ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ಯಮ. ಇಂದು ತಿಂಗಳಿಗೆ ೪೦ ಕೋಟಿ ಸಂಪಾದಿಸುತ್ತಿದ್ದಾರೆ. ಮನಸಿದ್ದರೆ ಮಾರ್ಗ ಎನ್ನುವುದಕ್ಕೆ ಇವರೇ ಉತ್ತಮ ಉದಾಹರಣೆ.

1,324

ಮನಸಿದ್ದರೆ ಮಾರ್ಗವಿದೆ ಎಂದು ನಮ್ಮಲ್ಲಿ ಬಂದಿರುವ ಗಾದೆ ಮಾತಾಗಿದೆ. ಅದನ್ನು ಕೆಲವರು ಸಾದಿಸಿ ತೋರಿಸಿದರೆ ಕೆಲವರು ಅರ್ಧದಲ್ಲಿಯೇ ತನ್ನ ಕೈಯಲ್ಲಿ ಆಗುವುದಿಲ್ಲ ಎಂದು ಬಿಟ್ಟು ಬಿಡುತ್ತಾರೆ. ಇಂದಿನ ಕಾಲದಲ್ಲಿ ಯಾವ ಉದ್ಯಮ ಬೇಕಾದರೂ ಮಾಡಬಹದು ಆದರೆ ಅದನ್ನು ಶ್ರದ್ದೆ ವಹಿಸಿ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ. ಈ ಕಾಲದಲ್ಲಿ ಇಂಟರ್ನೆಟ್ ನಲ್ಲಿ ಮಾಡಬಹುದಾದ ಉದ್ಯಮ ಬಹುತೇಕ ಯಶಸ್ವಿ ಆಗಿದೆ. ಅದಕ್ಕೆ ಇನ್ನೊಂದು ಉದಾಹರಣೆ ಭರತ್ ಖಾಲಿಯಾ ಎನ್ನುವವರು.

೨೦೧೫ ರಲ್ಲಿ ಗುರುಗ್ರಾಮ ಎನ್ನುವಲ್ಲಿ ಬೈನ್ ಎಂಡ್ ಕಂಪನಿ ಅಲ್ಲಿ ಕೆಲಸ ಮಾಡುತ್ತಿರುವಾಗ ಭರತ್ ಅವರು ಗ್ರಾಹಕರಿಗೆ ಒಳ್ಳೆ ಬೆಳೆಗೆ ಸಿಗುವ ವಸ್ತುಗಳ ಬಗ್ಗೆ ಯೋಚನೆ ಮಾಡುತ್ತಿದ್ದರು. ಈ ವಸ್ತುಗಳನ್ನು ಡಿಜಿಟಲ್ ಸೇವೆ ಮುಕಾಂತರ ಜನರಿಗೆ ಸಿಗುವ ಹಾಗೆ ಮಾಡಬೇಕು ಎನ್ನುವ ಆಲೋಚನೆ ಕೂಡ ಬಂದಿತ್ತು. ಮೊಬೈಲ್ ಹಾಗು ಟಿವಿ ಗಳಂತಹ ವಸ್ತುಗಳು ಉತ್ತಮ ಮಾರುಕಟ್ಟೆ ಹೊಂದಿತ್ತು ಅದೇ ರೀತಿ ಡಿಜಿಟಲ್ ವಲಯದಲ್ಲಿ ದೊಡ್ಡ ಕಾರೋಬಾರು ಕೂಡ ಆಗುತಿತ್ತು. ಆದರೆ ಗೃಹೋಪಯೋಗಿ ವಸ್ತುಗಳಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇದೆ ಕಾರಣಕ್ಕೆ ತನ್ನ ಮೇಲೆ ಬಲವಾದ ನಂಬಿಕೆ ಇಟ್ಟು ೨೦೧೫ ರಲ್ಲಿ Lifelong Online ಎನ್ನುವ ಹೊಸ ಉದ್ಯಮಕ್ಕೆ ನಾಂದಿ ಹಾಡಿದರು. ಇವರ ಈ ಉದ್ಯಮಕ್ಕೆ ತನ್ನ ಹಳೆ ಕಾರ್ಪೊರೇಟ್ ಸಂಸ್ಥೆಯ ಸಹೋದ್ಯೋಗಿಗಳಾದ ವರುಣ್ ಗ್ರೋವರ್ ಹಾಗು ಅತುಲ್ ರಹೇಜಾ ಕೂಡ ಸೇರಿಕೊಂಡರು. ಜನರಿಗೆ ಗೃಹ ಉಪಯೋಗಿ ವಸ್ತುಗಳನ್ನು ಸಮಂಜಸ ಬೆಲೆಯಲ್ಲಿ ನೀಡುವುದು ಭರತ್ ಅವರ ಉದ್ದೇಶವಾಗಿತ್ತು. ಅದಕ್ಕಾಗಿ ತನ್ನ ಇನ್ನಿಬ್ಬರು ಪಾರ್ಟ್ನರ್ ಜೊತೆ ಗುಡಿ ಮೊದಲ ಬಾರಿಗೆ ಮಿಕ್ಸರ್ ಅನ್ನು ಮಾರುಕಟ್ಟೆ ಗೆ ಬಿಟ್ಟರು. ಮುಂದಿನ ೫ ವರ್ಷಗಳಲ್ಲಿ ಗೃಹೋಪಯೋಗಿ ವಸ್ತುಗಳ ಉತ್ಪಾದಿಸಲು ಶುರು ಮಾಡಿದರು. ಇದು ಐದೇ ವರ್ಷದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುವ ಉದ್ಯಮವಾಗಿ ಹೆಸರುವಾಸಿಯಾಯಿತು.

೨೦೧೯ ರಲ್ಲಿ ಭರತ್ ಹಾಗು ತನ್ನ ತಂಡ ೪೦ ಕೋಟಿ ಬಂಡವಾಳ ಪಡೆಯಿತು. ಇಂದು ಈ ಮೂವರ ತಂಡ ಒಟ್ಟು ೬೦ ಮಂದಿಯ ತಂಡವಾಗಿ ಬೆಳೆದಿದೆ. ಪೀಕ್ ಸೀಸನ್ ಅಲ್ಲಿ Lifelong Online ೪೦ ಕೋಟಿ ಗು ಅಧಿಕ ಅಧಯ ಗಳಿಸುತ್ತದೆ. ಇದರಲ್ಲಿ ೩೩ ಪ್ರತಿಶತ ಅಧಯ ಬರುವುದು ಗೃಹೋಪಯೋಗಿ ವಸ್ತುಗಳ ಮಾರಾಟದಿಂದ ಉಳಿದಿದ್ದು ಜವಳಿ ಉದ್ಯಮದಿಂದ ಎಂದು ಭರತ್ ಹೇಳುತ್ತಾರೆ. ೨೦೨೫ ರ ಹೊತ್ತಿಗೆ ಇವರ ಈ ಉದ್ಯಮ ೧.೪೮ ಲಕ್ಷ ಕೋಟಿಗೆ ತಲುಪುವ ಆಶಯವಿದೆ. ಇವರ ಬಿಸಿನೆಸ್ ೨೦೧೯ ರಲ್ಲಿ ೭೬,೪೦೦ ಕೋತಿಯದ್ದಾಗಿತ್ತು. ತನ್ನ ಉದ್ಯಮ ಐಡಿಯಾ ಹಾಗು ಶ್ರಮದಿಂದ ಇವರು ಇಂದು ಉತ್ತಮ ಸ್ಥಾನದಲ್ಲಿ ಇದ್ದಾರೆ.

Leave A Reply

Your email address will not be published.