ಕಾಲೇಜು ಬಿಟ್ಟು ಉದ್ಯಮ ಪ್ರಾರಂಭಿಸಿದ ಈತ ಇಂದು ಸಂಪಾದಿಸುತ್ತಿದ್ದಾನೆ ಕೋಟ್ಯಂತರ ರೂಪಾಯಿಗಳನ್ನು.
ಜೀವನದಲ್ಲಿ ಸಾಲುಗಳು ಇದ್ದದ್ದೇ, ಆದರೆ ಆ ಸೋಲು ಜೀನದ ಅಂತ್ಯ ಆಗಬಾರದು ಬದಲಾಗಿ ಅದು ನಮ್ಮ ಯಶಸ್ವಿ ಜೀವನದ ಬುನಾದಿ ಆಗಿರಬೇಕು. ಹೌದು ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಹುದು. ಅದೆಷ್ಟೋ ಜನ ಸೋತೆವು ಎಂದು ಎಲ್ಲವನ್ನೂ ಬಿಟ್ಟು ಬಿಡುತ್ತಾರೆ. ಆದರೆ ಯಶಸ್ವಿ ಆದ ಎಲ್ಲರೂ ಹಲವಾರು ಬಾರಿ ಸೋತು ಸುಮ್ಮನೆ ಕುಳಿತವರಲ್ಲ ಬದಲಾಗಿ ಮತ್ತಷ್ಟು ಪ್ರಯತ್ನ ಮಾಡಿ ಮೇಲಕ್ಕೆ ಬಂದವರು. ಇಂದು ನಾವು ಅಂತಹುದೇ ಒಬ್ಬ ಸಾಧಕರ ಬಗ್ಗೆ ತಿಳಿಯೋಣ.
ಇವರ ಹೆಸರು ರಿತೇಶ್ ಅಗರ್ವಾಲ್ ಕಾಲೇಜು ಓದುತ್ತಿದ್ದ ಹುಡುಗ . ಸದಾ ಸ್ಟಾರ್ಟ್ ಅಪ್ ಬ್ಯುಸಿನೆಸ್ ಮ್ಯಾನ್ ಗಳ ಬಗ್ಗೆ ತಿಳಿಯುವುದರಲ್ಲಿ ಬಹಳ ಆಸಕ್ತಿ. ಅದೆಷ್ಟೋ ಕಾನ್ಫರೆನ್ಸ್ ಗಳಿಗೆ ಎಲ್ಲಿದ್ದರೂ ಹೋಗುತ್ತಿದ್ದ. ಹೀಗೆ ಇದರಿಂದೆಲ್ಲ inspire ಆಗಿ ತಾನು ಕೂಡ ಏನಾದರೂ ಮಾಡಬೇಕು ಎಂದು ಆತ ಯೋಚಿಸಿದ. ,19ನೆಯ ವಯಸ್ಸಿನಲ್ಲಿ ಮೇಚುರಿಟಿ ಇಲ್ಲ ಎನ್ನುವವರಿಗೆ ಈತ 19ನೆಯ ವಯಸ್ಸಿನಲ್ಲಿ ಏನೋ ದೊಡ್ಡ ಸಾಧನೆ ಮಾಡಲು ಹೊರಟಿದ್ದ. ಹೀಗೆ ಜನ್ಮ ತಾಳಿದ್ದು ” Oravel stays”. ಹೌದು 2012 ರೆಲ್ಲಿ ಇದನ್ನು ಸ್ಥಾಪನೆ ಮಾಡಿದ್ದರು. ಇವರ ತಲೆಯೊಳಗೆ ಇದ್ದದ್ದು ಒಂದೇ ಭಾರತದ ಹಲವಾರು ಕಡೆ ಬರಿ ಹೋಟೆಲ್ ಗಳೆ ತುಂಬಿದೆ ಹೀಗಿರುವಾಗ ಕಡಿಮೆ ಬೆಲೆಯಲ್ಲಿ ಜನಗಳಿಗೆ ಯಾಕೆ ಈ ಆ್ಯಪ್ ಮೂಲಕ ಒಡಗಿಸಬಾರದು ಎಂದು ಯೋಚಿಸಿ ಆರಂಭಿಸಿದ್ದರು.
ಹೀಗೆ ಈ ಪ್ರಯತ್ನ 2013ರಲ್ಲೀ ಅವರಿಗೆ 100000 ಡಾಲರ್ ತಿಯೆಲ್ ಸ್ಕಾಲರ್ ಷಿಪ್ ಸಿಕ್ಕಿತು. ಅತ್ಯುತ್ತಮ ಅಂಟ್ರೆಪ್ರೇನುರ್ ಎಂಬ ಬಿರುದಿನೊಂದಿಗೆ. ಆ ನಂತರ ಆತ ಹಿಂತಿರುಗಿ ನೋಡಲಿಲ್ಲ ತನ್ನ ವಿಧ್ಯಾಭ್ಯಾಸ ಮೊಟಕು ಗೊಳಿಸುವ ನಿರ್ಧಾರ ಮಾಡಿ ಇದನ್ನೇ ಮುಂದುವರೆಸಿದ ಈಗ ಅದು OYO ಎಂಬ ಹೆಸರಿನಿಂದ ಪ್ರಸಿದ್ದಿ ಆಗಿದೆ. ಹೌದು 2013ರಲ್ಲಿ ಇದಕ್ಕೆ OYO ಎಂದು ಮರುನಾಮಕರಣ ಮಾಡಲಾಯಿತು. ಈ ಕಂಪನಿ 2021ರಲ್ಲೀ 4157 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಈ 19 ವರ್ಷದಲ್ಲಿ ಸಾಧನೆ ಮಾಡಿದ ಹುಡುಗನೇ ಸಾಕ್ಷಿ.