ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮಗ ಚಿಕ್ಕಂದಿನಿಂದ ಚಾ ಮಾರಿಕೊಂಡು ಐಎಎಸ್ ಅಧಿಕಾರಿ ಆದ ಕಥೆ ಇದು?

649

ಬಡತನ ಎಂಬುವುದು ಎಲ್ಲರಿಗೂ ಇದೆ. ಬಡತನ ಎಂದು ಕೊರಗುತ್ತಾ ಕೂತು ಜೀವನ ವ್ಯರ್ಥ ಮಾಡಿಕೊಳ್ಳುವ ಜನರೇ ಹೆಚ್ಚು. ಅದನ್ನು ಎದುರಿಸಿ ಯಶಸ್ಸಿನ ಮೆಟ್ಟಿಲು ಏರುವವರು ಬಾರಿ ಕಡಿಮೆ. ಕೇವಲ ನಮ್ಮ ಹಣೆಬರಹ ನಂಬಿಕೆಯಲ್ಲಿ ಬದುಕಬಾರದು ಅದಕ್ಕೆ ತಕ್ಕುದಾದ ತಯಾರಿ ಕೂಡ ಮಾಡಬೇಕು. ಅದೇನೇ ಆಗಲಿ ಬಡತನ ಎಂಬ ಭೂತವನ್ನು ಮೆಟ್ಟಿ ನಿಂತರೆ ಯಶಸ್ಸು ಎಂಬ ಜಯ ನಿಮ್ಮ ಹೆಗಲ ಇರುತ್ತದೆ ಎಂಬುವುದಕ್ಕೆ ಈ ಒಬ್ಬ ವ್ಯಕ್ತಿಯ ಸಾಹಸವೇ ಸರಿ.

ಅವರ ಹೆಸರು ಹಿಮಾಂಶು ಬಡಕುಟುಂಬದಲ್ಲಿ ಬೆಳೆದ ಇವರ ತಂದೆ ಕುಟುಂಬ ನಡೆಸಲು ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಸಂಜೆ ಹೊತ್ತಿಗೆ ಚಹಾ ಕೂಡ ಮಾರಾಟ ಮಾಡುತ್ತಿದ್ದರು. ಹಿಮಾಂಶು ಅವರನ್ನು ಶಾಲೆಗೆ ಕಳುಹಿಸುವುದು ಅಷ್ಟೊಂದು ಸುಲಭದ ವಿಷಯ ಆಗಿರಲಿಲ್ಲ. ಹೊಟ್ಟೆಗೆ ಇಲ್ಲದ ಆ ಸಮಯದಲ್ಲಿ ಹೇಗಾದರೂ ತನ್ನ ಮಗನನ್ನು ಕಲಿಸಬೇಕೆಂಬ ಛಲದಿಂದ ಶಾಲೆಗೆ ಕಳುಹಿಸುತ್ತಿದ್ದರು. ಹಿಮಾಂಶು ಕೂಡ 70 ಕಿಮೀ ದೂರವನ್ನು ಕ್ರಮಿಸುತ್ತಾ ಶಾಲೆಗೆ ಹೋಗಿ ಬಂದು ಸಂಜೆ ತಂದೆಯ ಟೀ ಸ್ಟಾಲ್ ನಲ್ಲಿ ಚಹಾ ಮಾರುತ್ತಿದ್ದರು.

ಹೀಗೆ ವಿಧ್ಯಾಭ್ಯಾಸ ಮುಂದುವರೆಸಿ ಇತರ ಮಕ್ಕಳಿಗೆ ಟ್ಯುಷನ್ ನೀಡುತ್ತಾ ಬ್ಲಾಗ್ ಬರೆಯುತ್ತಾ ಅಲ್ಪ ಸ್ವಲ್ಪ ಹಣ ಸಂಪಾದಿಸಲು ಶುರು ಮಾಡಿದರು. ಆದರೆ ಅವರು ಹಣದ ಹಿಂದೆ ಬೀಳಲಿಲ್ಲ ಬದಲಾಗಿ ಸಮಾಜಕ್ಕೆ ಮಾದರಿ ವ್ಯಕ್ತಿ ಆಗಬೇಕಂದು ನಿರ್ಧರಿಸಿ ಐಎಎಸ್ ಆಗಬೇಕೆಂದು ಕನಸು ಕಾಣಲು ಶುರು ಮಾಡಿದರು. ಆ ಕನಸಿಗೆ ಪುಷ್ಟಿ ಎಂಬಂತೆ ಅವರು ಅದಕ್ಕೆ ಅಷ್ಟೇ ತಯಾರಿ ನಡೆಸುತ್ತಿದ್ದರು. ಅವರು ಅಲ್ಪ ಸ್ವಲ್ಪ ಹಣ ಸಂಪಾದಿಸಲು ಶುರು ಮಾಡಿದ ನಂತರ ತಂದೆಯನ್ನು ಅವಲಂಬಿಸಿ ಇರಲಿಲ್ಲ ಬದಲಾಗಿ ತಮ್ಮ ವಿಧ್ಯಾಭ್ಯಾಸ ದ ಕರ್ಚನ್ನು ತಾವೇ ನೋಡಿಕೊಳ್ಳುತ್ತಿದ್ದರು.

ಒಂದೇ ಪ್ರಯತ್ನಕ್ಕೆ ಫಲ ಸಿಗಲಿಲ್ಲ ಆದರೆ ಅವರು ಕುಗ್ಗದೆ ತಮ್ಮ ಪ್ರಯತ್ನ ಮುಂದುವರೆಸಿದರು. ಹೀಗೆ ಅವರ ಪ್ರಯತ್ನಕ್ಕೆ ಫಲ ಎಂಬಂತೆ ಮೂರನೇ ಬಾರಿಗೆ ತಮ್ಮ ಐಎಎಸ್ ಪರೀಕ್ಷೆ ಪಾಸ್ ಮಾಡಿಕೊಂಡರು. ಇದೀಗ ಐಪಿಎಸ್ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಈ ಒಂದು ಕಥೆ ಎಲ್ಲರಿಗೂ ಸ್ಫೂರ್ತಿ ಆಗಬೇಕು.

Leave A Reply

Your email address will not be published.