಜೀವನದಲ್ಲಿ ಉದ್ಯೋಗ ಪಡೆದು ಕೊಳ್ಳುವುದು ಎಲ್ಲರ ಕನಸು, ಅದರಲ್ಲೂ ಸರ್ಕಾರಿ ಉದ್ಯೋಗವೇ ಬೇಕೆಂದು ಹಗಲಿರುಳು ನಿದ್ದೆ ಬಿಟ್ಟು ಓದುವ ಜನರೂ ಇದ್ದಾರೆ. ಇಂತವರ ಮಧ್ಯೆ ಇದೀಗ ಮೂರು ಮೂರು ಸರ್ಕಾರಿ ನೌಕರಿಯ ಆಯ್ಕೆ ಬಂದಾಗಲೂ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಬೇಕು ಎಂಬ ಛಲದಿಂದ ಆ ಕೆಲಸಗಳನ್ನು ಕೈ ಚೆಲ್ಲಿದ ಹುಡುಗನ ಕಥೆ.

ಚಲನ ಚಿತ್ರಗಳು ಎಂದರೆ ಮನರಂಜನೆಗಾಗಿ ಮಾಡುವಂತಹದ್ದು. ಅದೆಷ್ಟೋ ಚಿತ್ರಗಳು ಜೀವನಾಧಾರಿತ ಆಗಿದ್ದರೆ ಕೆಲವೊಂದು ಕಾಲ್ಪನಿಕ ಕಥೆಗಳ ಆಧಾರದ ಮೇಲೆ ಇರುತ್ತದೆ. ಅದೇನೇ ಇರಲಿ ಕೆಲವರು ಸಿನೆಮಾಗಳನ್ನು ನೋಡಿ ಅವರಂತೆ ಆಗಬೇಕು ಎಂದು ಒಳ್ಳೆಯದಾದವರು ಇದ್ದಾರೆ ಕೆಟ್ಟ ದಾರಿಯಲ್ಲಿ ನಡೆದವರು ಇದ್ದಾರೆ. ಇಲ್ಲಿ ನಾವು ತಿಳಿಯಲು ಈ ಹೊರಟ ಈ ಹುಡುಗ ಸನ್ನಿ ಡಿಯೋಲ್ ಅವರ ಸಿನೆಮಾದಿಂದ ಪ್ರೇರಿತನಾಗಿ ತಾನು ಐಪಿಎಸ್ ಅಧಿಕಾರಿ ಆಗಬೇಕೆಂದು ಹಠ ಮಾಡಿ ಕುಳಿತ ಕಥೆ ಇದು.

ರಾಜಸ್ಥಾನದ ಜಯಪುರದ ಶ್ಯಾಮಪುರ ಎಂಬ ಹಳ್ಳಿಯ ಹುಡುಗ ಮನೋಜ್ ರಾವತ್, ಈತನೇ ಮೂರು ಮೂರು ಸರ್ಕಾರಿ ನೌಕರಿಯ ಅವಕಾಶ ಸಿಕ್ಕಾಗಲೂ ಕೈಚೆಲ್ಲಿ ಕುಳಿತ ಹುಡುಗ. ಕಲಿತ ಕೂಡಲೇ ಉದ್ಯೋಗದ ಅವಶ್ಯಕತೆ ಇದ್ದಾಗ 19 ವರ್ಷದ ಪ್ರಾಯದಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇರಿಕೊಳ್ಳುತ್ತಾನೆ. ವಿಧ್ಯಾಭ್ಯಾಸ ಹಾಗೆ ಮುಂದುವರೆಸಿ ಮುಂದಕ್ಕೆ ಕೋರ್ಟ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಸಿಕ್ಕಾಗ ಪೊಲೀಸ್ ವೃತ್ತಿ ಬಿಟ್ಟು ಆ ಕೆಲ್ಸಕ್ಕೆ ಸೇರಿಕೊಳ್ಳುತ್ತಾನೆ. ಮುಂದೆ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸಲು ಮುಂದಾಗುತ್ತಾನೆ.

ಸನ್ನಿ ಡಿಯೋಲ್ ಅಭಿನಯಿಸಿದ ಸಿನೆಮಾ ಇಂಡಿಯನ್ ನಲ್ಲಿ ಡಿಯೋಲ್ ಅವರ ಐಪಿಎಸ್ ಪಾತ್ರದಿಂದ ಪ್ರೇರೇಪಿತರಾದ ಇವರು ಕೂಡ ಐಪಿಎಸ್ ಅಧಿಕಾರಿ ಆಗಬೇಕು ಎಂದು ಛಲದಿಂದ ಪರೀಕ್ಷೆ ತಯಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇವರು ಮೂರು ಮೂರು ಸರ್ಕಾರಿ ನೌಕರಿಯನ್ನು ಬಿಟ್ಟರು. ಕೊನೆಗೂ ತಮ್ಮ ಕನಸಿನಂತೆ ಐಪಿಎಸ್ ಅಧಿಕಾರಿ ಆಗಿ ನೇಮಕ ಗೊಳ್ಳುತ್ತರೆ. ಇದಕ್ಕೆ ಅವರ ಪರಿಶ್ರಮ ಮತ್ತು ಸಿನಿಮಾದಿಂದ ಆದ ಪ್ರೇರೇಪಣೆ ಒಂದು ದೊಡ್ಡ ಶಕ್ತಿ ಎಂದರೆ ತಪ್ಪಾಗಲಾರದು.

Leave A Reply

Your email address will not be published.